Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ರಾಗಿಯಿಂದ 2 ಬಗೆಯ ಇಡ್ಲಿ ರೆಸಿಪಿ: ಒಂದೇ ಗಂಟೆಯಲ್ಲಿ ರೆಡಿ ಮಾಡಬಹುದು ರಾಗಿ ಇಡ್ಲಿಗೆ ಹಿಟ್ಟು
ರಾಗಿ ಇಡ್ಲಿ ಟೇಸ್ಟ್ ಮಾಡಿದ್ದೀರಾ? ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅತ್ಯುತ್ತಮ ಬ್ರೇಕ್‌ಫಾಸ್ಟ್, ಇನ್ನು ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಮಧುಮೇಹಿಗಳಿಗೆ ಈ ರಾಗಿ ಇಡ್ಲಿ ತುಂಬಾ ಒಳ್ಳೆಯದು, ಇದನ್ನು ಚಟ್ನಿ ಅಥವಾ ಸಾಂಬಾರ್ ಜೊತೆ ಸೇವಿಸಿದರೆ ತುಂಬಾ ಚೆನ್ನಾಗಿರಲಿದೆ.

Image Courtesy: indianhealthyrecipes
ರೆಸಿಪಿ 1
ಮೊದಲಿಗೆ ಇಡಿ ರಾಗಿ ನೆನೆ ಹಾಕಿ ಮಾಡುವ ರೆಸಿಪಿ
ನೋಡೋಣ
1 ಕಪ್ ರಾಗಿ
1/2 ಕಪ್ ಉದ್ದು
ಸ್ವಲ್ಪ ಅವಲಕ್ಕಿ
ಮಾಡುವ ವಿಧಾನ
ನೀವು ರಾಗಿಯನ್ನು 8-10 ಗಂಟೆ ಕಾಲ ನೆನೆ ಹಾಕಿ,
ರಾಗಿ ನೆನೆ ಹಾಕುವಾಗಲೇ ಉದ್ದು ಕೂಡ ನೆನೆ ಹಾಕಿ
ನಂತರ ರಾಗಿಯಲ್ಲಿನ ನೀರು ಸೋಸಿ ನಂತರ ರುಬ್ಬಿ ಒಂದು ಪಾತ್ರೆಗೆ ಹಾಕಿ, ಬಳಿಕ
ಉದ್ದು ರುಬ್ಬಿ ಅದೇ ಪಾತ್ರೆಗೆ ಹಾಕಿ, ಒಂದು ಮುಷ್ಠಿ ಅವಲಕ್ಕಿ ಕೂಡ ರುಬ್ಬಿ
ಸೇರಿಸಿ, ಬಳಿಕ ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ 8 ಗಂಟೆ ನೀಡಿ
ಹಿಟ್ಟು ಚೆನ್ನಾಗಿ ಹುದುಗು ಬಂದಿರುತ್ತದೆ.
ಈಗ ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಇಡ್ಲಿ ಹಿಟ್ಟು ಹಾಕಿ 15 ನಿಮಿಷ ಬೇಯಿಸಿ
ಈಗ ಬಿಸಿ ಬಿಸಿ ಇಡ್ಲಿ ಮೇಲೆ ಸ್ವಲ್ಪ ಬೆಣ್ಣೆ ಹಾಕಿ ಖಾರ ಚಟ್ನಿ ಅಥವಾ ಸಾಂಬಾರ್
ಜೊತೆ ಸವಿಯಲು ನೀಡಿ.
ರೆಸಿಪಿ 2
ರಾಗಿ ಇಡ್ಲಿ ತಕ್ಷಣ ಮಾಡಬೇಕೆಂದರೆ ಏನು ಮಾಡಬೇಕು?
ಬೇಕಾಗುವ ಸಾಮಗ್ರಿ
2 ಚಮಚ ಎಣ್ಣೆ
1 ಚಮಚ ಸಾಸಿವೆ
1 ಚಮಚ ಕಡ್ಲೆ ಬೇಳೆ
1 ಚಮಚ ಜೀರಿಗೆ
ಚಿಟಿಕೆಯಷ್ಟು ಇಂಗು
2 ಚಮಚ ಗೋಡಂಬಿ
ಹಸಿಮೆಣಸು 2
1 ಚಮಚ ಶುಂಠಿ ಪೇಸ್ಟ್
ಸ್ವಲ್ಪ ಕರಿಬೇವು
1 ಕಪ್ ರವೆ
1ಕಪ್ ರಾಗಿ ಹಿಟ್ಟು
1 ಚಮಚ ಉಪ್ಪು
1/2 ಚಮಚ ಉಪ್ಪು
1 ಕಪ್ ಮೊಸರು
ನೀರು
ಮಾಡುವ ವಿಧಾನ
ಮೊದಲಿಗೆ ನೀವು ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ
ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಕಡ್ಲೆ ಬೇಳೆ, ಉದ್ದಿನ ಬೇಳೆ, 1 ಚಮಚ
ಜೀರಿಗೆ, ಚಿಟಿಕೆಯಷ್ಟು ಇಂಗು ಹಾಕಿ
ಈಗ ಹಸಿ ಮೆಣಸು, ಸ್ವಲ್ಪ ಕರಿಬೇವು ಹಾಕಿ
ನಂತರ ರವೆ ಹಾಕಿ 2 ಚಮಚ ರೋಸ್ಟ್ ಮಾಡಿ.
ನಂತರ ರಾಗಿ ಹಿಟ್ಟು ಸೇರಿಸಿ 2 ಚಮಚ ಹಿಟ್ಟು ಹಾಕಿ ರೋಸ್ಟ್ ಮಾಡಿ
ಈಗ ಅವುಗಳನ್ನು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ
ಈಗ ಒಂದ ಪಾತ್ರೆಗೆ ಮೊಸರು ಹಾಕಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ
ನಂತರ ಹುರಿದ ಹಿಟ್ಟುಗಳನ್ನು ಹಾಕಿ, ಇಡ್ಲಿಯ ಹದಕ್ಕೆ ನೀರು ಸೇರಿಸಿ, ನಂತರ 20
ನಿಮಿಷ ಬಿಡಿ, ಮಿಶ್ರಣ ತುಂಬಾನೇ ಮೃದುವಾಗುವುದು
ಈಗ ಹಿಟ್ಟು ಚೆನ್ನಾಗಿ ಕಲೆಸಿ, ಇಡ್ಲಿ ತಟ್ಟೆಗೆ ಎಣ್ಣೆ ಸವರಿ ಹಾಕಿ 15 ನಿಮಿಷ
ಬೇಯಿಸಿದರೆ ಇಡ್ಲಿ ರೆಡಿ. ಇದನ್ನು ಚಟ್ನಿ ಜೊತೆ ಸವಿಯಿರಿ.
ಈ ಇಡ್ಲಿಯ ಪ್ರಯೋಜನವೆಂದರೆ ಮಕ್ಕಳಿಗೆ, ದೊಡ್ಡವರಿಗೆ ಶಕ್ತಿಯನ್ನು ತುಂಬುತ್ತದೆ
ಮಧುಮೇಹವನ್ನು ನಿಯಂತ್ರಿಸಲು ಸಹಕಾರಿ, ಇದನ್ನು ಮಾಡಿದಾಗ ಮಧುಮೇಹಿಗಳಿಗೆ ಪ್ರತ್ಯೇಕ ಅಡುಗೆ ಮಾಡಬೇಕಾಗಿ್ಲ್ಲ, ಎಲ್ಲರು ಜೊತೆಯಾಗಿ ಸವಿಯಬಹುದು. ಮಕ್ಕಳ ಬೆಳವಣಿಗೆಗೆ ಕೂಡ ಸಹಕಾರಿ.



Click it and Unblock the Notifications