Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಇದಕ್ಕಿಂತ ಸುಲಭವಾಗಿ ರಸಂ ಮಾಡಲು ಸಾಧ್ಯವೇ ಇಲ್ಲ..! ಹೇಗೆ ನೋಡಿ.!
ಊಟದ ಜೊತೆ ಪಲ್ಯ ಇರಬೇಕು ಇಲ್ಲವೆ ಊಟಕ್ಕೆ ಒಳ್ಳೆಯ ಸಾಂಬಾರ್ ಇರಬೇಕು. ಹೀಗಿದ್ದರೆ ಆ ಊಟ ಸಿಕ್ಕಾಪಟ್ಟೆ ರುಚಿ ನೀಡಲಿದೆ. ಇನ್ನು ಊಟ ಕಂಪ್ಲೀಟ್ ಆಗಬೇಕು ಅಂದ್ರೆ ಅಲ್ಲಿ ಮೊಸರು ಇರಬೇಕು, ಇಲ್ಲವೆ ರುಚಿ ರುಚಿಯ ರಸಂ ಇದ್ದರೆ ಉತ್ತಮ. ರಸಂ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಒಂದು ವಿಶಿಷ್ಟ ರೀತಿಯ ಖಾದ್ಯ. ಯಾಕಂದ್ರೆ ರಸಂ ಇಲ್ಲದೆ ಕೆಲವರು ಊಟ ಮುಗಿಸೋದೆ ಇಲ್ಲ.
ಮತ್ತೆ ಕೆಲವರು ಗ್ಲಾಸ್‌ಗೆ ಹಾಕಿಕೊಂಡು ರಸಂ ಅನ್ನು ಕುಡಿಯುತ್ತಾರೆ. ಅದ್ರಲ್ಲೂ ದೇವಾಲಯದಲ್ಲಿ ನೀಡುವ ಊಟದ ಜೊತೆ ರಸಂ ಇದ್ದರೆ ಆ ಊಟದ ರುಚಿಯೇ ಬೇರೆ. ಮತ್ತೊಂದೆಡೆ ಮದುವೆ ಮನೆ, ಶುಭ ಕಾರ್ಯಗಳಲ್ಲಿ ಮಾಡುವ ಆ ಸುವಾಸನೆ ಭರಿತ ರಸಂ ಯಾರಿಗೆ ಇಷ್ಟವಾಗಲ್ಲ ಹೇಳಿ. ಎಲ್ಲರು ಈ ರಸಂ ಸವಿಯಲು ಇಷ್ಟಪಡುತ್ತಾರೆ.

ಮತ್ತೊಂದೆಡೆ ಈ ರಸಂ ಮಾಡಲು ಹೆಚ್ಚು ಸಮಯ, ಹೆಚ್ಚು ವಸ್ತು, ಹೆಚ್ಚು ತಯಾರಿ ಬೇಕೆಂದಿಲ್ಲ. ಹೀಗಾಗಿ ಗೃಹಿಣಿಯರ ಅಚ್ಚುಮೆಚ್ಚಿನ ಖಾದ್ಯದಲ್ಲಿ ರಸಂ ಕೂಡ ಒಂದು. ಅಂದು ಊಟದ ಜೊತೆ ಸಾಂಬಾರ್ ಮಾಡಲು ಯಾವ ವಸ್ತು ಸಿಗದಿದ್ದರೆ ರಸಂ ಮಾಡಿ ಬಿಡುತ್ತಾರೆ. ಈಗಂತು ಮಾರುಕಟ್ಟೆಯಲ್ಲಿ ರಸಂ ಪೌಡರ್‌ಗಳು ದಾಳಿ ಮಾಡಿವೆ. ಯವುದಾದರು ಒಂದು ಪ್ಯಾಕ್ ಇದ್ದರೆ 5 ನಿಮಿಷದಲ್ಲಿ ರಸಂ ಮಾಡಿ ಬಡಿಸುತ್ತಾರೆ.
ರಸಂ ಎಷ್ಟೊಂದು ಸುಲಭವಾಗಿ ಮಾಡಬಹುದು ಅಂದ್ರೆ ಕೆಲವೇ ವಸ್ತು ಇದ್ದರೆ ಥಟ್ ಅಂತ ಮಾಡಬಹುದು. ಹಾಗಾದ್ರೆ ಅತ್ಯಂತ ಸುಲಭವಾಗಿ ರಸಂ ಮಾಡುವುದು ಹೇಗೆ? ರಸಂ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸುಲಭವಾಗಿ ರಸಂ ಮಾಡಲು ಬೇಕಾಗುವ ವಸ್ತುಗಳು ಯಾವುದು?
- ಮೆಣಸು - 1 ಟೀ ಸ್ಪೂನ್
- ಜೀರಿಗೆ - 1 ಟೇಬಲ್ ಸ್ಪೂನ್
- ಹುಣಸೆ ಹುಳಿ
- ಬೆಳ್ಳುಳ್ಳಿ - 1 ಗಡ್ಡೆ
- ಒಣ ಮೆಣಸಿನಕಾಯಿ - 6
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಟೊಮೊಟೊ- 1
- ಎಣ್ಣೆ
- ಸಾಸಿವೆ
- ಇಂಗು
- ಬೆಲ್ಲ
- ಅರಿಶಿಣದ
- ಉಪ್ಪು
ರಸಂ ಮಾಡುವುದು ಹೇಗೆ?
ಮೊದಲು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಜೀರಿಗೆ, ಕಾಳುಮೆಣಸು, ಬೆಳ್ಳುಳ್ಳಿ, ಹುಣಸೆ ಹುಳಿ, ಒಣ ಮೆಣಸು, ಟೊಮೆಟೋ, ಕೊತ್ತಂಬರಿ ಸೊಪ್ಪು, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿಕೊಂಡು ಬದಿಗಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ, ಇಂಗು, ಕರಿಬೇವು, ಒಣ ಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಈಗ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಸಾಲೆಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ನಿಮಗೆ ಎಷ್ಡು ನೀರು ಬೇಕೋ ಅಷ್ಟು ನೀರು ಹಾಕಿಕೊಳ್ಳಿ.
ಈಗ ಅರ್ಧ ಉಂಡೆ ಬೆಲ್ಲ, ಅರಶಿನ, ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ನಂತರ ಒಲೆ ಮೇಲೆ ಕುದಿಬರಲು ಬಿಡಿ. ಒಂದು ಕುದಿ ಬಂದರೆ ನಿಮ್ಮ ಮುಂದೆ ತಿಳಿಸಾರು ಅಥವಾ ರಸಂ ರೆಡಿಯಾಗಿರುತ್ತದೆ. ಅಂತಿಮವಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇದನ್ನು ನೀವು ಸಹ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ. ಮಾಡೋದು ಸಹ ತುಂಬಾನೆ ಸುಲಭ, ತರಕಾರಿ ಬೇಕಾಗಿಯೇ ಇಲ್ಲ.



Click it and Unblock the Notifications
