Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಿಸಿಲಿನಲ್ಲಿ ದೇಹ ತಂಪಾಗಿಡುವ ರಾಗಿ ಮಸಾಲ ಅಂಬಲಿ: ಮಾಡೋದು ಎಷ್ಟು ಸುಲಭ ಗೊತ್ತಾ?
ಜನವರಿಯ ನಂತರ ಬಿಸಿಲಿನ ತಾಪ ಹೆಚ್ಚಾಗುವುದು ನೋಡಬಹುದು. ಈ ಸಮಯದಲ್ಲಿ ದೇಹದ ಉಷ್ಣಾಂಶದಲ್ಲಿನ ಏರಿಳಿತವು ನಿಮಗೆ ಸಮಸ್ಯೆಗಳ ಉಂಟು ಮಾಡಬಹುದು. ಹಾಗೆ ಹಲವು ರೀತಿಯಲ್ಲಿ ದೇಹವು ಹೀಟ್‌ಗೆ ಒಳಗಾಗಬಹುದು. ಬಿಸಿಲಿನಲ್ಲಿ ನೀವು ಕೆಲಸ ಮಾಡುವುದು, ಓಡಾಡುವುದರಿಂದ ದೇಹಕ್ಕೆ ದಣಿವಾಗುವುದು ಸಾಮಾನ್ಯ. ಆದ್ರೆ ಈ ಬಿಸಿಲಿನ ಸಮಯದಲ್ಲಿ ದೇಹವು ಕೆಲಸ ಮಾಡಲು ಸಾಧ್ಯವಾಗದಂತೆ ಸುಸ್ತಾಗಬಹುದು. ಅಲ್ಲದೆ ದೇಹ ತಂಪಾಗಿಡುವುದು ಮುಖ್ಯವಾಗಿರಲಿದೆ.
ಇಂತಹ ಸಮಯದಲ್ಲಿ ದೇಹವು ತಂಪಾಗಿಡುವಂತಹ ಹಲವು ರೀತಿಯ ಖಾದ್ಯಗಳ ನೀವು ಸವಿದಿರಬಹುದು. ಅದ್ರಲ್ಲೂ ನಿಮ್ಮ ದೇಹ ತಂಪಾಗಿಡುವಂತಹ ಅಂಬಲಿ ಸೇವಿಸಿದರೆ ಎಂತಹ ಬಿಸಿಲಿನಲ್ಲೂ ದೇಹ ತಂಪಾಗಿರಲಿದೆ. ಅಂಬಲಿಗಳಲ್ಲಿ ಹಲವು ರೀತಿಯ ಬಗೆಗಳಿವೆ, ನಾವಿಂದು ರಾಗಿಯಿಂದ ಮಾಡುವ ಮಸಾಲ ಅಂಬಲಿ ಕುರಿತಾಗಿ ತಿಳಿದುಕೊಳ್ಳೋಣ.

ಅಂಬಲಿಯು ನಿಮ್ಮ ದೇಹಕ್ಕೆ ಅಗತ್ಯವಾದ ಹಾಗೆ ತಂಪಾಗಿಡುವ ಅಂಶವಾಗಿರಲಿದೆ. ಊಟದ ಸಮಯದಲ್ಲಿ ಹಲವರು ಅಂಬಲಿ ಸೇವಿಸುವುದು ನೋಡಿರಬಹುದು. ನಾವಿಂದು ರಾಗಿಯಿಂದ ಮಾಡುವಂತಹ ರುಚಿ ರುಚಿಯಾದ ಅಂಬಲಿ ಕುರಿತಾಗಿ ನಾವಿಲ್ಲಿ ತಿಳಿದುಕೊಳ್ಳೋಣ. ರಾಗಿ ಅಂಬಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳಿ.
ರಾಗಿ ಮಸಾಲ ಅಂಬಲಿ ಮಾಡಲು ಬೇಕಾಗುವ ಪದಾರ್ಥಗಳು
- ರಾಗಿ
- ಮೊಸರು
- ನೀರು
- ಈರುಳ್ಳಿ
- ಕೊತ್ತಂಬರಿ ಸೊಪ್ಪು
- ಶುಂಠಿ
- ಹಸಿ ಮೆಣಸು
- ಕಾಳು ಮೆಣಸಿನ ಪುಡಿ
- ಉಪ್ಪು
ರಾಗಿ ಮಸಾಲ ಅಂಬಲಿ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಗೆ ಒಂದು ಕಪ್ ರಾಗಿ ಹಿಟ್ಟನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಕಾಳು ಮೆಣಸಿನ ಪುಡಿ ಹಾಕಿಕೊಳ್ಳಿ. ಅನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಸೇರಿಸಿ. 1 ಕಪ್ ರಾಗಿ ಹಿಟ್ಟಿಗೆ 6 ಕಪ್ ನೀರು ಹಾಕಿಕೊಳ್ಳಿ. ನಂತರ ಮಿಕ್ಸ್ ಮಾಡಿಕೊಂಡು ಒಲೆ ಮೇಲೆ ಇಟ್ಟು ಮಧ್ಯಮ ಉರಿಯಲ್ಲಿ ಕುದಿಬರಲು ಬಿಡಿ.
ನಿಧಾನವಾಗಿ ಕುದಿಬರುವವರೆಗೂ ಕೈ ಬಿಡದೆ ಕಲಸಿಕೊಳ್ಳಬೇಕು. ಈ ಸಮಯದಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ಹಿಟ್ಟು ಸ್ವಲ್ಪ ಗಟ್ಟಿಯಾಗುವಾಗ ಒಲೆ ಆಫ್ ಮಾಡಿಕೊಳ್ಳಿ. ನಂತರ ಈ ಹಿಟ್ಟು ತಣ್ಣಗಾಗಲು ಬಿಡಿ.
ಈಗ ಒಂದು ಪಾತ್ರೆಗೆ 1 ಕಪ್ ಗಟ್ಟಿ ಮೊಸರು ಹಾಕಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿ ತೆಳು ಮಾಡಿಕೊಳ್ಳಿ. ನಂತರ ಇದಕ್ಕೆ 2 ಕಪ್ ನೀರು ಹಾಕಿ ಮಿಕ್ಸ್ ಮಾಡಿದರೆ ಮಜ್ಜಿಗೆ ಆಗಲಿದೆ. ಈಗ ತಣ್ಣಗಾಗಿರುವ ರಾಗಿ ಗಂಜಿಯನ್ನು ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ, ಇದಕ್ಕೆ ಮಜ್ಜಿಗೆ ಸೇರಿಸಿಕೊಳ್ಳಿ. ಈಗ ಈರುಳ್ಳಿ, ಕೊತ್ತಂಬರಿ ಸೊಪ್ಪು, ಬೇಕಿದ್ದ ಶುಂಠಿ, ಹಾಗೆ ಹಸಿ ಮೆಣಸು ಬೇಕಿದ್ದರೆ ಸಣ್ಣದಾಗಿ ಕತ್ತರಿಸಿಕೊಂಡು ಸೇರಿಸಿಕೊಳ್ಳಿ.
ಹಾಗೆ ಸ್ವಲ್ಪ ಉಪ್ಪು ಸೇರಿಸಿಕೊಂಡು ಮಿಕ್ಸ್ ಮಾಡಿಕೊಂಡರೆ ಸವಿಯಲು ನಿಮ್ಮ ಮುಂದೆ ಈ ರಾಗಿ ಮಸಾಲ ಅಂಬಲಿ ಸಿದ್ದವಾಗುತ್ತೆ. ನೀವು ಸಹ ಈ ಬೇಸಿಗೆಯ ಸಮಯದಲ್ಲಿ ಇದನ್ನು ಮಾಡಿ ಸವಿದು ನೋಡಿ. ದೇಹವನ್ನ ತಂಪಾಗಿಡುವ ಸುಲಭದ ವಿಧಾನವಿದು.



Click it and Unblock the Notifications
