Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೂಲಂಗಿ ಮಜ್ಜಿಗೆ ಸಾರು ಮಾಡಿ ಸವಿದಿದ್ದೀರಾ? ಅನ್ನದೊಂದಿಗೆ ಅಮೃತದ ರುಚಿ ಇದು!!
ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವಂತಹ ಹಲವು ರೀತಿಯ ಖಾದ್ಯ ಮಾಡಿ ಸವಿಯುವುದು ನೋಡಿದ್ದೇವೆ. ಅದರಲ್ಲೂ ಮಜ್ಜಿಗೆ ಹುಳಿಯಂತಹ ಹಲವು ಖಾದ್ಯಗಳ ಮಾಡಿ ಸವಿಯುವುದು ನೋಡಿದ್ದೇವೆ. ಅದರಲ್ಲೂ ದೇಹದ ಆರೋಗ್ಯ ಹೆಚ್ಚಾಗುವಂತಹ ಖಾದ್ಯಗಳ ಮಾಡಿ ಸವಿಯುವುದು ನೋಡಿದ್ದೇವೆ. ಮಜ್ಜಿಗೆ ಹುಳಿಯಲ್ಲೂ ಹಲವು ಬಗೆಯಲ್ಲಿ ಮಾಡುವುದು ಅದ್ಭುತ ರುಚಿ ನೀಡಲಿದೆ.
ಇನ್ನು ಮೂಲಂಗಿ ಮಜ್ಜಿಗೆ ಸಾರು ನೀವು ಕೂಡ ಸವಿದಿರುತ್ತೀರಿ. ಊಟದ ಜೊತೆಗೆ ಅದ್ಭುತ ರುಚಿ ನೀಡುವ ಈ ಮೂಲಂಗಿ ಮಜ್ಜಿಗೆ ಸಾರು ಎಲ್ಲರಿಗೂ ಇಷ್ಟವಾಗುತ್ತೆ. ಮೂಲಂಗಿ ದೇಹಕ್ಕೆ ಎಷ್ಟು ಉತ್ತಮ ತರಕಾರಿ ಎಂಬುದು ನಿಮಗೆ ತಿಳಿದಿರಬಹುದು. ಮೂಲಂಗಿಯ ಸೇವನೆಯಿಂದ ಯಕೃತ್ ಮತ್ತು ಜಠರದ ಕಲ್ಮಶಗಳನ್ನು ನಿವಾರಿಸಲಿದೆ. ಕಾಮಾಲೆ ಎದುರಾದರೆ ಕಪ್ಪು ಮೂಲಂಗಿಯ ರಸವನ್ನು ಕುಡಿಸುವುದು ಬಹಳ ಉತ್ತಮ.

ಹಾಗೆ ಮೂಲಂಗಿ ತರಕಾರಿಯು ರಕ್ತ ಶುದ್ಧೀಕರಣಗೊಳಿಸಲು, ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆ ಸರಿಪಡಿಸಲಿದೆ. ಮಲಬದ್ದತೆಯ ಸಮಸ್ಯೆ, ಸ್ಥೂಲಕಾಯತೆ, ಜೀರ್ಣಕ್ರಿಯೆ, ಕರುಳಿನ ಆರೋಗ್ಯಕ್ಕೂ ಕೂಡ ಇದು ಬಹಳ ಮುಖ್ಯ. ಹೀಗಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಮೂಲಂಗಿ ಬಹಳ ಉತ್ತಮ ತರಕಾರಿಯಾಗಿದೆ. ಹಾಗಾದ್ರೆ ನಾವಿಂದುಜ ಈ ಮೂಲಂಗಿ ಮಜ್ಜಿಗೆ ಸಾರು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಮೂಲಂಗಿ ಮಜ್ಜಿಗೆ ಸಾರು ಅನ್ನದ ಜೊತೆಗಂತು ಅದ್ಭುತವಾದ ರುಚಿ ನೀಡಲಿದೆ. ಅದರಲ್ಲೂ ಮಧ್ಯಾಹ್ನದ ಸಮಯ ಬಿಸಿಲು ಹೆಚ್ಚಾದಾಗ ಈ ಸಾರು ತಂಪು ನೀಡಲಿದೆ. ಹಾಗಾದ್ರೆ ಈ ಮೂಲಂಗಿ ಮಜ್ಜಿಗೆ ಸಾರು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೂಲಂಗಿ ಮಜ್ಜಿಗೆ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ಮೂಲಂಗಿ
ಕೊತ್ತಂಬರಿ ಸೊಪ್ಪು
ಶುಂಠಿ
ಹಸಿ ಮೆಣಸು
ಜೀರಿಗೆ
ಬೆಳ್ಳುಳ್ಳಿ
ಮೊಸರು
ಉಪ್ಪು
ಎಣ್ಣೆ
ಮೂಲಂಗಿ ಮಜ್ಜಿಗೆ ಸಾರು ಮಾಡುವ ವಿಧಾನವೇನು?
ಮೊದಲಿಗೆ ಒಂದು ಮೂಲಂಗಿ ತೆಗೆದುಕೊಂಡು ಚೆನ್ನಾಗಿ ತೊಳೆದು ಅದನ್ನು ಸಣ್ಣದಾಗಿ ತುರಿದುಕೊಂಡು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪು, ಶುಂಠಿ, ಹಸಿ ಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ನೆನೆಯುವಷ್ಟು ನೀರು 2 ಸ್ಪೂನ್ ನೀರು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಇದಕ್ಕೆ ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಹಾಗೆ ಒಂದು ಈರುಳ್ಳಿಯನ್ನು ಕತ್ತರಿಸಿಕೊಂಡು ಇದಕ್ಕೆ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಸಾಲೆಯನ್ನು ಸಹ ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
2 ನಿಮಿಷದ ಬಳಿಕ ಇದಕ್ಕೆ ತುರಿದುಕೊಂಡಿರುವ ಮೂಲಂಗಿ ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿ ಮುಚ್ಚಳ ಮುಚ್ಚಿ 10 ನಿಮಿಷ ಹಾಗೆಯೇ ಬಿಡಿ. ಇದು ಬಿಸಿಯಲ್ಲಿ ಮೂಲಂಗಿ ಬೇಯುತ್ತದೆ. ಈಗ ಈ ಮೂಲಂಗಿ ಬೆಂದ ಬಳಿಕ ಇದನ್ನು ಒಂದು ಬೌಲ್‌ಗೆ ಹಾಕಿಕೊಂಡು ಅದಕ್ಕೆ ಮೊಸರನ್ನು ಹಾಕಿಕೊಂಡು ಉಪ್ಪು ಹಾಗೆ ಸ್ವಲ್ಪವೇ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮೂಲಂಗಿ ಮಜ್ಜಿಗೆ ಸಾರು ರೆಡಿಯಾಗುತ್ತದೆ, ಇದಕ್ಕೆ ಮತ್ತೆ ಒಗ್ಗರಣೆ ಹಾಕುವ ಅಗತ್ಯವಿಲ್ಲ. ಸುಲಭವಾಗಿ ಮಾಡಬಹುದು.



Click it and Unblock the Notifications
