Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
2 ನಿಮಿಷದಲ್ಲಿ ರಸಂ ಮಾಡೋದು ಹೇಗೆ? ಮೊದಲೇ ಪೇಸ್ಟ್ ರೆಡಿ ಮಾಡಿ!
ಊಟದೊಂದಿಗೆ ತಿಳಿಸಾರು ಮಾಡಿ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ತಿಳಿಸಾರು ಇದ್ದರೆ ಊಟದ ರುಚಿ ದುಪ್ಪಟ್ಟಾಗೋದು ಖಚಿತ. ಹಾಗೆ ತಿಳಿಸಾರು ಈ ಚಳಿಗಾಲಕ್ಕೆ ಹೇಳಿ ಮಾಡಿಸಿದ ಖಾದ್ಯ. ರುಚಿ ರುಚಿಯಾದ ಬಿಸಿ ಬಿಸಿಯಾದ ಈ ತಿಳಿಸಾರನ್ನು ಸವಿಯಲು ಎಲ್ಲರು ಇಷ್ಟಪಡುತ್ತಾರೆ. ಹಲವರಿಗೆ ರಸಂ ಇಲ್ಲದಿದ್ದರೆ ಊಟ ಮುಗಿದಂತೆಯೇ ಅನಿಸೋದಿಲ್ಲ.
ಇನ್ನು ಕೆಲವು ಹೋಟೆಲ್ಗಳಲ್ಲಿ ನೀಡುವಂತಹ ರಸಂ ಅಂದ್ರೆ ಬಾಯಲ್ಲಿ ನೀರು ಬರಬಹುದು. ಆ ರುಚಿಯ ರಸಂ ನೀಡಿದ್ರೆ ನೀವು ಅನ್ನದೊಂದಿಗೆ ಅಲ್ಲ ಬದಲಾಗಿ ಹಾಗೆಯೇ ಕುಡಿಯಲು ಸಹ ಇಷ್ಟಪಡುತ್ತೀರಿ. ಬ್ರಾಹ್ಮಣ ಶೈಲಿಯಲ್ಲಿ ಹಾಗೆ ದೇವಾಲಯದಲ್ಲಿ ನೀಡುವ ಊಟದೊಂದಿಗೆ ಸವಿಯಲು ನೀಡುವ ರಸಂ ರುಚಿ ಎಲ್ಲರಿಗೂ ಇಷ್ಟವಾಗುತ್ತೆ.

ಹಾಗೆ ರಸಂ ಅನ್ನು ಬಹಳ ಸುಲಭವಾಗಿ ಮಾಡಬಹುದು ಹಾಗೆ ಹಲವು ಬಗೆಯ ರಸಂ ಸಹ ನೀವು ಮಾಡಿ ಸವಿದಿರಬಹುದು. ಹಾಗೆ ಈ ರಸಂ ಅನ್ನು ಕಡಿಮೆ ಸಮಯದಲ್ಲಿಯೂ ಮಾಡಿ ಮುಗಿಸಬಹುದು. ಅದ್ರಲ್ಲೂ 2 ನಿಮಿಷದೊಳಗೆ ಮಾಡಿ ಮುಗಿಸಬಹುದಾದ ರಸಂ ಕುರಿತಾಗಿ ನಾವಿಂದು ತಿಳಿಯೋಣ.
ರಸಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ರಸಂ ಪುಡಿ ಮಾಡಿ ಇಡುವ ಸುಲಭದ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ರಸಂ ಪುಡಿ ಮಾಡಿ ರಸಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಕಾಳು ಮೆಣಸು
- ಜೀರಿಗೆ
- ಹುಣಸೆಹಣ್ಣು
- ಬೆಳ್ಳುಳ್ಳಿ
- ಒಣ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಟೊಮೊಟೊ
- ಎಣ್ಣೆ
- ಸಾಸಿವೆ
- ಇಂಗು
- ಬೆಲ್ಲ
- ಅರಿಶಿಣದ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
ರಸಂ ಪುಡಿ ಮಾಡಿ ರಸಂ ಮಾಡುವ ಸುಲಭದ ವಿಧಾನವೇನು?
ಮೊದಲಿಗೆ ಒಂದು ಮಿಕ್ಸಿ ಜಾರ್ಗೆ ಜೀರಿಗೆ, ಕಾಳು ಮೆಣಸು, ಬೆಳ್ಳುಳ್ಳಿ, ನಿಂಬೆ ಗಾತ್ರದ ಹುಣಸೆ ಹುಳಿ, ಒಣ ಮೆಣಸು, ಟೊಮೆಟೋ, ಕೊತ್ತಂಬರಿ ಸೊಪ್ಪು, ನೀರು ಹಾಕಿಕೊಂಡು ಮಸಾಲೆಯನ್ನು ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಂಡು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಿಸಿಯಾಗಲು ಬಿಡಿ.
ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಇಂಗು, ಕರಿಬೇವು, ಒಣ ಮೆಣಸು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಬಿಟ್ಟು ಅದಕ್ಕೆ ಮೊದಲು ರುಬ್ಬಿಕೊಂಡಿದ್ದ ಮಸಾಲೆಗಳನ್ನು ಹಾಕಿಕೊಂಡು 1 ಲೀಟರ್ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಬೆಲ್ಲದ ಪುಡಿ ಅಥವಾ ಪುಡಿ ಮಾಡಿದ ಬೆಲ್ಲವನ್ನು ಹಾಕಿ, ಅರಶಿಣ ಕೂಡ ಹಾಕಿಕೊಂಡು ಮಿಶ್ರಣ ಮಾಡಿ ಉರಿ ದೊಡ್ಡದು ಮಾಡಿ ಕುದಿಬರಲು ಬಿಟ್ಟುಕೊಳ್ಳಿ. ಮುಚ್ಚಳ ಮುಚ್ಚಿ ಕುದಿಬರಲು ಬಿಡಿ. ರಸಂ ಕುದಿಬರಲು ಆರಂಭಿಸಿದಾಗ ಘಮ ಘಮ ಎನ್ನುವ ಸುವಾಸನೆ ಬರಲಿದೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಲೆ ಆಫ್ ಮಾಡಿಕೊಳ್ಳಿ.
ಇಷ್ಟಾದರೆ ರುಚಿ ರುಚಿಯ ರಸಂ ಸಿದ್ದವಾಗುತ್ತೆ. ಮೊದಲು ಮಿಕ್ಸಿ ಜಾರ್ನಲ್ಲಿ ಮಾಡಿಕೊಂಡಿದ್ದ ಮಸಾಲೆ ಪೇಸ್ಟ್ ಅನ್ನು ಸ್ವಲ್ಪ ಹೆಚ್ಚು ಮಾಡಿಕೊಂಡಿಟ್ಟುಕೊಂಡಿದ್ದರೆ ಸುಲಭವಾಗಿ ಈ ರಸಂ ಬೇಕಾದಾಗ ಮಾಡಬಹುದು. ಫ್ರಿಡ್ಜ್ನಲ್ಲಿ 15 ದಿನ ಈ ಪೇಸ್ಟ್ ಇಡಬಹುದು. ಇದನ್ನು ಯಾವಾಗ ಬೇಕಾದರು ಒಗ್ಗರಣೆ ಹಾಕಿಕೊಳ್ಳುತ್ತಾ ರಸಂ ಮಾಡಲು ಬಳಸಬಹುದು, ಆಗ ಕೇವಲ 2 ನಿಮಿಷದೊಳಗೆ ರಸಂ ಸಿದ್ದವಾಗುತ್ತೆ, ನೀವು ಸಹ ಈ ವಿಧಾನದಲ್ಲಿ ಒಮ್ಮೆ ರಸಂ ಮಾಡಿ ಸವಿದು ನೋಡಿ.



Click it and Unblock the Notifications
