Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಬ್ಬದ ಸಂಭ್ರಮ ಹೆಚ್ಚಿಸುವ ಸಿಹಿ ಸಿಹಿಯಾದ ಕಡಲೆ ಬೇಳೆ ರವೆ ಪಾಯಸ ಮಾಡಿ!
ಹಬ್ಬ ಅಂದ ಕೂಡಲೇ ಎಲ್ಲರ ಮನೆಯಲ್ಲೂ ಸಂತಸ, ಸಂಭ್ರಮವಂತು ಇದ್ದೆ ಇರಲಿದೆ. ಇನ್ನು ಹಬ್ಬದಲ್ಲಿ ವಿಶೇಷ ಸಿಹಿ ತಿಂಡಿಗಳ ಮಾಡಿ ಸವಿಯೋದು ಎಲ್ಲರ ಮನೆಯಲ್ಲೂ ಸಾಮಾನ್ಯ. ಹಾಗೆ ಈ ಸಂಕ್ರಾಂತಿಯ ಸಮಯದಲ್ಲಿ ಮನೆಯಲ್ಲಿ ಅತ್ಯುತ್ತಮ ರುಚಿಯ ಖಾದ್ಯಗಳ ಮಾಡಿ ಸವಿಯೋದು ಎಲ್ಲರಿಗೂ ಇಷ್ಟವಾಗುವ ವಿಚಾರ.
ಇನ್ನು ಹಬ್ಬದ ಸಿಹಿ ಅಂದ್ರೆ ಅಲ್ಲೊಂದು ಪಾಯಸ ಇರಲೇಬೇಕು. ಪಾಯಸ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಬಾಯಿ ಚಪ್ಪರಿಸಿ ಪಾಯಸ ಸವಿಯುತ್ತಾರೆ. ಊಟದ ರುಚಿ ದುಪ್ಟಟ್ಟಾಗಬೇಕಾದರೆ ಹಬ್ಬದ ಊಟದಲ್ಲಿ ಪಾಯಸ ಇರಲೇಬೇಕು. ಪಾಯಸ ಹತ್ತು ಹಲವು ಬಗೆಯಲ್ಲಿ ಮಾಡಬಹುದಾದ ರುಚಿ ರುಚಿ ಸಿಹಿಯಾಗಿದೆ. ಪಾಯಸ ಮಾಡುವ ಹಲವು ವಿಧಾನಗಳಲ್ಲಿ ನಾವಿಂದು ಸುಲಭವಾಗಿ ಹಾಗೆ ದುಪ್ಪಟ್ಟು ರುಚಿಯ ಈ ಪಾಯಸ ಮಾಡುವ ಕುರಿತು ತಿಳಿಯೋಣ.

ನಾವಿಂದು ಹಬ್ಬದಲ್ಲಿ ಮಾಡುವಂತಹ ವಿಶೇಷ ರುಚಿ ನೀಡುವ ರವೆ ಪಾಯಸ ಕುರಿತಾಗಿ ತಿಳಿದುಕೊಳ್ಳೋಣ. ರವೆ ಪಾಯಸ ರುಚಿ ರುಚಿಯಾಗಿ ಮನೆಯ ಎಲ್ಲಾ ಸದಸ್ಯರು ಸಹ ಸವಿಯಬಹುದಾದ ರುಚಿಕರ ರೆಸಿಪಿ. ಇದನ್ನು ಮಾಡೋದು ಸಹ ಬಹಳ ಸುಲಭ. ಈ ಬಿಸಿಲಿನ ಸಮಯದಲ್ಲಿ ರವೆಯ ಪಾಯಸ ದೇಹಕ್ಕೂ ಕೂಡ ತಂಪು ತರಲಿದೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ.
ರವೆ ಪಾಯಸ ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ರವೆ ಪಾಯಸ ಮಾಡಲು ಬೇಕಾಗುವ ವಸ್ತುಗಳು
- ರವೆ
- ಕಡಲೆ ಬೇಳೆ
- ತುಪ್ಪ
- ಏಲಕ್ಕಿ ಪುಡಿ
- ಬೆಲ್ಲ
ರವೆ ಪಾಯಸ ಮಾಡುವ ವಿಧಾನವೇನು?
ಮೊದಲಿಗೆ ಸ್ವಲ್ಪ ಕಡಲೆ ಬೇಳೆ ತೊಳೆದು ನೆನೆಸಿಡಿ. ಪಾಯಸ ಮಾಡುವ 1 ಗಂಟೆ ಮೊದಲು ಇದನ್ನು ನೆನೆಸಿಟ್ಟರೆ ಸಾಕಾಗುತ್ತದೆ. ಈಗ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ನೆನೆಸಿಟ್ಟಿದ್ದ ಕಡಲೆ ಬೇಳೆಯನ್ನು ಹಾಕಿ ಬೇಯಿಸಿಕೊಳ್ಳಿ. 2ರಿಂದ 3 ನಿಮಿಷ ಬೇಯಿಸಿಕೊಂಡರೆ ಸಾಕಾಗುತ್ತದೆ.
ಅನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಳಿಕ ರವೆಯನ್ನು ಹಾಕಿ ಹುರಿದುಕೊಳ್ಳಿ. ಸಣ್ಣ ಉರಿಯಲ್ಲಿ ರವೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ರವೆಯಿಂದ ಘಮ ಘಮ ಎನ್ನುವ ಅರೋಮ ಬರಬೇಕು. ಉಪ್ಪಿಟ್ಟು ರವೆಯನ್ನು ಇದಕ್ಕೆ ಬಳಸಿ. ಈಗ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಬೆಲ್ಲ ಹಾಕಿ ನೀರು ಹಾಕಿಕೊಂಡು ಕರಗಲು ಬಿಡಿ. ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಹಾಕಿಕೊಳ್ಳಿ.
ಪಾಕ ಮಾಡಿಕೊಳ್ಳಬೇಡಿ ಕರಗಿದರೆ ಸಾಕು. ನಂತರ ಬೆಲ್ಲದ ನೀರನ್ನು ಜರಡಿ ಹಿಡಿದು ಮತ್ತೆ ಅದೇ ಪಾತ್ರೆಗೆ ಹಾಕಿಕೊಳ್ಳಿ. ಈಗ ಬೇಯಿಸಿಕೊಂಡಿರುವ ಕಡಲೆ ಬೇಳೆಯನ್ನು ಸಹ ಇದಕ್ಕೆ ಹಾಕಿಕೊಳ್ಳಿ. ನೀರು ಸಮೇತವಾಗಿ ಕಡಲೆ ಬೇಳೆ ಹಾಕಿಕೊಂಡು ಕುದಿಬರಲು ಬಿಡಿ. ಕುದಿಬರಲು ಆರಂಭಿಸಿದಾಗ ಈಗ ಹುರಿದುಕೊಂಡಿದ್ದ ರವೆಯನ್ನು ಇದಕ್ಕೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ರವೆಗಿಂತ ಮೇಲೆ ನೀರು ಇರಬೇಕು. ನೀರು ಕಡಿಮೆಯಾಗಿದ್ದರೆ ಮತ್ತೆ ಹಾಕಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಈಗ ಮೊದಲೇ ಹುರಿದುಕೊಂಡ ಗೋಡಂಬಿ, ದ್ರಾಕ್ಷಿ ಸಹ ಹಾಕಿಕೊಂಡು ಮಿಕ್ಸ್ ಮಾಡಿ. ಪಾಯಸದ ಹದಕ್ಕೆ ಬಂದಾಗ ಒಲೆ ಆಫ್ ಮಾಡಿಕೊಂಡು ಸ್ವಲ್ಪ ತಣ್ಣಗಾಗಲು ಬಿಡಿ. ಕೊನೆಯಲ್ಲಿ ಬೇಕಾದರೆ ತುಪ್ಪ ಅಥವಾ ಗಟ್ಟಿಯಾದರೆ ಬಿಸಿ ಹಾಲು ಹಾಕಿಕೊಳ್ಳಬಹುದು. ಇಷ್ಟಾದರೆ ರುಚಿ ರುಚಿಯ ಪಾಯಸ ಸಿದ್ದವಾಗುತ್ತೆ.



Click it and Unblock the Notifications
