Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಅಬ್ಬಾ! ಎಂತ ರುಚಿ ಮಶ್ರೂಮ್ ಮಂಚೂರಿಯನ್; ತಿಂದವರು ಬೇಷ್ ಅಂತಾರೆ! ಮಾಡೋದು ಹೇಗೆ?
ಫ್ರೀ ಟೈಮ್‌ನಲ್ಲಿ ಮನೆಯಲ್ಲಿದ್ದಾಗ ತಿನ್ನಲು ಏನಾದರೂ ಸ್ಪೈಸಿ ಚಾಟ್ಸ್ ಬೇಕೇ ಬೇಕು. ಹೊರಗಡೆ ಸಿಗುವ ತಿಂಡಿಯಿಂದ ಟೇಸ್ಟ್ ಸಿಗೋದು ಅಷ್ಟಕ್ಕಷ್ಟೇ ಬಿಡಿ. ಈ ಪರಿಸ್ಥಿತಿಯಲ್ಲಿ ಮಹಿಳೆಯರು ಏನಪ್ಪ ತಿಂಡಿ ಮಾಡಲಿ ಎಂದು ಯೋಚಿಸುವುದು ಸಾಮಾನ್ಯ. ಇದಕ್ಕೆ ಮಶ್ರೂಮ್ ಮಂಚೂರಿಯನ್ (Mushroom Manchurian) ಬೆಸ್ಟ್ ಸೆಲ್ಯೂಶನ್. ಇದನ್ನು ಕೆಲವೇ ನಿಮಿಷಗಳಲ್ಲಿ ಮಾಡಬಹುದು. ನಾವಿಂದು ಈ ಲೇಖನದಲ್ಲಿ ಮಶ್ರೂಮ್ ಮಂಚೂರಿ (ಸೂಪರ್ ಅಣಬೆ ಮಂಚೂರಿಯನ್) ಮಾಡೋದು ಹೇಗೆ ಅಂತಾ ತಿಳಿಸಿಕೊಟ್ಟಿದ್ದೇವೆ. ನೀವು ಇಂದೇ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ.
ಮಶ್ರೂಮ್ ಮಂಚೂರಿ ಒಂದು ಇಂಡೋ-ಚೈನೀಸ್ ಖಾದ್ಯ. ಇದು ಪಾರ್ಟಿ ಮತ್ತು ಊಟವನ್ನು ವಿಶೇಷವಾಗಿಸುತ್ತದೆ. ಇದನ್ನು ಮಸಾಲೆಯುಕ್ತ ಸಾಸ್‌ನಲ್ಲಿ ಗರಿಗರಿಯಾದ ಅಣಬೆಗಳನ್ನು ಬೇಯಿಸುವ ಮೂಲಕ ತಯಾರಿಸಬಹುದು. ಇದು ತಿನ್ನಲು ಬಲು ರುಚಿಕರ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಇದನ್ನು ತಯಾರಿಸುವುದು ಸುಲಭ. ಅತಿಥಿಗಳು ಇದ್ದಕ್ಕಿದ್ದಂತೆ ಮನೆಗೆ ಬಂದಾಗ ಅಥವಾ ನೀವು ಮನೆಯಲ್ಲಿ ಹೊಸದಾಗಿ ಏನನ್ನಾದರೂ ಮಾಡಲು ಬಯಸಿದರೆ, ಮಶ್ರೂಮ್ ಮಂಚೂರಿ ನಿಮ್ಮ ಮೊದಲ ಆಯ್ಕೆಯಾಗಲಿದೆ. ಮಕ್ಕಳು ಮತ್ತು ವಯಸ್ಕರು ಇಬ್ಬರಿಗೂ ಈ ಖಾದ್ಯ ತುಂಬಾ ಇಷ್ಟವಾಗುತ್ತದೆ.

ಮಶ್ರೂಮ್ ಮಂಚೂರಿ ತಯಾರಿಸಲು ಬೇಕಾಗುವ ಪದಾರ್ಥಗಳು
• ಹಿಟ್ಟು - ಅರ್ಧ ಕಪ್
• ಕಾರ್ನ್ ಫ್ಲೋರ್ - 3 ರಿಂದ 4 ಚಮಚ
• ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ
• ಕರಿಮೆಣಸಿನ ಪುಡಿ - ಮುಕ್ಕಾಲು ಚಮಚ
• ಸೋಯಾ ಸಾಸ್ - 1 ಚಮಚ
• ನೀರು - ಅಗತ್ಯಕ್ಕೆ ತಕ್ಕಂತೆ
• ಸಕ್ಕರೆ - ಅಗತ್ಯಕ್ಕೆ ತಕ್ಕಂತೆ
• ಉಪ್ಪು - ರುಚಿಗೆ ತಕ್ಕಂತೆ
• ಬಿಳಿ ಮಶ್ರೂಮ್
• ಅಡುಗೆ ಎಣ್ಣೆ
ಅಣಬೆ ಹುರಿಯಲು
• ಅಣಬೆ - 250 ಗ್ರಾಂ
• ಅಡುಗೆ ಎಣ್ಣೆ - ಹುರಿಯಲು
ಮಂಜೂರಿಯನ್ ತಯಾರಿಸಲು ಬೇಕಾಗುವ ವಸ್ತು
• ಅಡುಗೆ ಎಣ್ಣೆ - 1 ರಿಂದ 2 ಚಮಚ
• ಕ್ಯಾಪ್ಸಿಕಂ - 1
• ಹಸಿ ಮೆಣಸಿನಕಾಯಿ - ಸಣ್ಣದಾಗಿ ಕತ್ತರಿಸದ 2
• ಬೆಳ್ಳುಳ್ಳಿ - 2
• ಶುಂಠಿ ಕೊತ್ತಂಬರಿ ಸುಪ್ಪು - 2 ಚಮಚ
• ಕರಿಮೆಣಸಿನ ಪುಡಿ
• ಸೋಯಾ ಸಾಸ್
• ಈರುಳ್ಳಿ (ಸಣ್ಣದಾಗಿ ಕತ್ತರಿಸಿ)
• ಉಪ್ಪು - ರುಚಿಗೆ ತಕ್ಕಷ್ಟು
ಮಶ್ರೂಮ್ ಮಂಚೂರಿ ತಯಾರಿಸುವ ವಿಧಾನ
ಮೊದಲು, ಅಣಬೆಗಳನ್ನು ಚೆನ್ನಾಗಿ ತೊಳೆಯಿರಿ. ಎಲ್ಲಾ ನೀರನ್ನು ಬಸಿದುಕೊಳ್ಳಿ. ದೊಡ್ಡ ಅಣಬೆಗಳನ್ನು ಅರ್ಧ ಅಥವಾ ಕಾಲು ಭಾಗಗಳಾಗಿ ಕತ್ತರಿಸಿ. ಒಂದು ಪಾತ್ರೆಯಲ್ಲಿ ಹಿಟ್ಟು, ಕಾರ್ನ್‌ಫ್ಲೋರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಿಮೆಣಸು, ಸೋಯಾ ಸಾಸ್, ಸಕ್ಕರೆ, ಉಪ್ಪು ಮತ್ತು ನೀರು ಹಾಕಿ ಬ್ಯಾಟರ್ ತಯಾರಿಸಿ. ಈಗ ಒಂದು ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ. ಈಗ ತಯಾರಾದ ಬ್ಯಾಟರ್‌ನಲ್ಲಿ ಅಣಬೆಗಳನ್ನು ಅದ್ದಿ. ನಿಧಾನವಾಗಿ ಎಣ್ಣೆಗೆ ಹಾಕಿ. ಬಳಿಕ ಅಣಬೆಗಳನ್ನು ಎರಡೂ ಬದಿಗಳಲ್ಲಿ ಗೋಲ್ಡನ್ ಬಣ್ಣ ಬರುವವರೆಗೆ ಬೇಯಿಸಿ. ಬಳಿಕ ಅವುಗಳನ್ನು ಎಣ್ಣೆಯಿಂದ ತೆಗೆದು ಪಕ್ಕಕ್ಕೆ ಇಡಿ.
ಈಗ ಒಂದು ಬಾಣಲೆಯಲ್ಲಿ ಎಣ್ಣೆ (1 ರಿಂದ 2 ಚಮಚ) ಬಿಸಿ ಮಾಡಿ. ಹಸಿರು ಈರುಳ್ಳಿಯ ಬಿಳಿ ಭಾಗವನ್ನು ಹಾಕಿ ಒಂದು ನಿಮಿಷ ಹುರಿಯಿರಿ. ಸೆಲರಿ (ಪಾರ್ಸ್ಲಿ), ಹಸಿ ಮೆಣಸಿನಕಾಯಿ, ಶುಂಠಿ - ಬೆಳ್ಳುಳ್ಳಿ ಮತ್ತು ಈರುಳ್ಳಿಯ ಹಸಿರು ಭಾಗವನ್ನು ಸೇರಿಸಿ. ಹಾಗೆಯೇ ಸ್ವಲ್ಪ ಬೇಯಿಸಿ. ಬಳಿಕ ಕರಿಮೆಣಸು, ಉಪ್ಪು, ಸಕ್ಕರೆ ಮತ್ತು ಸೋಯಾ ಸಾಸ್ ಸೇರಿಸಿ ಮಿಕ್ಸ್ ಮಾಡಿ. ಈಗ ಅಣಬೆಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಈರುಳ್ಳಿ ಮತ್ತು ಸೆಲರಿ ಸೇರಿಸಿದರೆ ನೋಡಲು ಸೊಗಸಾಗಿ ಕಾಣುತ್ತದೆ. ಇಷ್ಟು ಮಾಡಿದರೆ ಸಾಕು, ಬಿಸಿಬಿಸಿ ಮಶ್ರೂಮ್ ಮಂಚೂರಿಯನ್ ಸವಿಯಲು ಸಿದ್ದವಾಗುತ್ತದೆ.



Click it and Unblock the Notifications
