Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮೂಲಂಗಿ ಚಟ್ನಿ ಟೇಸ್ಟ್ ಸೂಪರ್ ಆಗಿರುತ್ತದೆ: ಮೂಲವ್ಯಾಧಿಗೆ ತುಂಬಾ ಒಳ್ಳೆಯದು
ಮೂಲಂಗಿ ಎಂದರೆ ಕೆಲವರಿಗೆ ಇಷ್ಟವಾಗಲ್ಲ, ಅದರ ವಾಸನೆ ಇಷ್ಟವಿರಲ್ಲ, ರುಚಿ ಇಷ್ಟವಿರಲ್ಲ, ಮೂಲಂಗಿ ಬೇಡ್ವೆ ಬೇಡ ಎಂದು ಆ ಒಂದು ತರಕಾರಿಯನ್ನು ದೂರ ಮಾಡುವವರೇ ಅಧಿಕ, ಆದರೆ ಮೂಲಂಗಿಯಲ್ಲಿರುವ ಆರೋಗ್ಯಕರ ಗುಣ ನೋಡಿದರೆ ನೀವು ಅದನ್ನು ತಿನ್ನಲೇಬೇಕು.
ಇದು ರಕ್ತವನ್ನು ಶುದ್ಧೀಕರಿಸುತ್ತದೆ, ಮೂಲವ್ಯಾಧಿಯನ್ನು ತಡೆಗಟ್ಟುತ್ತದೆ. ನೀವು ಮೂಲಂಗಿಯಿಂದ ತುಂಬಾ ರುಚಿಯಾದ ಚಟ್ನಿ ತಯಾರಿಸಿ ತಿನ್ನಬಹುದು. ಈ ಟೇಸ್ಟ್ ನಿಮಗೆ ಖಂಡಿತ ತುಂಬಾನೇ ಇಷ್ಟವಾಗುವುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
2 ಚಮಚ ಎಣ್ಣೆ
1 ಚಮಚ ಕಡ್ಲೆ ಬೇಳೆ
1/2 ಜೀರಿಗೆ
1 ಚಮಚ ಕೊತ್ತಂಬರಿ ಬೀಜ
3 ಒಣ ಮೆಣಸು
3 ಎಸಳು ಬೆಳ್ಳುಳ್ಳಿ
1 ಇಂಚಿನ ಶುಂಠಿ
1 ಕಪ್ ಮೂಲಂಗಿ
1/4 ಚಮಚ ಅರಿಶಿಣ
2 ಚಮಚ ನೀರು
ಸ್ವಲ್ಪ ಹುಣಸೆಹಣ್ಣು
1/2 ಚಮಚ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ
1/2 ಚಮಚ ಸಾಸಿವೆ
ಕರಿಬೇವು
ಸ್ವಲ್ಪ ಇಂಗು
ಮಾಡುವುದು ಹೇಗೆ?
* ಮೊದಲಿಗೆ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ
* ಎಣ್ಣೆ ಬಿಸಿಯಾದಾಗ ಅದರಲ್ಲಿ ಚೆನ್ನಾ ಕಡ್ಲೆ, 1 ಚಮಚ ಉದ್ದಿನ ಬೇಳೆ, 1/2 ಚಮಚ
ಜೀರಿಗೆ, 1 ಚಮಚ ಕೊತ್ತಂಬರಿ ಬೀಜ, ಮೂರು ಒಣ ಮೆಣಸು ಹಾಕಿ.
* ಕಡಿಮೆ ಉರಿಯಲ್ಲಿ ಫ್ರೈ ಬೇಡಿ, ಕಡ್ಲೆಬೇಳೆ ಗೋಲ್ಡನ್ ಕಲರ್ ಬರುವವರೆಗೆ ಫ್ರೈ
ಮಾಡಿ.
* ನಂತರ 3 ಬೆಳ್ಳುಳ್ಳಿ, 1 ಇಂಚಿನಷ್ಟು ಶುಂಠಿ, 1 ಕಪ್ ಮೂಲಂಗಿ, 1/2 ಚಮಚ
ಅರಿಶಿಣ ಪುಡಿ ಸೇರಿಸಿ. ಒಂದು ನಿಮಿಷ ಸೌಟ್‌ನಿಂದ ಆಡಿಸಿ.
* ನಂತರ 2 ಚಮಚ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸೇವಿಸಿ.
* ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ
* ನಂತರ ತಣ್ಣಗಾದ ಮೇಲೆ ಬ್ಲೆಂಡರ್‌ನಲ್ಲಿ ಹಾಕಿ, ಸ್ವಲ್ಪ ಹುಣಸೆಹಣ್ಣು, ರುಚಿಗೆ
ತಕ್ಕ ಉಪ್ಪು ಸೇರಿಸಿ ರುಬ್ಬಿ.
* ರುಬ್ಬುವಾಗ ನೀರು ಸೇರಿಸಬೇಡಿ.
* ನಂತರ ಒಗ್ಗರಣೆ ಹಾಕಿ.
ಈ ಚಟ್ನಿ ಇಡ್ಲಿ, ದೋಸೆಗೆ ಸೂಪರ್ ಆಗಿರುತ್ತದೆ.



Click it and Unblock the Notifications
