Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
5 ನಿಮಿಷದಲ್ಲಿ ಮಾಡಬಹುದು ರವೆ ಬರ್ಫಿ..! ಹೇಗೆ ನೋಡಿ.!
ಹಬ್ಬದ ದಿನಗಳು ಬರುತ್ತಿವೆ ಅಂದ್ರೆ ಸಿಹಿ ತಿಂಡಿ ಸೀಸನ್ ಆರಂಭ. ಪ್ರತಿ ಮನೆಯಲ್ಲೂ ಒಂದಲ್ಲಾ ಒಂದು ಸಿಹಿ ತಿಂಡಿ ಗಮಗಮಿಸಲು ಆರಂಭವಾಗುತ್ತೆ. ಚಕ್ಕುಲಿ, ಎಳ್ಳುಂಡೆ, ಕಡುಬು, ಕಡಲೇಕಾಯಿ ಉಂಡೆ, ಹರಳು ಉಂಡೆ, ಪಂಚಕಜ್ಜಾಯ ಸಹಿತ ಹಲವಾರು ಖಾದ್ಯಗಳು ಮನೆ-ಮನೆಯಲ್ಲಿ ಕಾಣಸಿಗುತ್ತವೆ.
ಇನ್ನು ಯುಗಾದಿ ಹಬ್ಬದ ಸಂದರ್ಭದಲ್ಲಿ ಬರ್ಫಿ ತಿಂಡಿಗೆ ಬಾರಿ ಬೇಡಿಕೆ ಬರುತ್ತೆ. ಬರ್ಫಿಯಲ್ಲೂ ಹತ್ತಾರು ವಿಧಗಳಿವೆ, ಅದರ ರುಚಿಯಂತೂ ವರ್ಣಿಸಲು ಸಾಧ್ಯವಿಲ್ಲ. ಇನ್ನು ಬರ್ಫಿ ಮಾಡುವುದು ಸಹ ಸುಲಭವೇ. ಅಂಗಡಿಯಲ್ಲಿ, ಬೇಕರಿಯಲ್ಲಿ ಸಿಗುವ ಬರ್ಫಿಗಳನ್ನು ಮನೆಯಲ್ಲೂ ಸುಲಭವಾಗಿ ಮಾಡಬಹುದು.

ನಾವು ಕಾಯಿ ಬರ್ಫಿ, ಹಾಲಿನ ಬರ್ಫಿ, ಕೋವಾ ಬರ್ಫಿ, ಕಾಜು ಬರ್ಫಿ, ಪಿಸ್ತಾ ಬರ್ಫಿ, ಚಾಕಲೇಟ್ ಬರ್ಫಿ ಹೀಗೆ ಹತ್ತಾರು ವಿಧದ ಬರ್ಫಿ ತಿಂದಿರುತ್ತೇವೆ. ಆದ್ರೆ ನಾವಿಂದು ರವೆ ಬರ್ಫಿ ಮಾಡುವ ಕುರಿತು ತಿಳಿಯೋಣ, ರವೆ ಬರ್ಫಿಯು ಅತ್ಯಂತ ಮೃದು ಮತ್ತು ರುಚಿಕರವಾಗಿರುತ್ತೆ. ಹಾಗಾದರೆ ರವೆ ಬರ್ಫಿ ಮಾಡಲು ಬೇಕಾಗುವ ಪದಾರ್ಥಗಳೇನು? ಈ ರವೆ ಬರ್ಫಿ ಮಾಡುವ ಪಾಕವಿಧಾನ ಏನು? ಎಷ್ಟು ಸಮಯದಲ್ಲಿ ರಬೆ ಬರ್ಫಿಯನ್ನು ಮಾಡಬಹುದು ಎಂಬ ಕುರಿತು ನಾವಿಂದು ತಿಳಿಯೋಣ.
ರವೆ ಬರ್ಫಿ ಮಾಡಲು ಬೇಕಾದ ಪದಾರ್ಥಗಳೇನು?
- ರವಾ - 1 ಕಪ್
- ಸಕ್ಕರೆ - 3/4 ಕಪ್
- ಪಲಾವ್ ಎಲೆಗಳು - 4
- ಲವಂಗ- 5
- ಏಲಕ್ಕಿ - 1/2 ಟೀಸ್ಪೂನ್ (ಸಣ್ಣಗೆ ಪುಡಿ ಮಾಡಿರುವುದು)
- ಗೋಡಂಬಿ - 10
- ತುಪ್ಪ - 5 ಚಮಚ
- ಆಹಾರ ಬಣ್ಣ (ಕೆಂಪು) - 1/4 ಟೀಸ್ಪೂನ್
ರವೆ ಬರ್ಫಿ ಮಾಡುವುದು ಹೇಗೆ?
ಒಂದು ಪಾತ್ರೆಯನ್ನು ಒಲೆಯಲ್ಲಿಟ್ಟು ಸ್ವಲ್ಪ ತುಪ್ಪ ಹಾಕಿಕೊಳ್ಳಿ. ಇದಕ್ಕೆ ರವೆ ಹಾಕಿಕೊಂಡು 5ರಿಂದ 6 ನಿಮಿಷ ಫ್ರೈ ಮಾಡಿಕೊಳ್ಳಿ. ಉಪ್ಪಿಟ್ಟು ಮಾಡಲು ರವೆ ಸಿದ್ಧಪಡಿಸುವ ರೀತಿಯಲ್ಲೇ ಇದಕ್ಕೂ ಹುರಿದುಕೊಳ್ಳಿ. ರವ ಕಪ್ಪಾಗದಂತೆ ಎಚ್ಚರ ವಹಿಸಿ. ಇದಕ್ಕೆ ಏಲಕ್ಕಿ ಹಾಗೂ ಪಲಾವ್ ಎಲೆಗಳನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
ನಂತರ 1 ಕಪ್ ರವೆಗೆ 2 ಕಪ್ ಬಿಸಿ ನೀರು ಹಾಕಿಕೊಂಡು ಮಿಕ್ಸ್ ಮಾಡಿ. ತಣ್ಣಿರು ಬಳಸದಿರುವುದು ಉತ್ತಮ. ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಅದಕ್ಕೆ ಕಲರ್ ಪುಡಿ ಹಾಕಿ ಮಿಕ್ಸ್ ಮಾಡಿ. ಬಳಿಕ ಇದಕ್ಕೆ ಗೋಡಂಬಿ ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಆದ ಬಳಿಕ ಪಲಾವ್ ಎಲೆಗಳನ್ನು ತೆಗೆದು ಹಾಕಿ. ನಂತರ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ 3 ನಿಮಿಷ ಮುಚ್ಚಳ ಮುಚ್ಚಿ ಇಡಿ.
ನಂತರ ಒಂದು ಪ್ಲೇಟ್ಗೆ ತುಪ್ಪ ಇಲ್ಲವೆ ಎಣ್ಣೆ ಹಚ್ಚಿಕೊಂಡಿರಿ. ಈಗ ಒಲೆ ಆರಿಸಿ ಮಿಕ್ಸ್ ಮಾಡಲಾದ ಬರ್ಫಿಯನ್ನು ಪ್ಲೇಟ್ಗೆ ಹಾಕಿಕೊಂಡು ಚೆನ್ನಾಗಿ ಒತ್ತಿ ನಿಮಗೆ ಯಾವ ಆಕಾರ ಬೇಕೋ ಹಾಗೆ ಮಾಡಿ. ಬಳಿಕ ಚಾಕುವಿನಿಂದ ನಿಮಗೆ ಬೇಕಾದ ಶೇಪ್ಗೆ ಕಟ್ ಮಾಡಿಕೊಳ್ಳಿ. ಬಳಿಕ ಅರ್ಧ ಗಂಟೆ ಬಿಟ್ಟು ಸವಿಯಬಹುದು. ಇಲ್ಲವೆ ಬಿಸಿ ಬಿಸಿಯಾಗಿಯೂ ಸವಿಯಬಹುದು. ಇನ್ನು ರೆಸಿಪಿ ಮಾಡುವಾಗ ನೀವು ಪಲಾವ್ ಎಲೆ ಬಳಸಬೇಕು ಎಂದೇನಿಲ್ಲ. ಹಾಗೆಯೂ ಮಾಡಬಹುದು.
ಹೀಗಾಗಿ ಇದು ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ರೆಸಿಪಿಯಾಗಿದೆ. ಸವಿಯಲು ಬಹಳ ರುಚಿಕರವಾಗಿರುತ್ತೆ. ಹಬ್ಬದ ಸಮಯದಲ್ಲಿ ಕಡಿಮೆ ಸಮಯದಲ್ಲಿ ಇದನ್ನು ಮಾಡಬಹುದು. ಅಥವಾ ಯಾರಾದರು ಮನೆಗೆ ಬಂದಾಗ ಅವರಿಗೂ ತಕ್ಷಣ ಮಾಡಿ ಸವಿಯಲು ನೀಡಬಹುದು.



Click it and Unblock the Notifications
