Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನೀರು ದೋಸೆಯಂತೆ ಇದು ರವೆ ದೋಸೆ, ಕಲ್ಲಿಗೆ ಅಂಟಲ್ಲ, ಸುಲಭವಾಗಿ ಮಾಡಬಹುದು
ನೀವು ನೀರು ದೋಸೆಯಂತೆ ರವೆ ನೀರು ದೋಸೆ ಮಾಡಬಹುದು,ಈ ದೋಸೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಇದನ್ನು ಇನ್ಸ್ಟಾಂಟ್ ಆಗಿ ತಯಾರಿಸುವುದಾದರೆ ಅಕ್ಕಿಹಿಟ್ಟು ಬಳಸಿ ಮಾಡಬಹುದು, ಇಲ್ಲಾಂದ್ರೆ ಅಕ್ಕಿ ನೆನೆ ಹಾಕಿ ಮಾಡಬಹುದು. ದೋಸೆಗೆ ರುಬ್ಬಿದ ಮೇಲೆ ಇಟ್ಟು ಇಡಬೇಕಾಗಿಲ್ಲ ತಕ್ಷಣವೇ ಮಾಡಬಹುದು, ಬನ್ನಿ ಈ ರವೆ ದೋಸೆ ಮಾಡುವುದು ಹೇಗೆ ನೋಡೋಣ

ಬೇಕಾಗುವ ಸಾಮಗ್ರಿ
ಅಕ್ಕಿ ಹಿಟ್ಟು ಒಂದೂವರೆ ಕಪ್ ಅಥವಾ ಅಕ್ಕಿ
ಬೇಕಾಗುವ ಸಾಮಗ್ರಿ 1/ 2 ಕಪ್
ನೀರು 4 ಕಪ್
2 ಈರುಳ್ಳಿ ಚಿಕ್ಕದಾಗಿ ಕತ್ತರಿಸಿದ್ದು
ರುಚಿಗೆ ತಕ್ಕ ಉಪ್ಪು
ಹಸಿ ಮೆಣಸು
ಸ್ವಲ್ಪ ಕೊತ್ತಂಬರಿ ಸೊಪ್ಪು
ಎಣ್ಣೆ(ದೋಸೆ ಕಲ್ಲಿಗೆ ಸವರಲು)
ಮಾಡುವ ವಿಧಾನ
- ನೀವು ದೋಸೆಗೆ ಅಕ್ಕಿ ಬಳಸುವುದಾದರೆ ಅಕ್ಕಿಯನ್ನು 8 ಗಂಟೆ ನೆನೆ ಹಾಕಿ ನುಣ್ಣನೆ ರುಬ್ಬಿಕೊಳ್ಳಿ, ಅದೇ ಅಕ್ಕಿ ಹಿಟ್ಟು ಹಿಟ್ಟು ಬಳಸುವುದಾದರೆ ನುಣ್ಣನೆ ಪುಡಿ ಮಾಡಿದ ಅಕ್ಕಿ ಹಿಟ್ಟು ಬಳಸಬೇಕು.
- ಈಗ ದೊಡ್ಡ ಬೌಲ್ಗೆ ರುಬ್ಬಿದ ಅಕ್ಕಿ ಹಿಟ್ಟು ಹಾಕಿ, ರವೆ ಸೇರಿಸಿ ತೆಳುವಾದ ದೋಸೆ ಹಿಟ್ಟು ಮಾಡಿಕೊಳ್ಳಿ
- ದೋಸೆ ಹಿಟ್ಟು ನೀರು ದೋಸೆಗೆ ಮಾಡುವ ಹಿಟ್ಟಿನಂತೆ ತೆಳುವಾಗಿರಬೇಕು
- ಈಗ ಅದಕ್ಕೆ ಈರುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು ತೆಳ್ಳಗೆ ಕತ್ತರಿಸಿ ಹಾಕಿ
- ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ.
- ದೋಸೆ ಹಿಟ್ಟು ಮಾತ್ರ ತೆಳುವಾಗಿರಬೇಕು, ಇಲ್ಲಾಂದ್ರೆ ಇನ್ನೂ ಸ್ವಲ್ಪ ನೀರು ಸೇರಿಸಬಹುದು.
ಈಗ ದೋಸೆ ಮಾಡಲು ದೋಸೆ ತವಾ ಬಿಸಿ ಮಾಡಬೇಕು, ದೋಸೆ ತವಾ ಬಿಸಿಯಾದಾಗ ಅದಕ್ಕೆ
ಎಣ್ಣೆ ಸವರಿ ದೋಸೆ ಹಿಟ್ಟು ಹಾಕಿ, ದೋಸೆ ಹಿಟ್ಟು ಹಾಕುವಾಗಲೇ ಹಿಟ್ಟು
ತೆಳಳಗಿರುವುದರಿಂದ ಅದೇ ಹರಡಿಕೊಳ್ಳುತ್ತದೆ.
ಈಗ ತವಾ ಬಾಯಿಮುಚ್ಚ 3-4 ನಿಮಿಷ ಬೇಯಿಸಿ
ದೋಸೆ ಬಂದಾಗ ಕಲ್ಲಿಂದ ಮೇಲೇಳುವುದು, ಆವಾಗ ತೆಗಿಯಿರಿ.
ರೆಡಿಯಾದ ದೋಸೆಯನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಲು ಸೂಪರ್ ಆಗಿರುತ್ತದೆ.
ಇತರ ಸಲಹೆ: ಇದಕ್ಕೆ ರವೆ ಹಾಕಿರುವುದರಿಂದ ಕಲ್ಲಿಗೆ
ಅಂಟಿಕೊಳ್ಳುವುದಿಲ್ಲ, ನೀರು ದೋಸೆ ಮಾಡಲು ಕಷ್ಟ ಅನ್ನುವವರು ಕೂಡ ಇದನ್ನು
ಮಾಡಬಹುದು.
ಈರುಳ್ಳಿ, ಹಸಿ ಮೆಣಸು ಹಾಕದೆಯೂ ಇದನ್ನು ಮಾಡಬಹುದು.
ಇದಕ್ಕೆ ಅಕ್ಕಿ ಜೊತೆಗೆ ತೆಂಗಿನಕಾಯಿ ಸೇರಿಸಿ ರುಬ್ಬಿಕೊಳ್ಳಬಹುದು. ರುಚಿ ಇನ್ನೂ
ಚೆನ್ನಾಗಿರಲಿದೆ.



Click it and Unblock the Notifications
