Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅತಿಥಿಗಳಿಗೆ, ಹಬ್ಬಕ್ಕೆ ಮೆರುಗು ತರುವ ರವೆ ಹಲ್ವಾ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
ಮನೆಯಲ್ಲಿ ಶುಭ ಕಾರ್ಯವಿದ್ದರೆ ಅಥವಾ ಹಬ್ಬವಿದ್ದರೆ ಆ ದಿನ ಮನೆಯಲ್ಲಿ ಸಿಹಿ ಮಾಡಿ ಸವಿಯಲು ಮುಂದಾಗುವುದು ಸಾಮಾನ್ಯ. ಇಂತಹ ಸ್ವೀಟ್‌ಗಳಲ್ಲಿ ಹೆಚ್ಚಾಗಿ ರವೆಯಿಂದ ಮಾಡುವ ಖಾದ್ಯಗಳು ಬಹಳ ಸಿಹಿಯಾಗಿರುತ್ತೆ, ಅದರಲ್ಲಿ ಥಟ್ ಅಂತ ಸಿಹಿ ಮಾಡಿ ಸವಿಯಲು ನೀವು ಮುಂದಾಗುವುದಾದರೆ ಹೆಚ್ಚಾಗಿ ರವೆ ಹಲ್ವಾ ಸುಲಭವಾಗಿ ಮಾಡಬಹುದಾಗಿದೆ.
ನೀವು ಕ್ಯಾರೆಟ್‌ನಿಂದ ಹಾಗೆ ಸಿಹಿ ಕುಂಬಳದ ಹಲ್ವಾ ಸೇರಿ ವಿವಿಧ ಬಗೆಯ ಹಲ್ವ ಸವಿದಿರಬಹುದು. ಈ ಎಲ್ಲಾ ಸಿಹಿಗಳು ಅದ್ಭುತ ರುಚಿಗೆ ಸಾಕ್ಷಿಯಾಗಿವೆ. ಅದರಲ್ಲೂ ಕ್ಯಾರೆಟ್ ಹಲ್ವಾ ಅಂದರೆ ಎಲ್ಲರಿಗೂ ಬಾಯಲ್ಲಿ ನೀರು ಬರುವುದು ಸಹಜ. ಹಾಗೆ ಈ ರವೆ ಹಲ್ವಾ ಮಾಡುವುದು ಬಹಳ ಸುಲಭ. ನೀವು ಹಬ್ಬದಲ್ಲಿ ಅಥವಾ ಮನೆಯೆ ಅತಿಥಿಗಳು ಬಂದಾಗ ಈ ರೀತಿಯ ರವೆ ಹಲ್ವಾ ಮಾಡಿ ನೀಡಬಹುದು.

ಹಾಗಾದ್ರೆ ನಾವಿಂದು ಈ ರವೆ ಹಲ್ವಾ ಮಾಡುವುದು ಹೇಗೆ?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರವೆ ಹಲ್ವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಚಿರೋಟಿ ರವೆ - ಅರ್ಧ ಕಪ್
- ತುಪ್ಪ
- ಸಕ್ಕರೆ
- ಬಾದಾಮಿ
- ಪಿಸ್ತಾ
- ಕೇಸರಿ
- ಏಲಕ್ಕಿ
ರವೆ ಹಲ್ವಾ ಮಾಡುವ ವಿಧಾನವೇನು?
ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಕಪ್ ಅಳತೆಯ ನೀರು ಹಾಕಿ 1 ಅಳತೆಯ ಸಕ್ಕರ ಹಾಕಿಕೊಳ್ಳಬೇಕು. ನಂತರ ಇದಕ್ಕೆ ಕತ್ತರಿಸಿಕೊಂಡಿರುವ ದಾಬಾಮಿ, ಪಿಸ್ತಾ, ಏಲಕ್ಕಿ ಪುಡಿ, ಕೇಸರಿ ದಳ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. 10 ನಿಮಿಷಗಳ ಕಾಲ ಇದನ್ನು ಕುದಿಸಿಕೊಳ್ಳಬೇಕಾಗುತ್ತದೆ. ಈಗ ಇನ್ನೊಂದು ಕಡೆ ಮತ್ತೊಂದು ಪಾತ್ರೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಿಸಿಯಾದಾಗ ಇದಕ್ಕೆ ರವೆ ಹಾಕಿ.
ಚಿರೋಟಿ ರವೆಯನ್ನು ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಹುರಿದುಕೊಳ್ಳಬೇಕು. ರವೆಯು ಕಪ್ಪಾಗಲು ಬಿಡಬೇಡಿ, ಹಾಗೆ ಕೈ ಆಡಿಸುತ್ತಾ ಚೆನ್ನಾಗಿ ಹುರಿದುಕೊಳ್ಳಬೇಕು. ಇದರಿಂದ ಘಮ ಘಮ ಸುವಾಸನೆ ಬರುತ್ತದೆ. ನಂತರ ಇದಕ್ಕೆ ಬಿಸಿಯಾದ ನೀರು ಹಾಕಿಕೊಳ್ಳಿ. ಈಗ ಕುದಿಯುತ್ತಿರುವ ಸಕ್ಕರೆ ನೀರನ್ನು ಸಹ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುದಿಬರಲು ಬಿಡಿ.
ನಂತರ ಮುಚ್ಚಳ ಮುಚ್ಚಿ ಗಟ್ಟಿಯಾಗುವವರೆಗೂ ಬಿಡಬೇಕು. 2 ರಿಂದ 3 ನಿಮಿಷದಲ್ಲಿ ಇದು ಗಟ್ಟಿಯಾಗುತ್ತದೆ. ಸ್ವಲ್ಪ ಗಟ್ಟಿಯಾದಾಗ ಮುಚ್ಚಳ ತೆಗೆದು ತಿರುಗಿಸಿಕೊಳ್ಳುತ್ತಾ ಇರಬೇಕು. ನಂತರ 2 ನಿಮಿಷ ಸಣ್ಣ ಉರಿಯಲ್ಲಿ ಬಿಟ್ಟು ಆಗಾಗ ಮಿಕ್ಸ್ ಮಾಡಿ. ಇದು ಗಟ್ಟಿಯಾಗುತ್ತಾ ಬರುತ್ತದೆ. ನಿಮಗೆ ಯಾವ ಹದಕ್ಕೆ ಬೇಕೋ ಆಗ ಒಲೆ ಆಫ್ ಮಾಡಿಕೊಳ್ಳಿ. ಆಫ್ ಮಾಡಿದ ನಂತರ ಮುಚ್ಚಳ ಮುಚ್ಚಿ ಹಾಗೆಯೇ ಬಿಡಿ.
ಇಷ್ಟಾದರೆ ನಿಮ್ಮ ಮುಂದೆ ರವೆ ಹಲ್ವಾ ರೆಡಿಯಾಗುತ್ತದೆ. ಅದರ ಪರಮಳದಿಂದ ನಿಮ್ಮ ಬಾಯಲ್ಲಿ ನೀರು ಬರುತ್ತಿರುತ್ತದೆ. ನೀವು ಕೂಡ ಮನೆಯಲ್ಲಿ ಈ ರೀತಿಯಾಗಿ ಹಲ್ವಾ ಮಾಡಿ ನೋಡಿ. ಅದರ ರುಚಿಗೆ ನೀವು ಫಿದಾ ಆಗುತ್ತೀರಿ. ಇದೇ ಮಾದರಿಯಲ್ಲಿಯೇ ನೀವು ಕ್ಯಾರೆಟ್ ಹಲ್ವಾ ಸಹ ಮಾಡಬಹುದು. ಈ ಎರಡೂ ವಿಧಾನ ಕೂಡ ಬಹಳ ಸುಲಭವಾಗಿದೆ. ಮನೆಗೆ ಯಾರಾದರು ಅತಿಥಿಗಳು ಬಂದಾಗ ವಿಶೇಷ ದಿನದಲ್ಲಿ, ಹಬ್ಬದಲ್ಲಿ ಈ ರೀತಿಯ ಸಿಹಿ ಮಾಡಿ ಸವಿಯಬಹುದು, ಅದರ ರುಚಿಗೆ ನೀವು ಪದೇ ಪದೇ ಇದೇ ಸಿಹಿ ಮಾಡಿ ಸವಿಯಲು ಮುಂದಾಗುವುದು ಖಚಿತ.



Click it and Unblock the Notifications
