Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ರಾಮನವಮಿ ಸ್ಪೆಷಲ್ ಕೋಸಂಬ್ರಿ, ನೀರು ಮಜ್ಜಿಗೆ, ಪಾನಕ ಮಾಡಿ.! 5 ನಿಮಿಷ ಸಾಕು
ಯುಗಾದಿ ಹಬ್ಬ ಮುಗಿದಿದೆ ಎಂದರೆ ಅದರ ಜೊತೆಗೆ ಬರುವ ಮತ್ತೊಂದು ಹಬ್ಬ ರಾಮ ನವಮಿ, ಹಿಂದೂಗಳ ಪಾಲಿನ ಪ್ರಮುಖ ಹಬ್ಬಗಳಲ್ಲಿ ಈ ರಾಮನವಮಿ ಕೂಡ ಒಂದಾಗಿದೆ. ಅದರಲ್ಲು ರಾಮನವಮಿಯಂದು ಹಿಂದೂ ಸಮುದಾಯದ ಮಂದಿ ರಾಮನ ದೇವಾಲಯ ಹಾಗೂ ಮನೆಯಲ್ಲೇ ರಾಮನ ಹಬ್ಬದ ಆಚರಿಸುವುದು ನೋಡಬಹುದು, ಹಾಗೆ ಉತ್ತರ ಭಾರತದಲ್ಲಿ ರಾಮನವಮಿಯ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಇದನ್ನು ಸಾರ್ವಜನಿಕ ಹಬ್ಬದಂತೆ ಅವರು ಆಚರಿಸುವುದು ಅಲ್ಲಿನ ವಿಶೇಷವಾಗಿದೆ.
ರಾಮ ನವಮಿಯನ್ನು ಮನೆಯಲ್ಲೇ ಕುಟುಂಬಸ್ಥರು ಸೇರಿ ಆಚರಿಸುವುದು ಕೂಡ ನೋಡಬಹುದು. ಮನೆಯಲ್ಲಿ ರಾಮ ಸೀತೆಯ ಮೂರ್ತಿಯನ್ನಿಟ್ಟು ಪೂಜಿಸುವುದು ಈ ಹಬ್ಬದ ಮಹತ್ವದಲ್ಲಿ ಒಂದಾಗಿದೆ. ರಾಮನು ಈ ದಿನ ವನವಾಸ ಮುಗಿಸಿದ ಅಂತಲೂ, ಹಾಗೆ ರಾವಣನ ಹತ್ಯೆ ಮಾಡಿದ ಅಂತಲೂ, ರಾಮನ ಜನ್ಮದಿನ ಅಂತಲೂ ಆಚರಿಸುವುದು ನೊಡಬಹುದು.

ಇನ್ನು ಈ ರಾಮನವಮಿ ಅಂದಕೂಡಲೆ ನೆನಪಾಗುವುದು ಕೋಸಂಬರಿ ಹಾಗೂ ನೀರು ಮಜ್ಜಿಗೆ, ಪಾನಕ. ಈ ಮೂರು ವಸ್ತು ಇಲ್ಲ ಅಂದರೆ ರಾಮ ನವಮಿ ಪೂರ್ಣ ಆಗಲ್ಲ. ಹಾಗೆ ಈ ಹಬ್ಬದಲ್ಲಿ ದೊಡ್ಡ ಸಿಹಿ ಅಗತ್ಯವಿಲ್ಲ. ಈ ಮೂರು ಇದ್ದರೆ ಸಕಾಗುತ್ತೆ. ನೀವು ಯಾವುದೇ ರಾಮನ ದೇವಾಲಯಕ್ಕೆ ಹೋದರು ಕೂಡ ಈ ಮೂರು ಸವಿಯಲು ಸಿಗೋದು ಪಕ್ಕ.
ಆದ್ರೆ ಕೋಸಂಬರಿ, ನೀರು ಮಜ್ಜಿಗೆ, ಪಾನಕವನ್ನು ಮನೆಯಲ್ಲೇ ಮಾಡೋದು ಹೇಗೆ ಅನ್ನೋದು ಗೊತ್ತಾ? ಮನೆಯಲ್ಲಿ ರಾಮ ನವಮಿ ಮಾಡುವವರು ಇಲ್ಲವೆ ಮಾಡದೇ ಇರುವವರು ಕೂಡ ಈ ಮೂರು ಖಾದ್ಯ ಮಾಡಿ ನೋಡಿ. ಹಾಗಾದ್ರೆ ಕೋಸಂಬರಿ, ನೀರು ಮಜ್ಜಿಗೆ, ಪಾನಕ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೋಸಂಬರಿ, ನೀರು ಮಜ್ಜಿಗೆ, ಪಾನಕ ಮಾಡುವ ವಿಧಾನವೇನು?
ಮೊದಲು 1 ಕಪ್ ಅಳತೆಯ ಹೆಸರು ಬೇಳೆ ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೆನೆಸಿಡಬೇಕು. ಸುಮಾರು 1 ಗಂಟೆಯಾದರು ಬೇಳೆ ನೆನೆಯಬೇಕು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಸಿ ಮೆಣಸು, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು ಸ್ವಲ್ಪ ನೀರು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ಈಗ ಒಂದು ಪಾತ್ರೆಗೆ ಹೆಸರು ಬೇಳೆ ಹಾಕಿ ಅದಕ್ಕೆ ಕ್ಯಾರೆಟ್ ತುರಿ, ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು, ಸೌತೆಕಾಯಿ ಹಾಕಿಕೊಳ್ಳಿ, ನಂತರ ಮಿಕ್ಸಿಯಲ್ಲಿ ರುಬ್ಬಿರುವ ಅಂಶಗಳನ್ನು ಕೂಡ ಇದಕ್ಕೆ ಸೇರಿಸಿ ನಂತರ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಗೆ ಒಂದು ನಿಂಬೆ ಹುಳಿ ಹಿಂಡಿಕೊಂಡರೆ ಕೋಸಂಬ್ರಿ ರೆಡಿಯಾಗುತ್ತದೆ.
ಈಗ ನೀರು ಮಜ್ಜಿಗೆ ಮಾಡೋದು ಹೇಗೆ ನೋಡಿ. ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಮೊಸರು ಹಾಕಿಕೊಂಡು ಅದನ್ನು ಕಡೆದುಕೊಳ್ಳಬೇಕು. ಮಿಕ್ಸಿಯಲ್ಲೂ ಕಡೆದುಕೊಳ್ಳಬಹುದು. ನಂತರ ಅದಕ್ಕೆ ನೀರು ಸೇರಿಸಿಕೊಳ್ಳಿ. ನೀರು ಎಷ್ಟಾದರು ಸೇರಿಸಿ. ನಂತರ ಇದಕ್ಕೆ ಉಪ್ಪು, ಕೊತ್ತಂಬರಿ ಸೊಪ್ಪು, ಕರಿವೇವು ಸಣ್ಣದಾಗಿ ಹೆಚ್ಚಿ ಹಾಕಿ ಕಲಸಿಕೊಳ್ಳಿ ಇಷ್ಟಾದರೆ ಮಜ್ಜಿಗೆ ರೆಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಹಸಿ ಮೆಣಸು, ಒಣ ಮೆಣಸು, ಕೆರಿಬೇವು ಹಾಕಿ ಫ್ರೈ ಮಾಡಿ ಇದನ್ನು ನೀರು ಮಜ್ಜಿಗೆ ಹಾಗೂ ಕೋಸಂಬರಿಗೆ ಹಾಕಿಕೊಂಡು ಮಿಕ್ಸ್ ಮಾಡಿ.
ಈಗ ಪಾನಕ ಮಾಡುವುದು ಹೇಗೆ ನೋಡೋಣ. ಮೊದಲು ಒಂದು ಪಾತ್ರೆಗೆ ನೀರು ಹಾಕಿಕೊಂಡು ಅದಕ್ಕೆ ಬೆಲ್ಲ ಹಾಕಿ ಕರಿಗಿಸಿಕೊಳ್ಳಿ. ಸಕ್ಕರೆ ಬಳಸಬೇಡಿ. ಬೆಲ್ಲ ಚೆನ್ನಾಗಿ ಕರಗುವಂತೆ ತಿರುಗಿಸಿಕೊಳ್ಳಿ. ನಂತರ ಒಂದು ನಿಂಬೆ ಹಣ್ಣು ಹಿಂಡಿಕೊಳ್ಳಿ. ಹಾಗೆ ಶುಂಠಿ ರಸ, ಏಲಕ್ಕಿ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡರೆ ಈ ಪಾನಕ ರೆಡಿಯಾಗುತ್ತದೆ. ಇಷ್ಟಾದರೆ ರಾಮನವಮಿಯ ಸ್ಪೆಷಲ್ ಖಾದ್ಯಗಳು ಸವಿಯಲು ಸಿದ್ದ.



Click it and Unblock the Notifications