Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ರಾಗಿ ಹಾಲುಬಾಯಿ ಹೀಗೆ ಮಾಡಿದರೆ ಮೈಸೂರು ಪಾಕ್ನಷ್ಟೇ ರುಚಿಯಾಗಿರುತ್ತೆ
Recipes
oi-Reena TK
Posted By: Reena TK
ರಾಗಿ ಹಾಲುಬಾಯಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ಸವಿಯುವ ಸಿಹಿ ತಿನಿಸು. ಈ ರಾಗಿ ಹಾಲು ಬಾಯಿ ಮಾಡುವುದು ಕೂಡ ತುಂಬಾನೇ ಸುಲಭ, ಅಲ್ಲದೆ ಇದನ್ನು ತಯಾರಿ ಮಾಡಲು ನಿಮಗೆ ಹೆಚ್ಚಿನ ಸಮಯ ಕೂಡ ಬೇಕಾಗಿಲ್ಲ, ಬಲು ಸುಲಭವಾಗಿ ಮಾಡಬಹುದಾದ ಮೈಸೂರು ಪಾಕಿನಷ್ಟೇ ರುಚಿಯಾದ ಹಾಲುಬಾಯಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ರಾಗಿ
1 ಕಪ್ ತೆಂಗಿನ ತುರಿ
ಅರ್ಧ ಕಪ್ ಬೆಲ್ಲದ ಪುಡಿ
ಡ್ರೈಫ್ರೂಟ್ಸ್ (ಇದ್ದರೆ ಬಳಸಬಹುದು)
ಚಿಟಿಕೆಯಷ್ಟು ಉಪ್ಪು (ಒಂದು ಚಿಕ್ಕ ಕಲ್ಲು ಕಲ್ಲುಪ್ಪು)
ಏಲಕ್ಕಿ ಪುಡಿ ಅರ್ಧ ಚಮಚ
2 ಚಮಚ ತುಪ್ಪ
ಮಾಡುವ ವಿಧಾನ:
- ಒಂದು ಕಪ್ ರಾಗಿಯನ್ನು ತೊಳೆದು ನೀರಿನಲ್ಲಿ 8-10 ಗಂಟೆ ನೆನೆ ಹಾಕಿ. ಸಂಜೆ ಮಾಡುವುದಾದರೆ ಬೆಳಗ್ಗೆ ನೆನೆ ಹಾಕಿ
- ನಂತರ ಅದಕ್ಕೆ ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ, ನಂತರ ಅದಕ್ಕೆ ಮತ್ತೆ ಅರ್ಧ ಕಪ್ ನೀರು ಸೇರಿಸಿ ಮತ್ತೆ ಒಂದು ಒಂದೆರಡು ರೌಂಡ್ ತಿರುಗಿಸಿ ನೀವು ಒಂದು ಪಾತ್ರೆಗೆ ಸೋಸಿ. ನೀವು ಸೋಸಲು ಬಟ್ಟೆ ಅಥವಾ ಸೋಸಣಿಗೆ ಬಳಸಹುದು)
- ನಂತರ ನೀವು ಒಂದು ಕಪ್ ತೆಂಗಿನ ತುರಿಗೆ ಒಂದು ಕಪ್ ನೀರು ಸೇರಿಸಿ ಅದನ್ನು ಕೂಡ ನುಣ್ಣನೆ ರುಬ್ಬಿ, ರಾಗಿ ಹಾಲು ಸಂಗ್ರಹಿಸಿಟ್ಟ ಪಾತ್ರೆಗೆ ತೆಂಗಿನ ಹಾಲು ಕೂಡ ಸೇರಿಸಿ
- ಒಂದು ಕಪ್ ಬೆಲ್ಲ ಸೇರಿಸಿ ಮಿಕ್ಸ್ ಮಾಡಿ, ಬೆಲ್ಲದ ಪುಡಿ ಅಥವಾ ಬೆಲ್ಲವನ್ನು ಕರಗಿಸಿ ಹಾಕಿ ನಂತರ ಅದನ್ನು ಮತ್ತೊಮ್ಮೆ ಸೋಸಿ
- ನಂತರ ಬಾಣಲೆಗೆ ಹಾಕಿ ಸೌಟ್ನಿಂದ ತಿರುಗಿಸುತ್ತಾ ಬಿಸಿ ಮಾಡಿ
- ಮಿಶ್ರಣ ಗಟ್ಟಿಯಾಗುವವರೆಗೆ ತಿರುಗಿಸುತ್ತಾ ಬಿಸಿ ಮಾಡಿ
- ನೀವು ಹೀಗೆ ಕರಗಿಸುವಾಗ ಗ್ಯಾಸ್ ಉರಿ ಕಡಿಮೆ ಇಡಿ, ಇಲ್ಲದಿದ್ದರೆ ಗಟ್ಟಿಯಾಗುವುದು. ಈಗ ಏಲಕ್ಕಿ ಪುಡಿ ಹಾಗೂ 2 ಚಮಚ ತುಪ್ಪ ಹಾಕಿ ಮಿಕ್ಸ್ ಮಾಡಿ, ಗ್ಯಾಸ್ಸ್ಟೌವ್ ಆಫ್ ಮಾಡ
- ಮಿಶ್ರಣ ಗಟ್ಟಿಯಾಗುವಷ್ಟು ಹೊತ್ತು ಹೀಗೆ ತಿರುಗಿಸಿ
- ನಂತರ ತಟ್ಟೆಗೆ ತುಪ್ಪ ಸವರಿ ನಂತರ ಗಟ್ಟಿ ಮಿಶ್ರಣ ಸುರಿಯಿರಿ.
- ಅದರ ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ ಹಾಕಿ (ಇದ್ದರೆ ಮಾತ್ರ ಇದನ್ನು ಹಾಕಿ)
- ನಂತರ ಮಿಶ್ರಣ ಸ್ವಲ್ಪ ಗಟ್ಟಿಯಾದ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ನಂತರ ಟೇಸ್ಟ್ ಮಾಡಿ ನೋಡಿ ಸೂಪರ್ ಆಗಿರುತ್ತದೆ.
- ಮಕ್ಕಳಿಗೆ ಇದನ್ನು ಮಾಡಿ ಕೊಟ್ಟರೆ ತುಂಬಾನೇ ಇಷ್ಟಪಟ್ಟು ತಿಂತಾರೆ.
ಮಕ್ಕಳಿಗೆ ಆರೋಗ್ಯಕರವಾದ ಸ್ನ್ಯಾಕ್ಸ್ ಇದಾಗಿದೆ, ಇಂಥ ಸ್ನ್ಯಾಕ್ಸ್ ಮಾಡಿಕೊಟ್ಟರೆ ಇಷ್ಟಪಟ್ಟು ತಿಂತಾರೆ, ಅವರ ಆರೋಗ್ಯಕ್ಕೆ ಅವಶ್ಯಕವಾದ ಪೌಷ್ಠಿಕಾಂಶ ಕೂಡ ದೊರೆಯುತ್ತದೆ. ಇದನ್ನು ಮಾಡಿ ಒಂದೆರಡು ದಿನದವರೆಗೆ ಇಡಬಹುದು, ಮಾಡುವುದಕ್ಕೆ ಸುಲಭವಾಗಿರುವುದರಿಂದ ನಿಮಗೆ ಯಾವಾಗ ಬೇಕೋ ಆವಾಗ ಮಾಡಿ ತಿನ್ನಬಹುದು.
Comments
[ of 5 - Users]
Story first published: Monday, February 3, 2025, 11:53 [IST]
Other articles published on Feb 3, 2025



Click it and Unblock the Notifications