Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬಿಸಿಲಿನಲ್ಲಿ ದೇಹವನ್ನು ತಂಪಾಗಿಡುವ ರಾಗಿ ಸೂಪ್; ತೂಕ ಇಳಿಸೋದು ಸಹ ಸುಲಭ!
ಇಡೀ ದೇಹಕ್ಕೆ ತಂಪು ತರುವಂತಹ ಹಲವು ರೀತಿಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ಈ ಬೇಸಿಗೆಯ ಸಮಯದಲ್ಲಿ ಎಲ್ಲರೂ ದೇಹ ತಂಪಾಗಿಡುವಂತಹ ಹಲವು ಬಗೆಯ ಖಾದ್ಯಗಳ ಮಾಡಿ ಸವಿಯೋದು ನೋಡಬಹುದು. ದಿನದಲ್ಲಿ ಹಲವು ಬಾರಿ ಹವಾಮಾನ ಬದಲಾಗುವ ಈ ಸಮಯದಲ್ಲಿ ನಮ್ಮ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹೀಗಾಗಿ ದೇಹ ತಂಪಾಗಿಡುವ ಮತ್ತೆ ಆರೋಗ್ಯಕ್ಕೂ ಅತ್ಯುತ್ತಮ ಎನಿಸುವ ಸೂಪ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಸೂಪ್ ಅನ್ನು ಹಲವು ಬಗೆಯಲ್ಲಿ ಹಲವು ರೀತಿಯ ವಸ್ತುಗಳ ಬಳಸಿಕೊಂಡು ಮಾಡಿರುತ್ತೀರಿ. ಅದ್ರಲ್ಲೂ ರಾಗಿಯನ್ನು ಬಳಸಿಕೊಂಡು ಮಾಡುವ ಈ ಸೂಪ್ ರುಚಿಯ ಜೊತೆಗೆ ನಿಮ್ಮ ದೇಹಕ್ಕೂ ಕೂಡ ಬಹಳ ಮುಖ್ಯವಾಗಲಿದೆ. ರಾಗಿಯ ಹಲವು ಉಪಯೋಗ ನೀವು ಕೂಡ ತಿಳಿದಿರಬಹುದು. ದೇಹವನ್ನು ತಂಪಾಗಿಸುವ ಜೊತೆಗೆ ರಾಗಿಯಿಂದಾಗಿ ಹಲವು ಪ್ರಯೋಜನಗಳಿವೆ.

ರಾಗಿಯಲ್ಲಿ ಫೈಬರ್ ಅಂಶ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲಿದೆ. ಹಾಗೆ ಕ್ಯಾಲ್ಸಿಯಂ, ಕಬ್ಬಿಣ, ಪ್ರೋಟೀನ್ ಹಾಗೂ ಫೈಬರ್ನಿಂದ ಸಮೃದ್ಧವಾಗಿದೆ. ರಾಗಿಯಿಂದ ರಕ್ತಹೀನತೆ ಸೇರಿದಂತೆ ಹಲವು ರೀತಿಯಲ್ಲಿ ನಿಮ್ಮ ದೇಹಕ್ಕೆ ಬಹಳ ಅನುಕೂಲಕರವಾಗುತ್ತದೆ. ರಾಗಿ ಸವಿಯುವುದು ನಿಮ್ಮ ಮೂಳೆಗಳ ಆರೋಗ್ಯಕ್ಕೂ ಕೂಡ ಬಹಳ ಉತ್ತಮವಾಗಿರಲಿದೆ.
ಹೀಗಾಗಿ ನಾವು ರಾಗಿಯಿಂದ ಮಾಡುವ ರಾಗಿ ಅಂಬಲಿ, ರಾಗಿ ರೊಟ್ಟಿ, ರಾಗಿ ಮುದ್ದೆ, ರಾಗಿ ದೋಸೆ, ಮಾಡಿ ಸವಿಯುವುದು ನಿಮ್ಮ ದೇಹಕ್ಕೆ ಉತ್ತಮವಾಗಿರಲಿದೆ. ಹಾಗಾದ್ರೆ ನಾವಿಂದು ಈ ರಾಗಿ ಸೂಪ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ರಾಗಿ ಸೂಪ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ರಾಗಿ ಸೂಪರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ರಾಗಿ
- ಹಸಿ ಮೆಣಸು
- ಶುಂಠಿ
- ಬೀನ್ಸ್
- ಕ್ಯಾರೆಟ್
- ಬೆಳ್ಳುಳ್ಳಿ
- ಎಣ್ಣೆ ಅಥವಾ ಬೆಣ್ಣೆ
- ಮೆಕ್ಕೆ ಜೋಳ
- ಕಾಳು ಮೆಣಸಿನ ಪುಡಿ
- ಮೊಸರು
ರಾಗಿ ಸೂಪರ್ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ನಲ್ಲಿ ಕಾಲು ಕಪ್ ರಾಗಿ ಹಿಟ್ಟು ಹಾಕಿಕೊಂಡು ಅದರ ಎರಡು ಪಟ್ಟು ನೀರು ಹಾಕಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಅಥವಾ ಬೆಣ್ಣೆ ಹಾಕಿಕೊಂಡು ಬಿಸಿ ಮಾಡಿಕೊಳ್ಳಿ.
ಅನಂತರ ಇದಕ್ಕೆ ಕತ್ತರಿಸಿಕೊಂಡ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. ಅದಾದ ಬಳಿಕ ಸಣ್ಣದಾಗಿ ಕತ್ತರಿಸಿಕೊಂಡ ತರಕಾರಿಗಳ ಹಾಕಬೇಕು. ಅದಕ್ಕಾಗಿ ಬೀನ್ಸ್, ಜೋಳ, ಕ್ಯಾರೆಟ್ ಸೇರಿ ಯಾವುದಾದರು ತರಕಾರಿಯನ್ನು ಇದಕ್ಕೆ ಬಳಸಬಹುದು. ಹಾಗೆ ಇದಕ್ಕೆ ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಬೇಕು.
ಈಗ ಎರಡು ಪಟ್ಟು ನೀರು ಹಾಕಿ ಕುದಿಬರಲು ಬಿಡಬೇಕು. ಈ ಸಮಯದಲ್ಲಿ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಈ ಮೊದಲು ನೀರಿನೊಂದಿಗೆ ಮಿಕ್ಸ್ ಮಾಡಿ ಇಟ್ಟಿರುವ ರಾಗಿಯನ್ನ ಸಹ ಇದಕ್ಕೆ ಹಾಕಿ ಸ್ವಲ್ಪ ನೀರು ಸಹ ಹಾಕಿ ಮಿಶ್ರಣ ಮಾಡಿ ಕುದಿಬರಲು ಬಿಡಬೇಕು. ರಾಗಿ ಕುದಿಬಂದು ಬೇಯಲು ಆರಂಭವಾಗಬೇಕು.
ಕೊನೆಯಲ್ಲಿ ಮತ್ತೆ ಗಟ್ಟಿಯಾದರೆ ನೀರು ಹಾಕಿಕೊಳ್ಳಿ. ತೆಳುವಾಗಿ ಇರಬೇಕು. ಕೊನೆಯಲ್ಲಿ ಒಲೆ ಆಫ್ ಮಾಡಿ ಕಾಲು ಕಪ್ ಮೊಸರು, ಉಪ್ಪು ಸೇರಿಸಿಕೊಂಡು ಕಾಳು ಮೆಣಸಿನ ಪುಡಿ ಸೇರಿಸಿಕೊಂಡು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ರಾಗಿ ಸೂಪ್ ಸಿದ್ದವಾಗುತ್ತೆ.



Click it and Unblock the Notifications
