Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಾಯಿಗೆ ಹಾಕಿದರೆ ಕರಗುವ ರಸಗುಲ್ಲ ಸ್ವೀಟ್..! ಮಾಡೋದು ತುಂಬಾ ಸುಲಭ!
ಹಬ್ಬ, ಕಾರ್ಯಕ್ರಮ, ಶುಭ ಕಾರ್ಯ ಇದ್ದರೆ ಮನೆಯಲ್ಲಿ ಸಿಹಿ ತಿಂಡಿ ಇರಲೇಬೇಕು. ಅಂದು ನೆಂಟರು, ಬಂಧುಗಳಿಗೆ ಸಿಹಿ ತಿಂಡಿ ಮಾಡಿ ಬಡಿಸಬೇಕು. ಇನ್ನು ಸಿಹಿ ತಿಂಡಿ ಅಂದಕೂಡಲೆ ನಮ್ಮ ಕಣ್ಣ ಮುಂದೆ ಹತ್ತಾರು ತಿಂಡಿಗಳು ನೆನಪಿಗೆ ಬರುತ್ತವೆ. ಆದರೆ ಸುಲಭವಾಗಿ ಮಾಡುವುದು ಯಾವುದು ಎಂಬುದೆ ಗೊಂದಲ ಮೂಡಿಸುತ್ತೆ.
ಸ್ವೀಟ್ ಮಾಡೋದು ಅಂದ್ರೆ ಅಲ್ಲಿ ಹತ್ತಾರು ಪದಾರ್ಥಗಳಿರಬೇಕು ಎಂಬುದೇನು ಇಲ್ಲ. ಕೆಲವೇ ವಸ್ತು ಬಳಸಿಯು ಬಾಯಿ ಚಪ್ಪರಿಸಿ ಸವಿಯಬಹುದಾದ ಸ್ವೀಟ್ ಮಾಡಬಹುದು. ಇನ್ನು ನೀವು ರಸಗುಲ್ಲ ಸಿಹಿಯ ರುಚಿ ನೋಡಿರಬಹುದು. ರಸಗುಲ್ಲ ಮಾಡುವುದು ಸುಲಭವೇ ಆದರೆ ಸರಿಯಾದ ಸಿದ್ಧತೆ ಇರಬೇಕು.

ಹಾಗಾದ್ರೆ ಮನೆಯಲ್ಲಿ ನಾವು ಸುಲಭವಾಗಿ ರಸಗುಲ್ಲ ಸ್ವೀಟ್ ಮಾಡುವುದು ಹೇಗೆ? ರಸಗುಲ್ಲ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಹೇಗೆ ಮಾಡಿದರ ಅದರ ರುಚಿ ಚೆನ್ನಾಗಿರುತ್ತದೆ ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ
ರಸಗುಲ್ಲ ಮಾಡಲು ಬೇಕಾಗು ಪದಾರ್ಥಗಳು
- ಹಾಲು - ಮುಕ್ಕಾಲು ಲೀಟರ್
- ಸಕ್ಕರೆ- 200 ಗ್ರಾಮ್
- ನಿಂಬೆ ಹಣ್ಣ - ಒಂದು
ರಸಗುಲ್ಲ ಮಾಡುವುದು ಹೇಗೆ?
ಮುಕ್ಕಾಲು ಲೀಟರ್ ಹಾಲನ್ನು ಕಾಯಿಸಿಕೊಳ್ಳಿ. 5 ನಿಮಿಷದ ಬಳಿಕ ಹಾಲು ಕುದಿಯಬೇಕು. ಈ ವೇಳೆ ಅದಕ್ಕೆ ಹುಳಿಯನ್ನು ಹಿಂಡಬೇಕು. ಹುಳಿ ಹಾಕಿದ ಬಳಿಕ ಅದನ್ನು ಚೆನ್ನಾಗಿ ಕಲಸಿಕೊಳ್ಳಿ. 3 ನಿಮಿಷ ಬಿಟ್ಟ ಬಳಿಕ ಹಾಲು ಒಡೆದು ಕೊಳ್ಳುತ್ತದೆ. ಹಾಲು ಒಡೆದ ಬಳಿಕ ಅದನ್ನು ಒಂದು ಬಟ್ಟೆಯಲ್ಲಿ ಸೋಸಿಕೊಂಡು ಪನೀರ್ ಪ್ರತ್ಯೇಕವಾಗಿ ಮಾಡಿಕೊಳ್ಳಿ.
ಈ ಪನೀರ್ ಅನ್ನು ಚೆನ್ನಾಗಿ ತೊಳೆದುಕೊಳ್ಳಿ. ಪನೀರ್‌ನಲ್ಲಿರುವ ಹುಳಿ ಹಾಗೂ ನೀರಿನ ಅಂಶ ಬಿಡುವಂತೆ ಮಾಡಿಕೊಳ್ಳಿ. ಈಗ ಪಾಕ ಮಾಡಿಕೊಳ್ಳಿ. ಒಂದು ಬೌಲ್‌ಗೆ ನೀರು ಹಾಗೂ ಸಕ್ಕರೆ ಹಾಕಿ ಒಲೆ ಮೇಲೆ ಇಡಿ. ತೆಳುವಾದ ಇಲ್ಲವೆ ದಪ್ಪವಾದ ಪಾಕ ಮಾಡಿಕೊಳ್ಳಬೇಡಿ. ಕೈಗೆ ಅಂಟಿಕೊಳ್ಳುವಂತಹ ಪಾಕ ಮಾಡಿಕೊಳ್ಳಿ. ಗುಲಾಬ್ ಜಾಮೂನ್ ಮಾಡಲು ಬೇಕಾಗುವಂತಹ ಪಾಕ ಮಾಡಿಕೊಳ್ಳಿ.
ಈಗ ಬಟ್ಟೆಯಿಂದ ಪನೀರ್ ತೆಗೆದು ಪಾತ್ರೆಗೆ ಹಾಕಿಕೊಳ್ಳಿ. ಅದನ್ನು ಚೆನ್ನಾಗಿ ಪುಡಿ ಮಾಡಿಕೊಳ್ಳಿ ಜೊತೆಗೆ ಚಪಾತಿ ಹಿಟ್ಟಿನಂತೆ ಅದನ್ನು ಒತ್ತಿಕೊಳ್ಳಿ. ಇದು ಮೃದುವಾಗುವವರೆಗೂ ಚೆನ್ನಾಗಿ ನಾದಿಕೊಳ್ಳಿ. ಬಳಿಕ ಕೈಯಲ್ಲಿ ಸಣ್ಣ ಸಣ್ಣ ಉಂಡೆಗಳ ಮಾಡಿಕೊಳ್ಳಿ.
ಇನ್ನೊಂದೆಡೆ ಒಲೆ ಮೇಲೆ ಇಟ್ಟಿರುವ ಪಾಕ ಕುದಿಯುತ್ತಿರುವಾಗ ಉಂಡೆ ಮಾಡಿಕೊಂಡಿರುವ ರಸಗುಲ್ಲವನ್ನು ಪಾಕಕ್ಕೆ ಹಾಕಿ. ಉರಿಯನ್ನು ಸಣ್ಣಗೆ ಇಡಿ. 10 ರಿಂದ 12 ನಿಮಿಷ ಹಾಗೆಯೆ ಮುಚ್ಚಳ ಮುಚ್ಚಿ ಇಡಿ. ಬಳಿಕ ತೆಗೆದು ಮುಚ್ಚಳ ತೆಗೆದರೆ ನಿಮ್ಮ ಮುಂದೆ ರಸಗುಲ್ಲ ರೆಡಿಯಾಗಿರುತ್ತದೆ.
ಈ ರಸಗುಲ್ಲವನ್ನು ಬಾದಾಮಿ ಹಾಲಿನ ರೀತಿ ಹಾಲನ್ನು ರೆಡಿ ಮಾಡಿಕೊಂಡು ಡ್ರೈ ಫ್ರೂಟ್ಸ್ ಜೊತೆಗೆ ಸವಿಯಬಹುದು. ರಸಗುಲ್ಲ ಅತ್ಯಂತ ಆರೋಗ್ಯಕರ ಸಿಹಿತಿಂಡಿಯಾಗಿದೆ. ಏಕೆಂದರೆ ಇದನ್ನು ಮಾಡಲು ಎಣ್ಣೆ ಯಾವುದೇ ರೀತಿಯ ಮಸಾಲೆಯು ಬಳಸುವುದು ಬೇಡ. ಹೀಗಾಗಿ ಹಾಲಿನಲ್ಲಿ ಇದನ್ನು ಮಾಡುವುದರಿಂದ ಆರೋಗ್ಯಕ್ಕೆ ಉತ್ತಮವಾಗಿರುತ್ತೆ. ಸಕ್ಕರೆಯನ್ನ ಕಡಿಮೆ ಬಳಸಿದಷ್ಟು ಉತ್ತಮ.



Click it and Unblock the Notifications
