Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಕ್ಕಿ, ಉದ್ದು ಬಳಸಿ ಈ ರೀತಿ ರಾಗಿ ದೋಸೆ ಮಾಡಿ..! ಇದು ಆರೋಗ್ಯಕ್ಕೆ ಬಹಳ ಉತ್ತಮ..!
ರಾಗಿ ಆರೋಗ್ಯಕ್ಕೆ ಎಷ್ಟೊಂದು ಒಳ್ಳೆಯದು ಎಂಬುದು ನಿಮಗೆ ತಿಳಿದಿರಬಹುದು. ರಾಗಿ ಮುದ್ದೆ, ರಾಗಿ ಅಂಬ್ಲಿ, ರಾಗಿ ರೊಟ್ಟಿ, ರಾಗಿ ಗಂಜಿ ಹೀಗೆ ಹತ್ತಾರು ಬಗೆಯ ಖಾದ್ಯ ಮಾಡಿ ಸವಿದಿರುತ್ತೀರಿ. ಅದರಲ್ಲೂ ಈ ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಎಲ್ಲರಿಗೂ ಈ ರಾಗಿಯಿಂದ ಮಾಡಿರುವ ಪದಾರ್ಥಗಳ ಸವಿಯಬಹುದು. ಏಕೆಂದರೆ ರಾಗಿ ಪಾಲಿಶ್ ಮಾಡದೆ ಬಳಸುವುದರಿಂದ ಅತ್ಯುತ್ತಮ ಫೈಬರ್ ಪಡೆಯಬಹುದು. ಹಾಗೆ ರಾಗಿ ಆರೋಗ್ಯಕರ ದೇಹಕ್ಕೆ ಬಹಳ ಉತ್ತಮ.
ಇನ್ನು ರಾಗಿಯಲ್ಲಿ ಅತ್ಯಧಿಕ ಪ್ರಮಾಣದ ಕ್ಯಾಲ್ಸಿಯಂ ಸಿಗಲಿದೆ. ಜೀರ್ಣಕ್ರಿಯೆ ಸಮಸ್ಯೆಯ ನಿವಾರಣೆಗೆ ರಾಗಿಯಲ್ಲಿ ಇರುವಂತಹ ನಾರಿನ ಅಂಶವು ಕಾರಣವಾಗಲಿದೆ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸಮಸ್ಯೆಗಳು ನಿವಾರಣೆಯಾಗಲಿದೆ. ಇದರಲ್ಲಿ ವಿಟಮಿನ್ ಸಿ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸಲಿದೆ. ಹೀಗಾಗಿ ನಿಮ್ಮ ದೈನಂದಿನ ಆಹಾರದಲ್ಲಿ ರಾಗಿ ಬೆರೆಸುವುದು ಬಹಳ ಮುಖ್ಯ.

ಇಷ್ಟೊಂದು ಆರೋಗ್ಯಕರ ಅಂಶ ಹೊಂದಿರುವ ರಾಗಿಯಲ್ಲಿ ನಾವಿಂದು ದೋಸೆ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ. ಆದ್ರೆ ನೀವು ಸುಲಭದ ವಿಧಾನದಲ್ಲಿ ರಾಗಿ ದೋಸೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ, ನೀವು ಬರೀ ರಾಗಿ ಹಿಟ್ಟು ಬಳಸಿ ದೋಸೆ ಮಾಡಿದರೆ ಅದರ ರುಚಿ ಸಾಮಾನ್ಯ ಎನ್ನಬಹುದು. ಆದ್ರೆ ನಾವಿಂದು ಸ್ಪೆಷಲ್ ರಾಗಿ ದೋಸೆ ಮಾಡುವ ಕುರಿತು ತಿಳಿದುಕೊಳ್ಳೋಣ.
ಈ ರಾಗಿ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ರಾಗಿ ದೋಸೆ ಮಾಡಲು ಬೇಕಾಗುವ ವಸ್ತುಗಳು
- ರಾಗಿ ಹಿಟ್ಟು
- ಅಕ್ಕಿ
- ಮೆಂತ್ಯ
- ಉದ್ದಿನ ಬೇಳೆ
- ಕಡಲೆ ಬೇಳೆ
- ಅವಲಕ್ಕಿ
- ಉಪ್ಪು
- ಎಣ್ಣೆ
ರಾಗಿ ದೋಸೆ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ನಲ್ಲಿ 1 ಕಪ್ ಅಕ್ಕಿ, ಉದ್ದಿನ ಬೇಳೆ ಕಾಲು ಕಪ್, 2 ಸ್ಪೂನ್ ಸಬ್ಬಕ್ಕಿ, 2 ಸ್ಪೂನ್ ಅವಲಕ್ಕಿ, 2 ಸ್ಪೂನ್ ಕಡಲೆ ಬೇಳೆ, 1 ಸ್ಪೂನ್ ಮೆಂತ್ಯವನ್ನು ಒಂದು ಬೌಲ್ಗೆ ಸೇರಿಸಿ ನೀರು ಹಾಕಿ ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಈ ಎಲ್ಲಾ ಪದಾರ್ಥಗಳು ಮುಳುಗುವಷ್ಟು ನೀರು ಹಾಕಿಕೊಂಡು 3ರಿಂದ 4 ಗಂಟೆಗಳ ಕಾಲ ನೆನೆಯಬೇಕು.
ಇಷ್ಟು ಸಮಯ ನೆನೆದ ನಂತರ ನೀರನ್ನು ತೆಗೆದು ಅದನ್ನು ಬೌಲ್ಗೆ ಹಾಕಿಟ್ಟುಕೊಳ್ಳಿ. ನಂತರ ಒಂದು ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ 2 ಕಪ್ ಅಳತೆಯಲ್ಲಿ ರಾಗಿ ಹಿಟ್ಟನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕೈಯಿಂದ ಚೆನ್ನಾಗಿ ಕಲಸಿಕೊಳ್ಳಿ.
ಇದು ಕಲಸಿಕೊಳ್ಳುವಾಗ ಗಟ್ಟಿಯಾಗುತ್ತದೆ. ಹೀಗಾಗಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು. ಇಡ್ಲಿ ಹಿಟ್ಟಿನಂತೆ ಗಟ್ಟಿಯಾಗಿ ಬರುವಂತೆ ಮಾಡಿಕೊಳ್ಳಬೇಕು. ಗಟ್ಟಿಯಾಗಿರಬೇಕು., ನಂತರ ಇದಕ್ಕೆ ತಟ್ಟೆಯ ಮುಚ್ಚಿ ಇಡೀ ದಿನ ರಾತ್ರಿ ಬಿಡಬೇಕು, ಮಾರನೆ ದಿನ ಬೆಳಗ್ಗೆ ಈ ಹಿಟ್ಟನ್ನು ತೆಗೆದು ಮತ್ತೆ ಕಲಸಿಕೊಳ್ಳಬೇಕು. ಇದು ಉಬ್ಬಿ ಬಂದಿರುತ್ತದೆ.
ಈಗ ಸ್ವಲ್ಪ ನೀರು ಹಾಕಿಕೊಂಡು ಮತ್ತೆ ಕಲಸಿಕೊಳ್ಳಬೇಕು. ದೋಸೆ ಮಾಡಲು ಯಾವ ಹದಕ್ಕೆ ಬೇಕೋ ಅಷ್ಟು ನೀರು ಹಾಕಿ ಹದ ಮಾಡಿ. ನೀವು ಉದ್ದಿನ ದೋಸೆ ಮಾಡಲು ಬೇಕಾದ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಬಿಸಿ ಮಾಡಿಕೊಳ್ಳಿ. ಮೊದಲು ನೀರು ಚಿಮುಕಿಸಿಕೊಂಡು ಅದನ್ನು ಬಟ್ಟೆಯಿಂದ ಒರೆಸಿಕೊಳ್ಳಿ. ನಂತರ ಎಣ್ಣೆ ಹಚ್ಚಿಕೊಳ್ಳದೆ ರಾಗಿ ಹಿಟ್ಟನ್ನು ಮಧ್ಯದಲ್ಲಿ ಹಾಕಿ ಸುತ್ತಲೂ ಹರಡಿಕೊಳ್ಳಿ. ಈ ದೋಸೆ ತೆಳುವಾಗ ಇರಲಿ. ಮೇಲೆ ಎಣ್ಣೆ ಹಾಕಿಕೊಂಡು ಎರಡೂ ಬದಿ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯ ದೋಸೆ ರೆಡಿಯಾಗುತ್ತದೆ.



Click it and Unblock the Notifications
