Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬ್ಯಾಚುಲರ್ಸ್ಗಾಗಿ.. ಸುಲಭವಾಗಿ ಚಿಕನ್ ಫ್ರೈ ಮಾಡೋದು ಹೇಗೆ? 15 ನಿಮಿಷವೂ ಹಿಡಿಯಲ್ಲ
ಚಿಕನ್ ಫ್ರೈ ಎಂದರೆ ಹಲವರಿಗೆ ಅಚ್ಚುಮೆಚ್ಚು. ಇದು ವಾರಾಂತ್ಯದ ಊಟಕ್ಕೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮಾಡಬಹುದಾದ ಸುಲಭ ಮತ್ತು ರುಚಿಕರವಾದ ಖಾದ್ಯ. ಪಲಾವ್, ಬಿರಿಯಾನಿ, ಅಥವಾ ದೋಸೆಗಳೊಂದಿಗೆ ಉತ್ತಮ ಸೈಡ್ ಡಿಶ್ ಆಗಿ ಚಿಕನ್ ಫ್ರೈ (Chicken Fry) ಉತ್ತಮ ಆಯ್ಕೆ. ಬ್ಯಾಚುಲರ್ಗಳಿಗೆ ಅಥವಾ ಮೊದಲ ಬಾರಿ ಅಡುಗೆ ಮಾಡುವವರಿಗೆ ಇದು ಹೇಳಿ ಮಾಡಿಸಿದಂತಹ ರೆಸಿಪಿ.
ಈ ಚಿಕನ್ ಅಥವಾ ಕೋಳಿ ಫ್ರೈ ಕಡಿಮೆ ಸಮಯದಲ್ಲಿ, ಸರಳ ವಿಧಾನದಲ್ಲಿ ತಯಾರಿಸಬಹುದಾಗಿದೆ. ಅಡುಗೆ ಬಗ್ಗೆ ಅಷ್ಟಾಗಿ ತಿಳಿದಿಲ್ಲದವರಿಗೂ ಸುಲಭವಾಗಿ ಮಾಡಬಹುದಾಗಿದೆ. ರುಚಿಯಲ್ಲಿ ರಾಜಿ ಇಲ್ಲದೆ, ಯಾವುದೇ ವಿಭಿನ್ನ ತಂತ್ರಗಳಿಲ್ಲದೆ ಮಾಡುವ ಈ ರೆಸಿಪಿ ಬ್ಯಾಚುಲರ್ಗಳ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗುವುದರಲ್ಲಿ ಡೌಟೇ ಇಲ್ಲ. ಚಿಕನ್ ಫ್ರೈ (Chicken Fry Recipe) ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನ ಇಲ್ಲಿದೆ.

ಚಿಕನ್ ಫ್ರೈ ಯಾಕೆ ಬೆಸ್ಟ್ ಆಯ್ಕೆ?
ಈ ಚಿಕನ್ ಫ್ರೈ ತನ್ನ ರುಚಿಗೆ ಹೆಸರುವಾಸಿ. ಇದರ ಮುಖ್ಯ ಅಂಶವೆಂದರೆ, ಇದು ಸಮಯವನ್ನು ಉಳಿತಾಯ ಮಾಡುತ್ತದೆ. ಊಟಕ್ಕೆ ತಡವಾಗಿ ಮನೆಗೆ ಬಂದಾಗ ಅಥವಾ ಏನಾದರೂ ದಿಢೀರ್ ಎಂದು ತಿನ್ನಬೇಕೆಂದು ಎಂದಾಗಲೂ ಈ ರೆಸಿಪಿ ಕೈ ಹಿಡಿಯುತ್ತದೆ.
• ಮಸಾಲೆ ಮತ್ತು ಮೊಸರಿನಲ್ಲಿ ಮ್ಯಾರಿನೇಟ್ ಮಾಡುವುದರಿಂದ ಚಿಕನ್ ತುಂಬಾ ಮೃದುವಾಗುತ್ತದೆ. ಹುರಿದ ನಂತರವೂ ಅದರ ಮೃದುತ್ವ ಹಾಗೆಯೇ ಉಳಿಯುತ್ತದೆ.
• ಕಡಿಮೆ ಎಣ್ಣೆ ಅಥವಾ ತುಪ್ಪ ಬಳಸಿ ಇದನ್ನು ತಯಾರಿಸಬಹುದು. ಇದರಿಂದ ಇದು ಹೆಚ್ಚು ಎಣ್ಣೆ ಬಳಸುವ ಚಿಕನ್ ಫ್ರೈಗಳಿಗಿಂತ ಆರೋಗ್ಯಕರವಾಗಿರುತ್ತದೆ.
• ಈ ಚಿಕನ್ ಫ್ರೈ ಅನ್ನು ರೈಸ್ (ಅನ್ನ), ಚಪಾತಿ ಅಥವಾ ಬ್ರೆಡ್ ಜೊತೆಗೆ ಸವಿಯಬಹುದು. ಸ್ವಲ್ಪ ನೀರು ಸೇರಿಸಿದರೆ ಇದನ್ನು ಸೆಮಿ-ಗ್ರೇವಿಯನ್ನಾಗಿ ಮಾಡಿಕೊಳ್ಳಬಹುದು.
ಚಿಕನ್ ಫ್ರೈಗೆ ಬೇಕಾಗುವ ಸಾಮಗ್ರಿಗಳು
• ಚಿಕನ್
• ಮೆಣಸಿನ ಪುಡಿ
• ಶುಂಠಿ - ಬೆಳ್ಳುಳ್ಳಿ ಪೇಸ್ಟ್
• ಗರಂ ಮಸಾಲಾ
• ಅರಿಶಿನ ಪುಡಿ
• ಕೊತ್ತಂಬರಿ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
• ಮೊಸರು
• ಎಣ್ಣೆ (ಅಗತ್ಯಕ್ಕೆ ತಕ್ಕಷ್ಟು)
• ಈರುಳ್ಳಿ
• ಹಸಿ ಮೆಣಸಿನಕಾಯಿ
• ಕರಿಬೇವು
• ಕೊತ್ತಂಬರಿ ಸೊಪ್ಪು

ಚಿಕನ್ ಫ್ರೈ ಮಾಡುವ ಸುಲಭ ವಿಧಾನ
ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ಅದಕ್ಕೆ ಉಪ್ಪು, ಮೆಣಸಿನ ಪುಡಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಮಯವಿದ್ದರೆ, ಇದನ್ನು ಕನಿಷ್ಠ ಎರಡು ಗಂಟೆಗಳ ಕಾಲ ಮ್ಯಾರಿನೇಟ್ ಮಾಡಿ.
ಈಗ ಹುರಿಯಬೇಕು. ಅದಕ್ಕೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಹಾಕಿ. ಒಂದು ಸುತ್ತು ಹುರಿಯಿರಿ. ನಂತರ ಮೊಸರು ಹಾಕಿ, ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ. ಚಿಕನ್ನಲ್ಲಿರುವ ನೀರು ಸಂಪೂರ್ಣವಾಗಿ ಆವಿಯಾಗಿ, ಎಣ್ಣೆ ಮೇಲೆ ಬರುವವರೆಗೆ ಬೇಯಿಸಿ.
ಇದಾದ ಮೇಲೆ ಮಸಾಲೆಗಳನ್ನು ಸೇರಿಸಿ. ಈಗ ಹೆಚ್ಚಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಹಾಕಿ, ಸ್ವಲ್ಪ ಹೊತ್ತು ಹುರಿಯಿರಿ. ನಂತರ ಗರಂ ಮಸಾಲಾ, ಅರಿಶಿನ ಪುಡಿ ಮತ್ತು ಕೊತ್ತಂಬರಿ ಪುಡಿ ಹಾಕಿ. ಮಸಾಲೆಗಳ ಹಸಿ ವಾಸನೆ ಹೋಗುವವರೆಗೆ ಸುಮಾರು ಐದು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.
ಅಂತಿಮವಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಮಿಕ್ಸ್ ಮಾಡಿ. ಒಲೆ ಆಫ್ ಮಾಡಿ. ನಿಮ್ಮ ರುಚಿಗೆ ಅನುಗುಣವಾಗಿ, ಸ್ವಲ್ಪ ನಿಂಬೆ ರಸವನ್ನು ಬಳಸಬಹುದು. ಇದರಿಂದ ಚಿಕನ್ ಫ್ರೈಗೆ ಹುಳಿ ರುಚಿ ಸಿಗುತ್ತದೆ. ಇಷ್ಟು ಮಾಡಿದರೆ, ರುಚಿಕರವಾದ ಚಿಕನ್ ಫ್ರೈ ಸಿದ್ಧ. ಇದನ್ನು ಬಿಸಿ ಬಿಸಿಯಾಗಿ ಅನ್ನ, ರೊಟ್ಟಿ ಅಥವಾ ಪರೋಟದೊಂದಿಗೆ ಸವಿಯಬಹುದು.



Click it and Unblock the Notifications
