Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಯಾವ ಬೇಕರಿಯಲ್ಲೂ ಸಿಗಲ್ಲ ಈ ರಾಗಿ ಲಡ್ಡು: ಆರೋಗ್ಯಕ್ಕೂ ಇದು ಬೆಸ್ಟ್ ತಿಂಡಿ!
ನೀವು ಆರೋಗ್ಯದ ಕಡೆಗೆ ಹೆಚ್ಚು ಗಮನವಿಟ್ಟು ಅದ್ರಲ್ಲೂ ಆಹಾರ ಸೇವನೆಯಲ್ಲಿ ಬಹಳಷ್ಟು ಕಟ್ಟು ನಿಟ್ಟಿನ ನಿಯಮ ಹಾಕಿಕೊಂಡಿದ್ದರೆ ಈ ಸಮಯದಲ್ಲಿ ಉತ್ತಮ ಆಹಾರ ಸೇವಿಸಲು ಮುಂದಾಗುತ್ತೀರಿ. ಅದ್ರಲ್ಲು ರಾಗಿಯಿಂದ ಮಾಡುವ ಹಲವು ಖಾದ್ಯಗಳು ರುಚಿಯ ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮವಾಗಿರಲಿದೆ. ರಾಗಿಯಲ್ಲಿನ ಫೈಬರ್ ಅಂಶವು ಹೆಚ್ಚಿರುವ ಕಾರಣ ಈ ಆಹಾರವು ಆರೋಗ್ಯಕ್ಕೆ ಉತ್ತಮ.
ರಾಗಿ ಮುದ್ದೆ, ನಾಟಿ ಕೋಳಿ ಸಾರು ಎಂದರೆ ಅನೇಕರ ಬಾಯಲ್ಲಿ ನೀರೂರಿಸುತ್ತದೆ. ರಾಗಿಯಿಂದ ತಯಾರಿಸಿದ ಆಹಾರ ಪದಾರ್ಥಗಳು ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿ ನೀವು ಪಡೆಯಬಹುದು. ಹಾಗೆ ನಾರಿನಾಂಶವು ಮಲಬದ್ದತೆ ಸೇರಿದಂತೆ ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಣೆ ಮಾಡಲು ನೆರವಾಗುತ್ತದೆ. ಹೀಗಾಗಿ ಮಕ್ಕಳಿಗೆ ಹೆಚ್ಚಾಗಿ ರಾಗಿ ಮೂಲಕ ಮಾಡಿದ ಆಹಾರ ಪದಾರ್ಥಗಳ ನೀಡಲು ಮುಂದಾಗಲಾಗುತ್ತದೆ.

ಇನ್ನು ರಾಗಿಯಿಂದ ಸಿಹಿ ತಿಂಡಿಗಳ ಮಾಡಿದರೆ ಮನೆಯಲ್ಲಿ ಎಲ್ಲರೂ ಸಹ ಕುಳಿತು ಸವಿಯಲು ಮುಂದಾಗುತ್ತಾರೆ, ನಾವಿಂದು ರಾಗಿಯಿಂದ ಮಾಡುವ ಸಿಹಿಯಾದ ರಾಗಿ ಉಂಡೆಯ ಕುರಿತಾಗಿ ತಿಳಿದುಕೊಳ್ಳೋಣ. ಈ ರಾಗಿ ಉಂಡೆಯನ್ನು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಕುರಿತಾದ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.
ರಾಗಿ ಉಂಡೆ ಅಥವಾ ಲಾಡು ಮಾಡಲು ಬೇಕಾಗುವ ವಸ್ತುಗಳು
- ರಾಗಿ ಹಿಟ್ಟು
- ಬೆಲ್ಲ
- ತುಪ್ಪ
- ಕೊಬ್ಬರಿ ತುರಿ
- ಡ್ರೈ ಫ್ರೂ ಟ್ಸ್
- ಏಲಕ್ಕಿ ಪುಡಿ
ರಾಗಿ ಉಂಡೆ ಮಾಡುವ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಅರ್ಧ ಕಪ್ ತುಪ್ಪ ಹಾಕಿಕೊಂಡು ಕತ್ತರಿಸಕೊಂಡ ಗೋಡಂಬಿ, ದ್ರಾಕ್ಷಿ ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ 2 ಕಪ್ ರಾಗಿ ಹಿಟ್ಟು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಬೇಕು. ಈ ಹಿಟ್ಟು ಗರಿ ಗರಿಯಾಗಿ ಹುರಿದುಕೊಳ್ಳಬೇಕು. 15ರಿಂದ 20 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಬೇಕು.
ಕೊನೆಯಲ್ಲಿ ಒಂದು ಕಪ್ ಒಣ ಕೊಬ್ಬರಿ ತುರಿ ಸೇರಿಸಿಕೊಂಡು ಮತ್ತೆ 2 ನಿಮಿಷ ಹುರಿದು ತೆಗೆದಿಟ್ಟುಕೊಳ್ಳಿ ಈಗ ಬಾಣಲೆಗೆ 1 ಕಪ್ ಬೆಲ್ಲವನ್ನು ಹಾಕಿಕೊಂಡು ಅದು ಕರಗಲು ಕಾಲು ಕಪ್ ನೀರು ಹಾಕಿ ಕರಗಲು ಬಿಡಿ. ಈಗ ಬೆಲ್ಲದ ನೀರನ್ನು ಜರಡಿ ಹಿಡಿದು ಇಟ್ಟುಕೊಳ್ಳಿ.
ಈಗ ರಾಗಿ ಹುರಿದುಕೊಂಡ ರಾಗಿ ಹಿಟ್ಟಿಗೆ ಗೋಡಂಬಿ ದ್ರಾಕ್ಷಿ ಹಾಕಿಕೊಂಡು, ಏಲಕ್ಕಿ ಪುಡಿ ಹಾಕಿ, ಹಾಗೆ ಸ್ವಲ್ಪ ಸ್ವಲ್ಪ ಬೆಲ್ಲದ ಪಾಕವನ್ನು ಸಹ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡುತ್ತಾ ಇರಬೇಕು. ಒಂದೇ ಬಾರಿಗೆ ಬೆಲ್ಲದ ನೀರು ಹಾಕಿಕೊಳ್ಳಬೇಡಿ. ಸ್ವಲ್ಪ ಸ್ವಲ್ಪವೇ ಹಾಕಿಕೊಂಡು ಹದ ಮಾಡಿಕೊಳ್ಳಬೇಕು. ಹುಡಿ ಹುಡಿಯಾಗಿ ಹಿಟ್ಟು ಬೆರಬೇಕು. ಅನಂತರ ಉಂಡೆ ಕಟ್ಟಲು ಬರಬೇಕು.
ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ಇದೇ ರೀತಿ ಲಾಡು ಶೈಲಿಯಲ್ಲಿ ಉಂಡೆ ಕಟ್ಟಿ ಇಟ್ಟುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ರಾಗಿ ಲಾಡು ಸಿದ್ದವಾಗುತ್ತೆ ನೀವು ಸಹ ಮನೆಯಲ್ಲಿ ಈ ಲಡ್ಡು ಟ್ರೈ ಮಾಡಿ ನೋಡಿ.



Click it and Unblock the Notifications
