Latest Updates
-
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ!
ಪಂಜಾಬಿ ಸ್ಟೈಲ್ ಬಟರ್ ಚಿಕನ್ ಮಾಡೋದು ಹೇಗೆ? ಮನೆಯಲ್ಲೇ ಹೋಟೆಲ್ ರುಚಿ.. ಈ ಟ್ರಿಕ್ ಬಳಸಿ
ಪಂಜಾಬಿ ಸ್ಪೆಷಲ್ ಬಟರ್ ಚಿಕನ್ ರೆಸಿಪಿ. ಹೋಟೆಲ್ ಸ್ಟೈಲ್ ಟೇಸ್ಟ್ ಮನೆಯಲ್ಲಿ ಮಾಡೋದು ಹೇಗೆ? ಒಮ್ಮೆಯಾದರೂ ಪಂಜಾಬಿ ಶೈಲಿಯಲ್ಲಿ ಬಟರ್ ಚಿಕನ್ (Butter Chicken) ತಯಾರಿಸಿ. ಇದು ನಾನ್, ರೊಟ್ಟಿ ಅಥವಾ ಅನ್ನದ ಜೊತೆ ಸವಿಯಲು ಒಂದು ರುಚಿಕರ ಅಡುಗೆ. ಇದು ರೆಸ್ಟೋರೆಂಟ್ಗಳಲ್ಲಿ ಬಹುಬೇಡಿಕೆಯ ಖಾದ್ಯವಾಗಿದ್ದು, ಮನೆಯಲ್ಲೂ ಸುಲಭವಾಗಿ ತಯಾರಿಸಬಹುದು.
ಪಂಜಾಬಿ ಅಡುಗೆಮನೆಯ ಈ ಜನಪ್ರಿಯ ಖಾದ್ಯವು ಈಗ ವಿಶ್ವಾದ್ಯಂತ ಖ್ಯಾತಿ ಪಡೆದಿದೆ. ಇದರ ಮೃದುವಾದ ಗ್ರೇವಿ, ಬೆಣ್ಣೆ ಮತ್ತು ಕೆನೆಯ ಸಮೃದ್ಧಿ ಹಾಗೂ ಮಸಾಲೆಗಳ ಸಮ್ಮಿಶ್ರಣವು ಇದನ್ನು ಅಗ್ರಸ್ಥಾನಕ್ಕೇರಿಸಿದೆ. ರೆಸ್ಟೋರೆಂಟ್ಗಳಲ್ಲಿ ಸಿಗುವ ಅದೇ ಅದ್ಭುತ ರುಚಿಯನ್ನು ಮನೆಯಲ್ಲೇ ಪಡೆಯುವುದು ಹೇಗೆ ಎಂದು ತಿಳಿಯೋಣ. ಈ ಲೇಖನದಲ್ಲಿ ಕೆಲವು ಸರಳ ಪದಾರ್ಥಗಳನ್ನು ಬಳಸಿ ಮನೆಯಲ್ಲಿ ಮಸಾಲೆಯುಕ್ತ ಬಟರ್ ಚಿಕನ್ ತಯಾರಿಸುವ ವಿಧಾನವನ್ನು (Butter Chicken Recipe) ತಿಳಿಸಲಾಗಿದೆ. ಇದು ನಾನ್ ಅಥವಾ ಅನ್ನದೊಂದಿಗೆ ಬಡಿಸಿದಾಗ ಹಬ್ಬದ ಅಡುಗೆಯಂತೆ ಭಾಸವಾಗುತ್ತದೆ.

ಬಟರ್ ಚಿಕನ್ ತಯಾರಿಸಲು ಬೇಕಾದ ಪದಾರ್ಥಗಳು
ಚಿಕನ್ ಮ್ಯಾರಿನೇಷನ್ಗಾಗಿ
• ಬೋನ್ಲೆಸ್ ಚಿಕನ್
• ಮೊಸರು
• ಶುಂಠಿ - ಬೆಳ್ಳುಳ್ಳಿ ಪೇಸ್ಟ್
• ಕೆಂಪು ಮೆಣಸಿನ ಪುಡಿ
• ಅರಿಶಿನ
• ಗರಂ ಮಸಾಲಾ
• ರುಚಿಗೆ ತಕ್ಕಷ್ಟು ಉಪ್ಪು
• ನಿಂಬೆ ರಸ
• ಅಡುಗೆ ಎಣ್ಣೆ
ಗ್ರೇವಿಗೆ ಬೇಕಾದ ಪದಾರ್ಥಗಳು
• ಬೆಣ್ಣೆ
• ಟೊಮೆಟೊ
• ಗೋಡಂಬಿ
• ಶುಂಠಿ
• ಬೆಳ್ಳುಳ್ಳಿ ಎಸಳು
• ಹಸಿ ಮೆಣಸಿನಕಾಯಿ
• ಕಾಶ್ಮೀರಿ ಕೆಂಪು ಮೆಣಸಿನ ಪುಡಿ
• ಕಸೂರಿ ಮೇತಿ (ಹುರಿದು ಪುಡಿ ಮಾಡಿದ್ದು)
• ರುಚಿಗೆ ತಕ್ಕಷ್ಟು ಉಪ್ಪು
• ತಾಜಾ ಕೆನೆ
• ಜೇನುತುಪ್ಪ ಅಥವಾ ಸಕ್ಕರೆ
• ಗರಂ ಮಸಾಲಾ

ಬಟರ್ ಚಿಕನ್ ತಯಾರಿಸುವ ಸರಳ ವಿಧಾನ
ಹಂತ 1: ಚಿಕನ್ ಮ್ಯಾರಿನೇಟ್ ಮಾಡಿ. ಚಿಕನ್ ತುಂಡುಗಳನ್ನು ಮ್ಯಾರಿನೇಷನ್ ಪದಾರ್ಥಗಳೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು 1 ರಿಂದ 2 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಫ್ರಿಜ್ನಲ್ಲಿ ಇಡಿ. ಇದು ಚಿಕನ್ಗೆ ಮಸಾಲೆಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಹಂತ 2: ಈಗ ಚಿಕನ್ ಬೇಯಿಸಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಮತ್ತು ಚೆನ್ನಾಗಿ ಬೇಯುವವರೆಗೆ ಫ್ರೈ ಮಾಡಿ. ನಂತರ ಇದನ್ನು ಒಂದು ಕಡೆ ಇಡಿ.
ಹಂತ 3: ಗ್ರೇವಿ ಬೇಸ್ ತಯಾರಿಸಿಕೊಳ್ಳಿ. ಈಗ ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಗೋಡಂಬಿಯನ್ನು ಸ್ವಲ್ಪ ನೀರಿನೊಂದಿಗೆ 8 ರಿಂಧ10 ನಿಮಿಷಗಳ ಕಾಲ ಕುದಿಸಿ. ಅದು ತಣ್ಣಗಾದ ನಂತರ, ಇದನ್ನು ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿ.

ಹಂತ 4: ಈಗ ಬಟರ್ ಗ್ರೇವಿ ಮಾಡಿ. ಒಂದು ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಅದಕ್ಕೆ ತಯಾರಿಸಿದ ಟೊಮೆಟೊ ಮತ್ತು ಗೋಡಂಬಿ ಪೇಸ್ಟ್ ಹಾಕಿ. ಈಗ ಕೆಂಪು ಮೆಣಸಿನ ಪುಡಿ, ಉಪ್ಪು, ಜೇನುತುಪ್ಪ ಅಥವಾ ಸಕ್ಕರೆ ಮತ್ತು ಗರಂ ಮಸಾಲಾ ಹಾಕಿ. ಎಣ್ಣೆ ಬೇರ್ಪಡುವವರೆಗೆ ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.
ಹಂತ 5: ಅಂತಿಮವಾಗಿ, ಈಗ ಬೇಯಿಸಿದ ಚಿಕನ್ ಸೇರಿಸಿ. ಮತ್ತು 5 ನಿಮಿಷ ಬೇಯಿಸಿ. ನಂತರ ಕಸೂರಿ ಮೇತಿ ಮತ್ತು ಕೆನೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ. ಹಾಗೆಯೇ ಸುಮಾರು 3 ನಿಮಿಷಗಳ ಕಾಲ ಬೇಯಿಸಿ. ಇಷ್ಟು ಮಾಡಿದರೆ ಸಾಕು, ಬಿಸಿ ಬಿಸಿಯಾದ ಬಟರ್ ಚಿಕನ್ ಸಿದ್ಧ. ಇದನ್ನು ನಾನ್ ಅಥವಾ ರೈಸ್ ಜೊತೆಗೆ ಮನೆ ಮಂದಿಯೆಲ್ಲಾ ಸವಿಯಬಹುದು.



Click it and Unblock the Notifications
