Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ದೇಹಕ್ಕೆ ತಂಪು ನೀಡುವ ರಾಗಿ ಉಪ್ಪಿಟ್ಟು ಮಾಡಿದ್ದೀರಾ? 10 ನಿಮಿಷ ಸಾಕು!
ನೀವು ಬೆಳಗ್ಗೆ ಸಮಯದಲ್ಲಿ ರುಚಿ ರುಚಿ ಖಾದ್ಯ ಸವಿಯಲು ಇಷ್ಟಪಡುತ್ತೀರಿ. ಹಾಗೆ ಕಡಿಮೆ ಸಮಯದಲ್ಲಿ ಕಡಿಮೆ ಮಾಡುವಂತಹ ಬ್ರೇಕ್ಫಾಸ್ಟ್ ಮಾಡಲು ನೀವು ಯಾವಾಗಲು ಮುಂದಾಗುತ್ತೀರಿ. ಅದರಲ್ಲೂ ಈ ಬಿಸಿಲಿನ ಸಮಯದಲ್ಲಿ ದೇಹಕ್ಕೆ ತಂಪಾಗುವಂತಹ ತಿಂಡಿಗಳನ್ನು ಮಾಡಿ ಸವಿಯುವುದು ಬಹಳ ಮುಖ್ಯ ಎನಿಸಲಿದೆ. ಬಿಸಿಲು ಹೆಚ್ಚಾದಾಗ ದೇಹದ ಉಷ್ಣಾಂಶ ಹೆಚ್ಚಾಗುವ ಕಾರಣ ತಂಪಾಗುವಂತಹ ಆಹಾರ ಸೇವಿಸುವುದು ಬಹಳ ಉತ್ತಮ. ಹಾಗೆ ಈ ಸಮಯದಲ್ಲಿ ದೇಹಕ್ಕೆ ರಾಗಿ ಬಹಳ ತಂಪು ನೀಡುತ್ತದೆ.
ರಾಗಿಯಿಂದ ಹಲವು ರೀತಿಯ ಖಾದ್ಯ ಮಾಡಿ ಸವಿಯುತ್ತೇವೆ. ರಾಗಿ ಕಾಫಿ, ರಾಗಿ ಅಂಬಲಿ, ರಾಗಿ ಇಡ್ಲಿ, ರಾಗಿ ದೋಸೆ ಹೀಗೆ ಒಂದಕ್ಕಿಂತ ಒಂದು ರುಚಿ ರುಚಿಯ ಖಾದ್ಯ ಮಾಡಬಹುದು. ರಾಗಿ ದೇಹಕ್ಕೆ ಬಹಳ ತಂಪಿನ ಅಂಶವಾಗಿದೆ. ಹೀಗಾಗಿ ಎಲ್ಲರಿಗೂ ಬಹಳ ಇಷ್ಟವಾಗುತ್ತೆ. ಇನ್ನು ರಾಗಿಯಿಂದ ಮಾಡುವ ಉಪ್ಪಿಟ್ಟು ನೀವು ಸವಿದರೆ ಆ ರುಚಿಗೆ ಫಿದಾ ಆಗಿ ಬಿಡುತ್ತೀರಿ. ರುಚಿ ರುಚಿಯ ಈ ಉಪ್ಪಿಟ್ಟು ನಿಮ್ಮ ಬೆಳಗ್ಗೆಯ ಖಾದ್ಯವನ್ನು ರುಚಿಯಾಗಿಸುವ ಜೊತೆಗೆ ದೇಹಕ್ಕೂ ತಂಪು ನೀಡಲಿದೆ.

ರಾಗಿಯ ಸೇವನೆಯು ನಿಮ್ಮ ದೇಹದಲ್ಲಿನ ಕಬ್ಬಿಣಾಂಶ ಕೊರತೆಯನ್ನು ನೀಗಿಸಲಿದೆ. ಹಾಗೆ ರಕ್ತ ಹೀನತೆಯಂತಹ ಸಮಸ್ಯೆಗೂ ಇದು ಪರಿಹಾರ ನೀಡಲಿದೆ. ಫೈಬರ್ ತುಂಬಿರುವ ಕಾರಣ ಜೀರ್ಣಕ್ರಿಯೆ, ಕರುಳಿನ ಆರೋಗ್ಯಕ್ಕೂ ಕೂಡ ಇದು ಉತ್ತಮ ಆಹಾರವಾಗಿದೆ. ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವ ಮೂಲಕ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲಿವೆ. ಹೀಗಾಗಿ ರಾಗಿ ಮುದ್ದೆ ಸೇವನೆ ದೇಹಕ್ಕೆ ಬಹಳ ಉತ್ತಮ ಎಂದು ಹೇಳಲಾಗುತ್ತದೆ.
ಆದ್ರೆ ನಾವಿಂದು ಈ ರಾಗಿಯಿಂದ ಮಾಡಬಹುದಾದಂತಹ ರುಚಿ ರುಚಿಯ ಉಪ್ಪಿಟ್ಟು ರೆಸಿಪಿಯನ್ನು ತಿಳಿದುಕೊಳ್ಳೋಣ. ರಾಗಿ ಉಪ್ಪಿಟ್ಟು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ಇದರ ರುಚಿ ಹೇಗಿರಲಿದೆ ಎಂಬುದನ್ನು ಈ ರೆಸಿಪಿ ಮೂಲಕ ತಿಳಿದುಕೊಳ್ಳೋಣ.
ರಾಗಿ ಉಪ್ಪಿಟ್ಟು ಮಾಡಲು ಬೇಕಾಗುವ ಪದಾರ್ಥಗಳು ಯಾವುದು?
- ರಾಗಿ ಹಿಟ್ಟು
- ರವೆ
- ಟೊಮೆಟೋ
- ಈರುಳ್ಳಿ
- ಸಾಸಿವೆ
- ಜೀರಿಗೆ
- ಉಪ್ಪು
- ಎಣ್ಣೆ
- ತುಪ್ಪ
- ಕರಿಬೇವು
- ಕಡಲೆ ಬೇಳೆ
- ಉದ್ದಿನ ಬೇಳೆ
- ಹಸಿ ಮೆಣಸು
- ಒಣ ಮೆಣಸು
ರಾಗಿ ಉಪ್ಪಿಟ್ಟು ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಗೂ ತುಪ್ಪ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಬಿಸಿ ಮಾಡಿ. ನಂತರ ಕರಿಬೇವು, ಹಸಿ ಮೆಣಸು, ಒಣ ಮೆಣಸು, ಈರುಳ್ಳಿ ಹಾಕಿಕೊಂಡು 2 ನಿಮಿಷ ಮಿಕ್ಸ್ ಮಾಡಿಕೊಳ್ಳುತ್ತಾ ಫ್ರೈ ಮಾಡಿ. ಬಳಿಕ ಟೊಮೆಟೋ ಕೂಡ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿ.
ಈಗ ಒಂದು ಕಪ್ ರವೆಯನ್ನು ಇದಕ್ಕೆ ಹಾಕಿ ಹುರಿದುಕೊಳ್ಳಿ. ಇದಕ್ಕೆ ಅರ್ಧ ಕಪ್ ರಾಗಿ ಹಿಟ್ಟು ಹಾಕಿಕೊಂಡು 3 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅಳತೆ ಕಪ್ನಲ್ಲಿ ಮೂರು ಅಥವಾ 4 ಕಪ್ ಬಿಸಿ ನೀರು ಹಾಕಿಕೊಳ್ಳಬೇಕು. ಹಾಗೆ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿ. ನಂತರ ಮುಚ್ಚಳ ಮುಚ್ಚಿ ಮೂರು ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
3 ನಿಮಿಷದಲ್ಲಿ ರಾಗಿ ಬೇಯುತ್ತದೆ. ನಂತರ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಗೆ ತುಪ್ಪದಲ್ಲಿ ಹರಿದ ಗೋಡಂಬಿ ಇದಕ್ಕೆ ಹಾಕಿ ಸವಿಯಲು ನೀಡಬಹುದು. ಇದರ ರುಚಿ ಒಮ್ಮೆಯಾದರು ಮಾಡಿ ನೋಡಿ. ಅದರ ರುಚಿಗೆ ಎಲ್ಲರು ಬೆರಗಾಗೋದು ಖಚಿತ ಹಾಗೆ ಮಕ್ಕಳು ಕೂಡ ಬಹಳ ಇಷ್ಟ ಪಟ್ಟು ಇದನ್ನು ಸವಿಯುತ್ತಾರೆ.



Click it and Unblock the Notifications
