Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಗರಿ ಗರಿ ರಾಗಿ ರೊಟ್ಟಿ ಮಾಡೋದು ಹೇಗೆ? ಇಲ್ಲಿದೆ ಸುಲಭದ ವಿಧಾನ!
ನೀವು ಮನೆಯಲ್ಲಿ ಬೆಳಗ್ಗೆ ತಿಂಡಿಗೆ ಅದ್ಭುತ ರುಚಿ ನೀಡುವ ಹಾಗೆ ಬಗೆ ಬಗೆಯ ತಿಂಡಿ ಮಾಡುವುದು ಸಾಮಾನ್ಯ. ಹಾಗೆ ವಿಶೇಷವಾದ ತಿಂಡಿ ಮಾಡಲು ನಿಮ್ಮ ಆಲೋಚನೆ ಇದ್ದರೆ ನೀವು ರೊಟ್ಟಿ ಮಾಡಿ ಸವಿದು ನೋಡಿ. ರೊಟ್ಟಿ ಹಲವು ಬಗೆಯಲ್ಲಿ ರೆಡಿಯಾಗುತ್ತದೆ, ಅಕ್ಕಿ ರೊಟ್ಟಿ ಇದರಲ್ಲಿ ಬಹಳ ಫೇಮಸ್. ಈಗ ಹೋಟೆಲ್ ರೆಸ್ಟೋರೆಂಟ್ ನಲ್ಲಿ ನೀವು ಹೆಚ್ಚಾಗಿ ಅಕ್ಕಿ ರೊಟ್ಟಿ ಸವಿಯುವುದು ನೋಡಿರುತ್ತೀರಿ.
ಹಾಗೆ ಅಕ್ಕಿ ರೊಟ್ಟಿ ಸವಿಯಲು ಎಲ್ಲರು ಇಷ್ಟಪಡುತ್ತಾರೆ, ಇನ್ನು ಅಕ್ಕಿ ರೊಟ್ಟಿ ಹೊರತುಪಡಿಸಿ ಉಳಿದಂತೆ ಈ ರಾಗಿ ರೊಟ್ಟಿ ಹಾಗೆ ಜೋಳದ ರೊಟ್ಟಿ ಕೂಡ ಬಹಳ ಫೇಮಸ್ ಆಗಿವೆ. ಅದರಲ್ಲೂ ನಾವಿಂದು ಈ ರಾಗಿ ರೊಟ್ಟಿ ಕುರಿತು ತಿಳಿದುಕೊಳ್ಳೋಣ. ರಾಗಿ ರೊಟ್ಟಿಯು ದೇಹಕ್ಕೆ ಬಹಳ ತಂಪು ನೀಡುವ ಅಂಶಗಳಲ್ಲಿ ಒಂದಾಗಿದೆ. ನೀವು ರಾಗಿಯನ್ನು ಹೆಚ್ಚು ಸೇವಿಸಿದರೆ ದೇಹವು ತಂಪಾಗಿರಲಿದೆ.

ಈ ರಾಗಿಯಲ್ಲಿ ನಾರಿನಂಶ, ವಿಟಮಿನ್ ಮತ್ತು ಹೆಚ್ಚು ನಾರಿನ ಅಂಶಗಳಿವೆ. ಹೆಚ್ಚು ಫೈಬರ್ನಿಂದ ಇದು ಕೂಡಿರಲಿದೆ. ದೇಹಕ್ಕೆ ಅಗತ್ಯ ಕಬ್ಬಿಣಾಂಶಕ್ಕೆ ರಾಗಿ ಸೇವನೆ ಬಹಳ ಉತ್ತಮ. ಇದು ದೇಹದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಹೀಗಾಗಿ ರಾಗಿ ಮುದ್ದೆ, ಅಂಬಲಿ, ರೊಟ್ಟಿ ಮಾಡಿ ಸವಿಯುವುದು ನೋಡಬಹುದು.
ನಾವಿಂದು ಸುಲಭವಾಗಿ ಮನೆಯಲ್ಲೇ ಈ ರಾಗಿ ರೊಟ್ಟಿ ಮಾಡಿ ಸವಿಯುವ ಕುರಿತಂತೆ ತಿಳಿದುಕೊಳ್ಳೋಣ. ಅದರಲ್ಲೂ ಯಾವ ರೀತಿ ಈ ರಾಗಿ ರೊಟ್ಟಿ ಮಾಡಬೇಕು? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಗಿ ರೊಟ್ಟಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ರಾಗಿ ಹಿಟ್ಟು
ಎಣ್ಣೆ
ಉಪ್ಪು
ನೀರು
ರಾಗಿ ರೊಟ್ಟಿ ಮಾಡುವ ವಿಧಾನವೇನು?
ಮೊದಲಿಗೆ ಒಂದು ಪಾತ್ರೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ನೀರು ಹಾಕಿಕೊಂಡು ಕುದಿಯಲು ಬಿಡಿ. ಅಳತೆ ಲೋಟದಲ್ಲಿ ಒಂದೂವರೆ ಕಪ್ ನೀರು ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ನೀರು ಕುದಿಯುವಾಗ ಈಗ 2 ಕಪ್ ರಾಗಿ ಹಿಟ್ಟು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ನಂತರ ನೀರಿನಲ್ಲಿ ರಾಗಿ ಹಿಟ್ಟು ಮಿಕ್ಸ್ ಆಗುವಂತೆ ಕಲಸಿಕೊಳ್ಳಿ. ಸ್ಪೂನ್ನಿಂದ ಮಿಕ್ಸ್ ಮಾಡಿದ ಬಳಿಕ ಮುಚ್ಚಳ ಮುಚ್ಚಿ 10ರಿಂದ 15 ನಿಮಿಷ ಬಿಡಿ.
ನಂತರ ಮುಚ್ಚಳ ತೆಗೆದು ಸ್ವಲ್ಪ ಸ್ವಲ್ಪ ನೀರನ್ನು ಕೈಗೆ ಹಚ್ಚಿಕೊಳ್ಳುತ್ತಾ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಮಿಕ್ಸ್ ಮಾಡಿಕೊಳ್ಳಬೇಕು, ಗಟ್ಟಿಯಿದ್ದರೆ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿ ಹದ ಮಾಡಬೇಕು. ಚಪಾತಿ ಹಿಟ್ಟಿನಂತೆ ಹದಕ್ಕೆ ಬಂದಾಗ ಒಂದು ಉಂಡೆ ತೆಗೆದುಕೊಂಡು ಲಟ್ಟಿಸಬೇಕು.
ಮೊದಲು ಕೈಯಲ್ಲಿ ಸ್ವಲ್ಪ ಸಮಯ ತಟ್ಟಿಕೊಳ್ಳಬೇಕು ಹಪ್ಪಳದಷ್ಟು ದೊಡ್ಡದಾಗುವವರೆಗೂ ಎರಡು ಕೈ ಸಹಾಯದಿಂದ ತಟ್ಟಿಕೊಳ್ಳಿ, ಅನಂತರ ಪ್ಲಾಸ್ಟಿಕ್ ಮೇಲೆ ನೀರು ಹಾಕಿಕೊಂಡು ಅಥವಾ ಬಾಳೆ ಎಲೆ ಮೇಲೆ ಎಣ್ಣೆ ಹಚ್ಚಿಕೊಂಡು ಇದನ್ನು ಇಟ್ಟು ತಟ್ಟಿಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ತಟ್ಟಿಕೊಳ್ಳಿ. ಎಷ್ಟು ತೆಳುವಾಗಿ ತಟ್ಟಿಕೊಳ್ಳಲು ಸಾಧ್ಯವೋ ಅಷ್ಟು ತೆಳುವಾಗಿ ತಟ್ಟಿಕೊಳ್ಳಿ, ಬಳಿಕ ಈಗ ಕಾವಲಿ ಮೇಲೆ ಎಣ್ಣೆ ಹಚ್ಚಿಕೊಂಡು ರೊಟ್ಟಿ ಹಾಕಿ ಕಾಯಿಸಿಕೊಳ್ಳಿ ಎರಡೂ ಕಡೆ ರೋಸ್ಟ್ ಆಗುವಂತೆ ಕಾಯಿಸಿಕೊಳ್ಳಿ. ಹಾಗೆ ಮೇಲೆ ಸ್ವಲ್ಪ ಎಣ್ಣೆ ಹಾಕಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ರಾಗಿ ರೊಟ್ಟಿ ರೆಡಿಯಾಗುತ್ತದೆ, ನೀವು ಕೂಡ ಮನೆಯಲ್ಲಿ ಈ ರೀತಿ ರೊಟ್ಟಿ ಮಾಡಿ ನೋಡಿ.



Click it and Unblock the Notifications
