Latest Updates
-
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ
ದೀಪಾವಳಿಗೆ ಮಾಡಿ ಬೊಂಬಾಟ್ ರುಚಿಯ ರವೆ ಹಲ್ವಾ..! ಮಾಡೋದು ಹೇಗೆ ನೋಡಿ!
ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹಿಂದೂಗಳಿಗೆ ದೀಪಾವಳಿ ಅತ್ಯಂತ ಅಡಗರದಿಂದ ಆಚರಿಸುವ ಹಬ್ಬವಾಗಿದೆ. ದೇಶದ ಎಲ್ಲಾ ಮೂಲೆಯಲ್ಲಿಯೂ ದೀಪಾವಳಿ ಆಚರಿಸುತ್ತಾರೆ. ದೀಪಾವಳಿ ಎಂದರೆ ಹೊಸತನದ ಹಬ್ಬ, ಬೆಳಕು ತರುವ ಹಬ್ಬವಾಗಿದೆ. ದೀಪಾವಳಿಯಲ್ಲಿ ಎರಡು ಮೂರು ಬಗೆಯ ಸಿಹಿ ತಿಂಡಿಗಳ ಮಾಡುವುದು ಸಾಮಾನ್ಯ.
ದೀಪಾವಳಿ ವರ್ಷದ ಕೊನೆಯ ಹಬ್ಬವಾಗಿದೆ. ಇದಾದ ಬಳಿಕ ಹಿಂದೂಗಳಿಗೆ ದೊಡ್ಡ ಹಬ್ಬ ಬರುವುದು ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಹೀಗಾಗಿ ಈ ಹಬ್ಬದಂದು ಸಡಗರ ಹೆಚ್ಚಾಗಿಯೇ ಇರುತ್ತದೆ. ಇನ್ನು ಹಬ್ಬದಲ್ಲಿ ಮಾಡುವ ಸಿಹಿ ತಿಂಡಿಗಳಲ್ಲಿ ದೀಪಾವಳಿಗೆ ಹೋಳಿಗೆ, ಕಜ್ಜಾಯ, ಕರ್ಜಿಕಾಯಿ ಸಾಮಾನ್ಯವಾಗಿ ಮಾಡಿಯೇ ಮಾಡುತ್ತಾರೆ.

ನಾವಿಂದು ದೀಪಾವಳಿಗೆ ಮಾಡಲಾಗುವ ರವೆಯಿಂದ ಮಾಡುವ ಹಲ್ವಾ ಕುರಿತಂತೆ ತಿಳಿದುಕೊಳ್ಳೋಣ. ರವೆ ಹಲ್ವಾ ಬಾಯಲ್ಲಿ ಇಟ್ಟರೆ ಕರಗುವಂತಹ ರುಚಿ ರುಚಿಯ ಸಿಹಿಯಾಗಿದೆ. ಮಾಡುವುದು ಕೂಡ ತುಂಬಾನೆ ಸುಲಭ. ಹೀಗಾಗಿ ಕಡಿಮೆ ಸಮಯದಲ್ಲಿ, ಕಡಿಮೆ ವಸ್ತುಗಳ ಬಳಸಿ ಅತ್ಯುತ್ತಮ ರುಚಿಯ ಈ ರಬೆ ಹಲ್ವಾವನ್ನು ಮಾಡಿ ಸವಿಯುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರವೆ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳೇನು?, ರವೆ ಹಲ್ವಾ ಮಾಡುವ ವಿಧಾನವೇನು?, ರವೆ ಹಲ್ವಾ ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರವೆ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು
- ಚಿರೋಟಿ ರವೆ
- ತುಪ್ಪ
- ಸಕ್ಕರೆ
- ಬಾದಾಮಿ
- ಪಿಸ್ತಾ
- ಕೇಸರಿ ಬಣ್ಣ
- ಏಲಕ್ಕಿ
ರವೆ ಹಲ್ವಾ ಮಾಡುವುದು ಹೇಗೆ?
ಮೊದಲು ಒಲೆ ಮೇಳೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಲೋಟ ನೀರು ಹಾಕಿ 1 ಲೋಟ ಸಕ್ಕರೆ ಹಾಕಿಕೊಂಡು ಅದಕ್ಎಕ ಬಾದಾಮಿ ಹಾಗೂ ಪಿಸ್ತಾವನ್ನು ಕತ್ತರಿಸಿಕೊಂಡು ಹಾಕಿ. ಜೊತೆಗೆ ಏಲಕ್ಕಿ ಪುಡಿ, ಕೇಸರಿ ಬಣ್ಣ ಕೂಡ ಹಾಕಿಕೊಂಡ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಬೇಕು. ಸುಮಾರು 10 ನಿಮಿಷ ಕುದಿಸಿಕೊಳ್ಳಬೇಕು.
ಈ 10 ನಿಮಿಷದಲ್ಲಿ ಇನ್ನೊಂದು ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಅದಕ್ಕೆ ಚಿರೋಟಿ ರವೆ ಹಾಕಿ ಹುರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ ರವೆಯನ್ನು ಕೈ ಬಿಡದೆ ಕಲಸಿಕೊಳ್ಳುತ್ತಾ ಹುರಿದುಕೊಳ್ಳಬೇಕು. ರವೆಯಿಂದ ಒಳ್ಳೆಯ ಸುವಾಸನೆ ಬರುವಂತೆ ಹುರಿದುಕೊಳ್ಳಿ. ರವೆ ಹುರಿದುಕೊಂಡ ಬಳಿಕ ಇನ್ನೊಂದು ಒಲೆಯಲ್ಲಿ ಕುದಿಯುತ್ತಿರುವ ಸಕ್ಕರೆ ನೀರನ್ನು ಈ ರವೆಯ ಬಾಣಲೆಗೆ ಹಾಕಿಕೊಳ್ಳಿ.
ಬೇಳೆ ಹೋಳಿಗೆ ಮಾಡುವ ಸರಿಯಾದ ವಿಧಾನವೇನು ಗೊತ್ತಾ? ಹೀಗೆ ಮಾಡಿ ನೋಡಿ!
ಸಕ್ಕರೆ ಪಾಕದ ನೀರು ರವೆಗೆ ಬೆರೆತುಕೊಳ್ಳುವಂತೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಮುಚ್ಚಳ ಮುಚ್ಚಿ ಕುದಿಯಲು ಬಿಡಿ. ಈ ನಡುವೆ ಆಗಾಗ ಕೈ ಆಡಿಸುತ್ತಾ ಇರಿ. ಇದು ನಿಧಾನವಾಗಿ ಗಟ್ಟಿಯಾಗಲು ಆರಂಭಿಸುತ್ತದೆ.
ನಂತರ ಮುಚ್ಚಳ ತೆಗೆದು ನಿಧಾನವಾಗಿ ಮಿಕ್ಸ್ ಮಾಡುತ್ತಾ ಇರಿ. ಇದು ಉಪ್ಪಿಟ್ಟಿನಂತೆ ಹದವಾಗುತ್ತದೆ. ನಿಧಾನ ಉರಿಯಲ್ಲಿ ಇನ್ನು ಸ್ವಲ್ಪ ಹೊತ್ತು ಬಿಸಿ ಮಾಡುತ್ತಾ ಇರಿ. ಇದು ನಿಧಾನವಾಗಿ ಗಟ್ಟಿಯಾಗುತ್ತದೆ. ಅದು ಕೇಸರಿಬಾತ್ನಂತಹ ಹದಕ್ಕೆ ಬಂದಾಗ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರವೆ ಹಲ್ವಾ ರೆಡಿಯಾಗುತ್ತದೆ.
ಇದನ್ನು ಬಾಯಲ್ಲಿ ಇಟ್ಟರೆ ಸಾಕು ಕರಗಿಬಿಡುತ್ತದೆ. ಇದು ಹಿರಿಯರಿಗೆ ಮಕ್ಕಳಿಗೆ ಎಲ್ಲರಿಗೂ ಇಷ್ಟವಾಗುತ್ತದೆ. ನೀವು ಸಹ ಇದನ್ನು ದೀಪಾವಳಿಯದು ಮಾಡಿ ನೋಡಿ. ಎಷ್ಟು ರುಚಿ ನೀಡಲಿದೆ ಎಂಬುದನ್ನು ನೀವೆ ನೋಡಿ. ನಿಮಗೆ ಎಷ್ಟು ರವೆ ಬೇಕೋ ಅಷ್ಟು ರವೆಯಲ್ಲಿ ಮಾಡಿಕೊಳ್ಳಬಹುದು. ಸಕ್ಕರೆ ಹಾಗೂ ರವೆ ಸರಿಯಾದ ಅಳತೆಯಲ್ಲಿ ಹಾಕಿದರೆ ರುಚಿಯೂ ಬೊಂಬಾಟ್ ಆಗಿರಲಿದೆ.



Click it and Unblock the Notifications