Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ತಿಂಡಿಗೆ, ಊಟಕ್ಕೆ ಈ ಮೂಲಂಗಿ ಚಟ್ನಿ ಫಸ್ಟ್ ಕ್ಲಾಸ್..! ಮಾಡೋದು ಕೂಡ ಸುಲಭ!
ಮೂಲಂಗಿ ದೇಹಕ್ಕೆ ಎಷ್ಟೊಂದು ಉಪಯೋಗಕಾರಿ ಎಂಬುದು ನಮಗೆಲ್ಲಾ ತಿಳಿದಿದೆ. ಮೂಲಂಗಿಯಲ್ಲಿರುವ ಪ್ರತಿಯೊಂದು ಅಂಶವೂ ಕೂಡ ನಮ್ಮ ಆರೋಗ್ಯಕ್ಕೆ ಉತ್ತಮ. ಮೂಲಂಗಿ ಪೊಟ್ಯಾಶಿಯಂ, ವಿಟಮಿನ್ ಸಿ, ಫೋಲಿಕ್ ಆಸಿಡ್ ಅಂಶವಿರುತ್ತದೆ. ಕರಗುವ ಮತ್ತು ಕರಗದ ನಾರಿನಂಶದ ಸಮೃದ್ಧ ಮೂಲವಾಗಿದೆ. ಹಲವು ಆರೋಗ್ಯಕರ ಅಂಶ ಹೊಂದಿರುವ ಈ ಮೂಲಂಗಿ ಬಳಸಿ ಹಲವು ಖಾದ್ಯ ಮಾಡುತ್ತಾರೆ.
ಮೂಲಂಗಿ ನಮ್ಮ ಚರ್ಮದ ಆರೋಗ್ಯಕ್ಕೂ ಕೂಡ ಬಹಳ ಉತ್ತಮ. ಇಷ್ಟೊಂದು ಅಂಶಗಳ ತನ್ನಲ್ಲಿಟ್ಟುಕೊಂಡಿರುವ ಮೂಲಂಗಿಯಲ್ಲಿ ನಾವು ಸಾಂಬಾರ್, ಸಲಾಡ್, ಸೂಪ್, ಪಲ್ಯ ಚಟ್ನಿ ಸೇರಿ ಹಲವು ರೀತಿಯ ಖಾದ್ಯ ಮಾಡಿ ಸವಿಯಬಹುದು, ಕೆಲವೊಂದು ಬಹಳ ರುಚಿಕರವಾಗಿ ಮಾಡುವಂತಹ ಖಾದ್ಯ ಹೋಟೆಲ್ನಲ್ಲಿ ಸವಿದಿರುತ್ತೇವೆ.

ಹಾಗಾದ್ರೆ ನಾವಿಂದು ಈ ಮೂಲಂಗಿಯಿಂದ ಮಾಡುವಂತಹ ಅದ್ಭುತ ರುಚಿಯ ಈ ಮೂಲಂಗಿ ಚಟ್ನಿಯನ್ನು ಸವಿದು ಅದರ ರುಚಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ. ಮೂಲಂಗಿಯಿಂದ ಮಾಡುವಂತಹ ಈ ಚಟ್ನಿ ಎಲ್ಲಾ ರೀತಿಯ ತಿಂಡಿಗೂ ಅದ್ಭುತ ರುಚಿ ನೀಡುತ್ತೆ, ಹಾಗೆ ಊಟದ ಜೊತೆಗೂ ಕೂಡ ಇದರ ಕಾಂಬಿನೇಷನ್ ಫಸ್ಟ್ ಕ್ಲಾಸ್ ಆಗಿರುತ್ತೆ.
ಹಾಗಾದ್ರೆ ಈ ಹೋಟೆಲ್ ರುಚಿಯ ಮೂಲಂಗಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೂಲಂಗಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
ಮೂಲಂಗಿ
ಜೀರಿಗೆ
ಸಾಸಿವೆ
ಬೆಳ್ಳುಳ್ಳಿ
ಹಸಿಮೆಣಸು
ಒಣ ಮೆಣಸು
ಹುಣಸೆ ಹುಳಿ
ತೆಂಗಿನಕಾಯಿ ತುರಿ
ಹುರಿಗಡಲೆ
ಕೊತ್ತಂಬರಿ ಸೊಪ್ಪು
ಎಣ್ಣೆ
ಉಪ್ಪು
ಮೂಲಂಗಿ ಚಟ್ನಿ ಮಾಡುವ ವಿಧಾನ
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಹಾಕಿಕೊಂಡು ಸಣ್ಣದಾಗಿ ಹೆಚ್ಚಿಕೊಂಡಿರುವ ಮೂಲಂಗಿಯನ್ನು ಹಾಕಿಕೊಳ್ಳಬೇಕು. ಮೂಲಂಗಿ ಖಾರವಾಗಿರುವ ಕಾರಣ ಆದಷ್ಟು ಫ್ರೈ ಮಾಡಿಕೊಳ್ಳಬೇಕು. ಹಾಗೆ ಸಣ್ಣದಾಗಿ ಹೆಚ್ಚಿಕೊಂಡರೆ ಉತ್ತಮ. 5 ನಿಮಷ ಹುರಿದುಕೊಳ್ಳಬೇಕು.
5 ನಿಮಿಷದ ಬಳಿಕ ಒಣ ಮೆಣಸು 2 ಹಾಗೂ ಹಸಿ ಮೆಣಸು ಕೂಡ ಹಾಕಿಕೊಳ್ಳಿ. ಇಡಿಯಾಗಿ ಈ ಮೆಣಸುಗಳ ಬಳಸಿಕೊಳ್ಳಿ. ಮೂಲಂಗಿ ಖಾರ ಇರುವ ಕಾರಣ ಮೆಣಸುಗಳನ್ನು ಕಡಿಮೆ ಬಳಸಿಕೊಳ್ಳಿ. ನಂತರ ಹುಣಸೆ ಹುಳಿ ಹಾಗೂ ತೆಂಗಿನಕಾಯಿಯನ್ನು ತುರಿದು ಅಥವಾ ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಿ. ಕೊನೆಯದಾಗಿ ಸ್ವಲ್ಪ ಹುರಿಗಡಲೆ ಹಾಕಿ ಒಲೆ ಆಫ್ ಮಾಡಿಕೊಳ್ಳಿ.
ನಂತರ ಈ ಮಸಾಲೆಗಳನ್ನು ತಣ್ಣಗಾಗಲು ಬಿಡಿ. ಮಸಾಲೆ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ಗೆ ಈ ಎಲ್ಲಾ ಮಸಾಲೆ ಹಾಕಿಕೊಂಡು ಬಳಿಕ ಕೊತ್ತಂಬರಿ ಸೊಪ್ಪು, ಉಪ್ಪು, ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಸಂಪೂರ್ಣ ನುಣ್ಣಗೆ ಅಥವಾ ಹೆಚ್ಚು ತರಿ ತರಿಯಾಗಿ ರುಬ್ಬಿಕೊಳ್ಳಬೇಡಿ. ಹದವಾಗಿ ಈ ಚಟ್ನಿ ರುಬ್ಬಿಕೊಳ್ಳಿ. ಇದನ್ನು ತೆಗೆದು ಒಂದು ಬೌಲ್ಗೆ ಹಾಕಿಕೊಳ್ಳಿ. ಇಷ್ಟಾದರೆ ಸುಲಭದ ಈ ಮೂಲಂಗಿ ಚಟ್ನಿ ರೆಡಿಯಾಗುತ್ತದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
