Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಥಟ್ ಅಂತ 15 ನಿಮಿಷದಲ್ಲಿ ರವೆ ಬರ್ಫಿ ಮಾಡಿ..! ಸಖತ್ ಸುಲಭದ ಸ್ವೀಟ್ ರೆಸಿಪಿ!
ಮನೆಯಲ್ಲಿ ನೀವು ಫ್ರೀ ಇದ್ದಾಗ ಇಲ್ಲವೆ ಅತಿಥಿಗಳು, ಶುಭ ಕಾರ್ಯ ಇದ್ದಾಗ ಸ್ವೀಟ್ ಮಾಡಿ ಸವಿಯುವುದು ಸಾಮಾನ್ಯ. ಹಾಗೆ ಎಲ್ಲಾ ಶುಭ ಕಾರ್ಯಕ್ಕೂ ಮುನ್ನ ಸಿಹಿ ಮೂಲಕ ಆರಂಭ ಮಾಡಿದರೆ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿ ಎಲ್ಲರ ಮನೆಯಲ್ಲೂ ಶುಭ ಕಾರ್ಯ, ಅತಿಥಿಗಳ ಆಗಮನದ ಆದಾಗಲು ಕೂಡ ಸ್ವೀಟ್ ಮಾಡುವುದು ಕಾಮನ್. ಹಾಗಾದ್ರೆ ಇಂತಹ ಸಮಯದಲ್ಲಿ ಯಾವ ಸ್ವೀಟ್ ಅನ್ನು ಮಾಡಬೇಕು?
ನೀವು ರವೆಯಿಂದ ಅದ್ಭುತ ರುಚಿಯ ಕೇಸರಿ ಬಾತ್ ಮಾಡಿರುತ್ತೀರಿ. ಮೃದುವಾಗಿ ಬಾಯಲ್ಲಿ ಇಟ್ಟರೆ ಕರಗುವಂತಹ ಕೇಸರಿಬಾತ್ ಮಾಡಿರುತ್ತೀರಿ. ಆದ್ರೆ ನಾವಿಂದು ಈ ರವೆಯಿಂದ ಅದ್ಭುತ ರುಚಿಯ ಹೊಸ ಬಗೆಯ ಬರ್ಫಿ ಮಾಡುವುದನ್ನು ತಿಳಿದುಕೊಳ್ಳೋಣ. ಈ ರೀತಿಯ ಸಿಹಿ ಅತಿಥಿಗಳು, ಮನೆಯ ಸದಸ್ಯರ ಬಾಯಲ್ಲೂ ನೀರು ತರಿಸುತ್ತೆ.

ಈ ಬರ್ಫಿ ಅತ್ಯಂತ ಮೃದುವಾಗಿ ಸ್ವಾದಿಷ್ಠವಾಗಿರುತ್ತೆ. ಒಮ್ಮೆ ಸವಿದರೆ ನೀವು ಮತ್ತೆ ಮತ್ತೆ ಸವಿಯಲು ಮುಂದಾಗುತ್ತೀರಿ. ಮಾಡೋದು ಕೂಡ ತುಂಬಾನೆ ಸುಲಭ. ಹಾಗಾದ್ರೆ ಈ ರವೆ ಬರ್ಫಿ ಮಾಡೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ರವೆ ಬರ್ಫಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರವೆಯಿಂದ ಮೃದುವಾದ ಬರ್ಫಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ರವೆ - 1 ಕಪ್
- ಸಕ್ಕರೆ - 3/4 ಕಪ್
- ಲವಂಗ - 5
- ಏಲಕ್ಕಿ (ಪುಡಿ) - 1/2 ಟೀಸ್ಪೂನ್
- ಗೋಡಂಬಿ
- ತುಪ್ಪ
- ಫುಡ್ ಕಲರ್
ರವೆಯಿಂದ ಮೃದುವಾದ ಬರ್ಫಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಳ್ಳಿ. 6 ಸ್ಪೂನ್ ತುಪ್ಪ ಹಾಕಿ ಬಳಿಕ ಇದಕ್ಕೆ ರವೆ ಹಾಕಿಕೊಂಡು 5 ನಿಮಿಷ ಫ್ರೈ ಮಾಡಿಕೊಳ್ಳಿ. ಘಮ ಘಮ ಎನ್ನುವಂತೆ ಇದು ಸುವಾಸನೆ ಬರಬೇಕು. ನೀವು ಇದಕ್ಕೆ ಪಲಾವ್ ಎಲೆ ಹಾಗೂ ಏಲಕ್ಕಿ ಹಾಕಿ ಹುರಿದುಕೊಳ್ಳಿ. ಈಗ 1 ಕಪ್ ರವೆಗೆ 2 ಕಪ್ ಬಿಸಿ ನೀರು ಹಾಕಿಕೊಳ್ಳಿ. ನಂತರ ಚೆನ್ನಾಗಿ ಕಲಸಿಕೊಳ್ಳಿ.
ಈಗ ಕೆಂಪು ಫುಡ್ ಕಲರ್ ಹಾಕಿಕೊಂಡು ಕಲಸಿಕೊಳ್ಳುತ್ತಾ ಈಗ ಗೋಡಂಬಿ, ಹಾಗೂ ಏಲಕ್ಕಿ ಪುಡಿಯನ್ನು ಹಾಕಿಕೊಳ್ಳಿ. ನಂತರ ರವೆಯನ್ನು ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಿ. ಅನಂತರ ಪಲಾವ್ ಎಲೆ ತೆಗೆದು ಬದಿಗಿಟ್ಟುಕೊಳ್ಳಿ. ಈಗ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ಹಾಗೆಯೇ ಬಿಡಿ. ಸಕ್ಕರೆ ಚೆನ್ನಾಗಿ ಕರಗುವಂತೆ ಬಿಸಿ ಮಾಡಿಕೊಳ್ಳಿ.
ಈಗ ಒಂದು ತಟ್ಟೆಗೆ ತುಪ್ಪ ಸವರಿಕೊಳ್ಳಿ, ನಂತರ ಈ ರವೆಯನ್ನು ಒಲೆಯಿಂದ ಇಳಿಸಿ ನೇರವಾಗಿ ಆ ತಟ್ಟೆಗೆ ಹಾಕಿಕೊಳ್ಳಿ. ಅದನ್ನು ಒಂದು ಚೆನ್ನಾಗಿ ಪ್ರೆಸ್ ಮಾಡಿಕೊಳ್ಳಿ. ನಂತರ ತಣ್ಣಗಾಗಲು ಬಿಡಿ. ಒಂದು ಗಂಟೆಯಾದರು ಬಿಡಿ. ನಂತರ ನಿಮಗೆ ಯಾವ ಆಕಾರ, ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಇಷ್ಟಾದರೆ ರುಚಿರುಚಿಯ ರವೆ ಬರ್ಫಿ ಸವಿಯಲು ಸಿದ್ಧವಾಗುತ್ತೆ. ಸುಲಭವಾಗಿ 15 ನಿಮಿಷದಲ್ಲಿ ಇದನ್ನು ಮಾಡಬಹುದು.



Click it and Unblock the Notifications
