Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬೇಸಿಗೆಯಿದ್ದರೂ ದೇಹ ಮಾತ್ರ ತಂಪಾಗಿಡಲಿದೆ ಈ ರಾಗಿ ಹಾಲು! ನಿಮಿಷದಲ್ಲಿ ಮಾಡಿ!
ಬೇಸಿಗೆಯ ದಿನದಲ್ಲಿ ನೀವು ದೇಹವನ್ನು ತಂಪಾಗಿಡುವ ಕಾರಣದಿಂದ ಜ್ಯೂಸ್ ಕುಡಿಯುವುದು ಬಹಳ ಮುಖ್ಯವಾಗುತ್ತೆ. ಬೇಸಿಗೆಯಲ್ಲಿ ದೇಹ ವಿಪರೀತವಾಗಿ ದಣಿಯುವುದು ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಬಹುದು. ಅದ್ರಲ್ಲೂ ಬೇಸಿಗೆಯ ಈ ಸಮಯದಲ್ಲಿ ನಿಮ್ಮ ದೇಹಕ್ಕೆ ಹೆಚ್ಚು ನೀರಿನ ಅಂಶ ಅಗತ್ಯವಾಗಿ ಬೇಕಾಗುತ್ತದೆ. ಹಾಗೆ ದೇಹವು ಬಿಸಿಲಿನಲ್ಲಿ ದೇಹವು ಬಹಳಷ್ಟು ಸಮಸ್ಯೆಗಳ ಎದುರಿಸುತ್ತದೆ
ಹೀಗಾಗಿ ಬಿಸಿಲಿನ ಈ ಸಮಯದಲ್ಲಿ ದೇಹ ತಂಪಾಗಿಡಲು ರಾಗಿಯಿಂದ ಮಾಡುವ ಬಹಳ ರುಚಿಕರವಾದ ಹಾಲು ಮಾಡುವ ಕುರಿತು ತಿಳಿಯೋಣ. ರಾಗಿ ಹಾಲು ನಿಮ್ಮ ದೇಹಕ್ಕೆ ಬಹಳ ಉತ್ತಮ ಶಕ್ತಿ ನೀಡಲಿದೆ. ರಾಗಿ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ರಾಗಿಯಲ್ಲಿನ ಕ್ಯಾಲ್ಸಿಯಂ ನಿಮಗೆ ಬಹಳ ಉತ್ತಮ. ಇದು ಮೂಳೆಗಳನ್ನು ಬಲಪಡಿಸುತ್ತದೆ, ಮಧುಮೇಹವನ್ನು ನಿಯಂತ್ರಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಹೀಗಾಗಿ ರಾಗಿ ಬಳಸಿಕೊಂಡು ರಾಗಿ ರೊಟ್ಟಿ, ಮುದ್ದೆ, ದೋಸೆ, ಲಡ್ಡು ಹೀಗೆ ಹಲವು ಬಗೆಯ ತಿಂಡಿ ಮಾಡುವುದು ನೋಡಬಹುದು. ಹಾಗೆ ರಾಗಿ ಅಂಬಲಿ ಹಾಗೂ ರಾಗಿ ಹಾಲು ದೇಹಕ್ಕೆ ಬಹಳ ಉತ್ತಮ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಜೊತೆಗೆ ದೇಹಕ್ಕೆ ಶಕ್ತಿ ಮೂಲವು ಇದಾಗಲಿದೆ. ಹೀಗಾಗಿ ನಾವಿಂದು ಬೇಸಿಗೆಯ ಸಮಯದಲ್ಲಿ ಮನೆಯಲ್ಲಿ ಸವಿಯಲು ಈ ರಾಗಿ ಹಾಲು ಮಾಡುವ ಕುರಿತು ತಿಳಿಯೋಣ. ರಾಗಿ ಹಾಲು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ರಾಗಿ ಹಾಲು ಮಾಡಲು ಬೇಕಾಗುವ ವಸ್ತುಗಳು
- ರಾಗಿ
- ಬೆಲ್ಲ
- ಚಿಟಿಕೆ ಉಪ್ಪು
- ಗೋಡಂಬಿ
- ನೆನೆಸಿಟ್ಟ ಬಾದಾಮಿ
- ಏಲಕ್ಕಿ
- ಹಾಲು
ರಾಗಿ ಹಾಲು ಮಾಡುವ ಸುಲಭದ ವಿಧಾನವೇನು?
ಮೊದಲು ರಾಗಿ ಹಿಟ್ಟನ್ನು ಜರಡಿ ಹಿಡಿದು ನುಣ್ಣಗಿರುವ ಪುಡಿಯನ್ನು ತೆಗೆದುಕೊಂಡು ಇಟ್ಟುಕೊಳ್ಳಿ. ನಂತರ ಅದನ್ನು ಒಂದು ಬೌಲ್ಗೆ ಹಾಕಿ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿಕೊಳ್ಳಿ. ಇನ್ನೊಂದು ಕಡೆ ಒಲೆ ಮೇಲೆ ಪಾತ್ರೆ ಇಟ್ಟು 2 ನೀರು ಹಾಕಿ ಬಿಸಿಯಾಗಲು ಬಿಡಿ. ನೀರು ಬಿಸಿಯಾದಾಗ ಮಿಕ್ಸ್ ಮಾಡಿರುವ ಈ ರಾಗಿ ಹಿಟ್ಟನ್ನು ಅದಕ್ಕೆ ಹಾಕಿ ಮಿಶ್ರಣ ಮಾಡಿ ಬಿಸಿಯಾಗಲು ಬಿಡಿ.
ಚೆನ್ನಾಗಿ ಕುದಿಬರಲು ಆರಂಭಿಸಿದಾಗ ಒಲೆ ಆಫ್ ಮಾಡಿ ಇಳಿಸಿಕೊಂಡು ತಣ್ಣಗಾಗಲು ಬಿಡಿ. ಈಗ ಇನ್ನೊಂದು ಕಡೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬಾದಾಮಿ ಕಾಳುಗಳು, ಗೋಡಂಬಿ, ಹಾಕಿಕೊಂಡು ಕುದಿಸಿಕೊಂಡ ರಾಗಿ ಹಿಟ್ಟು ಹಾಕಿ ಬಳಿಕ ಇದಕ್ಕೆ ಚಿಟಿಕೆ ಉಪ್ಪು, ಬೆಲ್ಲ, ಏಲಕ್ಕಿ ಪುಡಿ ಹಾಕಿಕೊಂಡು ರುಬ್ಬಿಕೊಳ್ಳಬೇಕು. ನುಣ್ಣಗೆ ಆಗುವವರೆಗೂ ಪುಡಿ ಮಾಡಿಕೊಳ್ಳಿ.
ಅನಂತರ ಇದನ್ನು ಒಂದು ಪಾತ್ರೆಗೆ ಹಾಕಿಕೊಂಡು ಈಗ ಅದೇ ಮಿಕ್ಸರ್ಗೆ 1 ಗ್ಲಾಸ್ ಹಾಲು ಹಾಕಿ 2 ಸುತ್ತು ರುಬ್ಬಿಕೊಂಡು ಅದನ್ನು ಕೂಡ ಇದೇ ಪಾತ್ರೆಗೆ ಹಿಟ್ಟಿನ ಜೊತೆಗೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಅನಂತರ ಫ್ರಿಡ್ಜ್ನಲ್ಲಿ ತಣ್ಣಗಾಗಲು ಇಡಿ. ಇಲ್ಲವೆ ಐಸ್ ಕ್ಯೂಬ್ ಇದ್ದರೆ ಹಾಕಿಕೊಂಡು ಇದನ್ನು ಕುಡಿಯಬಹುದು.
ಬೇಸಿಗೆಯಲ್ಲಿ ಇದು ಬಹಳ ಉತ್ತಮ ಖಾದ್ಯ, ದೇಹವನ್ನು ತಂಪಾಗಿಸುವ ಜೊತೆಗೆ ಹಲವು ರೀತಿಯ ಸಮಸ್ಯೆಯಿಂದಲೂ ನಿಮ್ಮನ್ನು ಪಾರು ಮಾಡಲಿದೆ. ಯಾವ ಸಮಯದಲ್ಲಿ ಬೇಕಾದರು ನೀವು ಇದನ್ನು ಸವಿಯಬಹುದು.



Click it and Unblock the Notifications

