Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಕೇರಳ ಪುಟ್ಟು: ಈ ಪುಟ್ಟು ರೆಡಿ ಮಾಡಲು ಬರಿ 5-10 ನಿಮಿಷ ಸಾಕು, ಪಟ್ ಅಂತ ರೆಡಿಯಾಗುವ ಬ್ರೇಕ್ಫಾಸ್ಟ್
ಕೇರಳದ ಪ್ರಮುಖ ಬ್ರೇಕ್ಫಾಸ್ಟ್ನಲ್ಲೊಂದು ಪುಟ್ಟು, ಈ ಪುಟ್ಟು ಟೇಸ್ಟ್ ಕರ್ನಾಟಕದಲ್ಲಿಯೂ ಚಿರಪರಿಚಿತ, ಅಕ್ಕಿಪುಡಿಯಿಂದ ಮಾಡುವ ಈ ಪುಟ್ಟು ಸುಲಭದ ಬ್ರೇಕ್ಫಾಸ್ಟ್ ರೆಸಿಪಿಯಾಗಿದೆ, ಅಲ್ಲದೆ ಈ ಪುಟ್ಟು ನೀವು 5 ನಿಮಿಷದಲ್ಲಿ ರೆಡಿ ಮಾಡಬಹುದು, ಈ ಪುಟ್ಟು ಮಾಡಲು ಮುಖ್ಯವಾಗಿ ಪುಟ್ಟು ಪಾತ್ರೆ ಬೇಕು. ಬನ್ನಿ ಇದನ್ನು ಹೇಗೆ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಪುಟ್ಟು ಪುಡಿ 1 ಕಪ್
1/4 ಚಮಚ ಉಪ್ಪು ಪುಡಿ
1/4 ಕಪ್ ನೀರು
ಅರ್ಧ ಕಪ್ ತೆಂಗಿನತುರಿ
ಪುಟ್ಟು ಮಾಡುವ ವಿಧಾನ
- ಒಂದು ಕಪ್ ಪುಟ್ಟು ಪುಡಿಯನ್ನು ದೊಡ್ಡ ಬಟ್ಟಲಿಗೆ ಹಾಕಿ
- 1/4 ಚಮಚ ಉಪ್ಪಿನ ಪುಡಿ
- ಈ ಎರಡನ್ನು ಕೈಯಲ್ಲಿಯೇ ಮಿಕ್ಸ್ ಮಾಡಿ
- ನಂತರ ನೀರನ್ನು ಚಿಮುಕಿಸಿ
- ಚೆನ್ನಾಗಿ ಮಿಕ್ಸ್ ಮಾಡಿ
- ಮಿಶ್ರಣ ಸ್ವಲ್ಪ ಮೃದುವಾಗಬೇಕು, ಹಿಟ್ಟಿಗೆ ತುಂಬಾ ನೀರು ಹಾಕಬೇಡಿ
- ಈಗ ಪುಟ್ಟು ಕುತ್ತಿ (ಪುಟ್ಟು ಮಾಡುವ ಪಾತ್ರೆ)ಗೆ ಮಿಶ್ರಣವನ್ನು ತುಂಬಿ ಹೀಗೆ ತುಂಬುವಾಗ ಮಧ್ಯ-ಮಧ್ಯ ತೆಂಗಿನ ತುರಿ ತುಂಬಬೇಕು, ಹೀಗೆ ಕೊನೆಗೆ ತಂಗಿನ ತುರಿ ತುಂಬಿ ನಂತರ ಅದರ ಮುಚ್ಚಳ ಮುಚ್ಚಿ ಬೇಯಿಸಿ. 10-15 ನಿಮಿಷ ಬೇಯಿಸಿ.
ನಂತರ ತೆಗೆದು ಅದನ್ನು ಹಿಂಬದಿಯಿಂದ ತಳ್ಳಿದರೆ ಪುಟ್ಟು ಪೀಸ್ ಪೀಸ್ ಆಗಿ ಬಂದು ಬೀಳುತ್ತೆ.
ಸಲಹೆ: ಈ ಪುಟ್ಟು ಮಾಡುವುದು ಸುಲಭ, ಆದರೆ ಪುಟ್ಟು ಮಾಡಲು ಪುಟ್ಟು ಪಾತ್ರೆ ಬೇಕಾಗುತ್ತೆ, ಈಗ ಕುಕ್ಕರ್ನಲ್ಲಿಯೇ ಬೇಯಿಸಬಹುದಾದ ಚಿಪ್ಪು ರೀತಿಯ ಪುಟ್ಟು ಪಾತ್ರೆ ಸಿಗುತ್ತೆ, ಸಾಮಾನ್ಯವಾಗಿ ಪಾತ್ರೆ ಅಂಗಡಿಯಲ್ಲಿ ಸಿಗುತ್ತೆ, ಒಬ್ಬರಿಗೆ, ಇಬ್ಬರಿಗೆ ಆದರೆ ಅದರಲ್ಲಿಯೇ ಮಾಡಬಹುದು.
ಪುಟ್ಟು ಮಾಡಿದರೆ ಅದಕ್ಕೆ ಸಾರು ಬೇಕಂತಲೂ ಇಲ್ಲ, ಪುಟ್ಟು ಕಾಂಬಿನೇಷನ್ ಬಾಳೆಹಣ್ಣು, ಬಾಳೆಹಣ್ಣು ಜೊತೆ ಮಿಕ್ಸ್ ಮಾಡಿ ತಿನ್ನಬಹುದು.
ಅಲ್ಲದೆ ಪುಟ್ಟು ಪುಡಿ ಸಾಮಾನ್ಯವಾಗಿ ಎಲ್ಲಾ ಸೂಪರ್ ಮಾರ್ಕೆಟ್ನಲ್ಲಿ ಲಭ್ಯವಿದೆ, ನಿಮಗೆ ಪುಟ್ಟು ಪುಡಿ ಮಾಡಲು ಬರಲ್ಲ ಎಂದಾದರೆ ಈ ರೆಡಿಮೇಡ್ ಪುಡಿ ಸಿಗುತ್ತೆ, ಅದನ್ನು ಬಳಸಿ ರುಚಿಯಾದ ಪುಟ್ಟು ಮಾಡಬಹುದು.
ರಾಗಿ ಪುಡಿಯಿಂದಲೂ ನೀವು ಪುಟ್ಟು ರೆಡಿ ಮಾಡಬಹುದು, ಮಧುಮೇಹಿಗಳಿಗೆ ರಾಗಿ ಪುಟ್ಟು ಆರೋಗ್ಯಕರವಾದ ಬ್ರೇಕ್ಫಾಸ್ಟ್ ಆಗಿದೆ.
ಕಡ್ಲೆ ಸಾರು ಪುಟ್ಟುಗೆ ಅತ್ಯುತ್ತಮ ಕಾಂಬಿನೇಷನ್:
ನೀವು ಕಪ್ಪು ಕಡ್ಲೆ ಸಾರು ಮಾಡಿದರೆ ಇದಕ್ಕೆ ಅತ್ಯುತ್ತಮವಾದ ಕಾಂಬಿನೇಷನ್, ಎರಡು ಪೀಸ್ ಪುಟ್ಟು ತಿಂದರೆ ಹೊಟ್ಟೆ ಕೂಡ ತುಂಬುತ್ತದೆ.
ಪುಟ್ಟು ಮಾಡುವಾಗ ಅದರ ರುಚಿ ಹೆಚ್ಚಿಸುವುದು ತೆಂಗಿನ ತುರಿ, ನೀವು ಮಧ್ಯ, ಮಧ್ಯ ತೆಂಗಿನ ತುರಿ ತುಂಬಬೇಕು, ಜೊತೆಗೆ ಹಿಟ್ಟು ಜೊತೆಗೆ ಸ್ವಲ್ಪ ತೆಂಗಿನ ತುರಿ ಸೇರಿಸಿದರೆ ಪ್ರತಿ ಬಾಯಿಗೂ ತೆಂಗಿನಕಾಯಿ ಸಿಗುವುದರಿಂದ ಇನ್ನೂ ರುಚಿಯಾಗಿರುತ್ತದೆ.



Click it and Unblock the Notifications