Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರಾಗಿಯಿಂದ ಮಾಡಿ ಅದ್ಭುತ ರುಚಿಯ ಉಪ್ಪಿಟ್ಟು..! ಹೇಗೆ ಗೊತ್ತಾ?
ಬೆಳಗಿನ ತಿಂಡಿಗೆ ಹಲವರ ಮನೆಯಲ್ಲಿ ಉಪ್ಪಿಟ್ಟು ಮಾಡುತ್ತಾರೆ. ಉಪ್ಪಿಟ್ಟು ಅಂದ್ರೆ ಹಲವರಿಗೆ ಅಲರ್ಜಿ. ಉಪ್ಪಿಟ್ಟು ಮಾಡಿದರೆ ಅವರು ತಿಂಡಿ ಸವಿಯೋಕೆ ಹಿಂದು ಮುಂದು ನೋಡ್ತಾರೆ. ನೀವು ಎಷ್ಟೇ ರುಚಿಯಾಗಿ ಮಾಡಿದ್ರು ಕೂಡ ಉಪ್ಪಿಟ್ಟು ಇಷ್ಟವಾಗುವುದು ಅನುಮಾನ. ಆದ್ರೆ ಈಗ ಉಪ್ಪಿಟ್ಟನ್ನು ಅತ್ಯಂತ ರುಚಿಕರವಾಗಿ ಅದ್ಭುತವಾಗಿ ಮಾಡಬಹುದು.
ಅವರೇಕಾಳಿನ ಉಪ್ಪಿಟ್ಟು, ಶಾವಿಗೆ ಉಪ್ಪಿಟ್ಟು, ರವೆ ಉಪ್ಪಿಟ್ಟು, ಮಸಾಲೆ ಉಪ್ಪಿಟ್ಟು ಹೀಗೆ ಹೇಳುತ್ತಾ ಹೋದ್ರೆ ಸಾಲು ಸಾಲು ಉಪ್ಪಿಟ್ಟುಗಳ ವಿಧ ನಮ್ಮ ಕಣ್ಣ ಮುಂದೆಯೇ ಬರುತ್ತವೆ. ಆದ್ರೆ ಯಾವತ್ತಾದ್ರು, ರಾಗಿ ಬಳಸಿ ಉಪ್ಪಿಟ್ಟು ಮಾಡಿದ್ದೀರಾ?, ರಾಗಿ ಉಪ್ಪಿಟ್ಟು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ರಾಗಿಯಿಂದ ಉಪ್ಪಿಟ್ಟು ಮಾಡೋದು ಹೇಗೆ?

ರಾಗಿಯಿಂದ ಅದ್ಭುತ ರುಚಿಯ ಉಪ್ಪಿಟ್ಟು ಮಾಡಬಹುದು. ಹಾಗಾದ್ರೆ ರಾಗಿಯಿಂದ ಉಪ್ಪಿಟ್ಟು ಮಾಡೋದು ಹೇಗೆ?, ರಾಗಿ ಉಪ್ಪಿಟ್ಟು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಗಿ ಉಪ್ಪಿಟ್ಟು ಮಾಡಲು ಬೇಕಾಗುವ ಪದಾರ್ಥಗಳು
- ರಾಗಿ ಹಿಟ್ಟು 1 ಕಪ್
- ಮೀಡಿಯಂ ರವೆ 1 ಕಪ್
- ಈರುಳ್ಳಿ - 1
- ಕ್ಯಾಪ್ಸಿಕಂ- 1
- ಕ್ಯಾರೆಟ್ - 1
- ಗೋಡಂಬಿ
- ಎಣ್ಣೆ
- ತುಪ್ಪ
- ಸಾಸಿವೆ
- ಜೀರಿಗೆ
- ಕಡ್ಲೆಬೇಳೆ
- ಉದ್ದಿನ ಬೇಳೆ
- ಕರಿಬೇವು
- ಕೊತ್ತಂಬರಿ
- ಹಸಿ ಮೆಣಸಿನಕಾಯಿ
- ಶುಂಠಿ
- ನಿಂಬೆಹಣ್ಣಿನ ರಸ
- ಉಪ್ಪು
ರಾಗಿ ಉಪ್ಪಿಟ್ಟು ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಅದಕ್ಕೆ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ, ಗೋಡಂಬಿ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಒಂದು ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಕರಿಬೇವು, ಶುಂಠಿ, ಹಸಿ ಮೆಣಸು, ಹಾಕಿಕೊಂಡು ಫ್ರೈ ಮಾಡಿ. ನಂತರ ಒಂದು ಈರುಳ್ಳಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ಕತ್ತರಿಸಿಕೊಂಡಿರುವ ಕ್ಯಾರೆಟ್, ಕ್ಯಾಪ್ಸಿಕಂ ಹಾಕಿಕೊಂಡು ಸುಮಾರು 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಇದಕ್ಕೆ ಒಂದು ಕಪ್ ಮೀಡಿಯಂ ರವೆ ಹಾಕಿಕೊಂಡು ಫ್ರೈ ಮಾಡಿ. 5 ನಿಮಿಷ ರವೆಯನ್ನು ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಒಂದು ಕಪ್ ಅಳತೆಯಲ್ಲಿ ರಾಗಿ ಹಿಟ್ಟು ಹಾಕಿಕೊಳ್ಳಿ, ಇದೆ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ.
ರಾಗಿ ಹಿಟ್ಟಿ ಹಾಕಿದ ಬಳಿಕ ಸುಮಾರು 5ರಿಂದ 7 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಈಗ ಸರಿಯಾದ ಅಳತೆಯಲ್ಲಿ ನೀರು ತೆಗೆದುಕೊಂಡು ಒಂದು ಸಣ್ಣ ಪಾತ್ರೆಗೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ನೀರು ಬಿಸಿಯಾದ ಬಳಿಕ ಇದನ್ನು ಉಪ್ಪಿಟ್ಟು ಇರುವ ಪಾತ್ರೆಗೆ ಹಾಕಿಕೊಂಡು ಕುದಿಯಲು ಬಿಡಿ. ನಂತರ ನೀರಿನ ಜೊತೆಗೆ ಉಪ್ಪಿಟ್ಟು ಬೆರೆಯಬೇಕು.
ಕೆಲ ಸಮಯದಲ್ಲಿ ನೀರು ಇಂಗುತ್ತದೆ. ಉಪ್ಪಿಟ್ಟು ತೆಳುವಾಗುತ್ತೆ. ಈ ವೇಳೆ ನಿಮಗೆ ಬೇಕಾದರೆ ಸ್ವಲ್ಪ ತುಪ್ಪ ಹಾಕಿ ಮುಚ್ಚಳ ಮುಚ್ಚಿ 5 ನಿಮಿಷ ಬೆಯಲು ಬಿಡಿ. ಆಗಾಗ ಮಿಕ್ಸ್ ಮಾಡಿಕೊಳ್ಳಿ. ಕಡಿಮೆ ಉರಿಯಲ್ಲಿ ಉಪ್ಪಿಟ್ಟು ಬೇಯಲು ಬಿಡಿ. ಕೊನೆಯದಾಗಿ ನಿಂಬೆ ಹಣ್ಣಿನ ರಸ ಹಾಗೂ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರಾಗಿ ಉಪ್ಪಿಟ್ಟು ರೆಡಿಯಾಗುತ್ತದೆ. ಈ ಉಪ್ಪಿಟ್ಟಿನ ರುಚಿ ನೀವು ನೋಡಿದರೆ ಮತ್ತೆಂದು ಬೇರೆ ಉಪ್ಪಿಟ್ಟು ಮಾಡೋದಿಲ್ಲ. ಬೆಳಗ್ಗೆ ತಿಂಡಿಗೆ ಚಟ್ನಿ ಜೊತೆಗೆ ಈ ಉಪ್ಪಿಟ್ಟು ಅದ್ಭುತ ರುಚಿ ನೀಡಲಿದೆ.



Click it and Unblock the Notifications
