Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಹೊಸ ವರ್ಷಕ್ಕೆ ಸಿಹಿ ಸವಿಯಲು ಸಿಹಿ ಕುಂಬಳಕಾಯಿ ಪಾಯಸ: ರುಚಿಯಾದ ಪಾಯಸ ಸುಲಭದಲ್ಲಿ ರೆಡಿಯಾಗುತ್ತೆ
Recipes
oi-Reena TK
Posted By: Reena TK
ಹೊಸ ವರ್ಷಕ್ಕೆ ಏನಾದರು ಸಿಹಿ ಮಾಡಬೇಕೆಂದಿದ್ದರೆ ಸಿಹಿ ಕುಂಬಳಕಾಯಿ ಪಾಯಸ ರೆಡಿ ಮಾಡಬಹುದು, ಇದು ತುಂಬಾ ಸುಲಭದ ರೆಸಿಪಿಯಾಗಿದ್ದು ಅಷ್ಟೇ ರುಚಿಯಾಗಿರುತ್ತದೆ ಕೂಡ. ಅಲ್ಲದೆ ಈ ಸಮಯದಲ್ಲಿ ಸಿಹಿ ಕುಂಬಳಕಾಯಿಯ ಸೇವನೆ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಸಿಹಿ ಕುಂಬಳಕಾಯಿ ಪಾಯಸ ಮಾಡುವಾಗ ನೀವು ತುಂಬಾ ಬಲಿತಿರುವ ಹಣ್ಣಾದ ಸಿಹಿ ಕುಂಬಳಕಾಯಿ ಆಯ್ಕೆ ಮಾಡಬೇಕು, ತಿರುಳು ಹಳದಿ ಅಥವಾ ಕೆಂಪು ಬಣ್ಣದಾಗಿದ್ದರೂ ಒಕೆ. ಸಿಹಿ ಕುಂಬಳಕಾಯಿ ಪಾಯಸಕ್ಕೆ ಪಿಸ್ತಾ ಮತ್ತಿತರ ಡ್ರೈ ಫ್ರೂಟ್ಸ್ ಕೂಡ ಸೇರಿಸಬಹುದು. ಇನ್ನು ಸಕ್ಕರೆ ಬೇಡ ಅಂದರೆ ನೀವು ಬೆಲ್ಲ ಕೂಡ ಬಳಸಬಹುದು.

ಬೇಕಾಗುವ ಸಾಮಗ್ರಿ
ಸಿಹಿ ಕುಂಬಳಕಾಯಿ 1/4 ಕೆಜಿ
ಬಾದಾಮಿ 10
ತುಪ್ಪ 1 ಚಮಚ
ಹಾಲು ಅರ್ಧ ಲೀಟರ್
ಕೇಸರಿ
ಏಲಕ್ಕಿ ಪುಡಿ
ಸಕ್ಕರೆ 1/4 ಕಪ್
ಮಾಡುವ ವಿಧಾನ
- ಸಿಹಿ ಕುಂಬಳಕಾಯಿ ಸಿಪ್ಪೆ ತೆಗೆದು ದೊಡ್ಡ-ದೊಡ್ಡ ದುಂಡುಗಳಾಗಿ ಕತ್ತರಿಸಿ
- ನೀವು ಬಾದಾಮಿಯನ್ನು ಸ್ವಲ್ಪ ನೀರಿಗೆ ಹಾಕಿ ಬೇಯಿಸಿ ತೆಗೆದು ಇಡಿ
- ಈಗ ಅರ್ಧ ಲೀಟರ್ ನೀರಿಗೆ ಸಿಹಿ ಕುಂಬಳಕಾಯಿ, ಸಕ್ಕರೆ ಹಾಕಿ ಬೇಯಿಸಿ.
- ಸಿಹಿ ಕುಂಬಳಕಾಯಿ ಬೇಗನೆ ಬೇಯುತ್ತದೆ, ಬೆಂದ ತಕ್ಷಣ ಸೌಟ್ನಿಂದ ಮ್ಯಾಶ್ ಮಾಡಿ ಹಾಲು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ.
- ಬಾದಾಮಿ ಸಿಪ್ಪೆ ಸುಲಿದು ಸ್ವಲ್ಪ ಹಾಲು ಸೇರಿಸಿ ಗ್ರೈಂಡ್ ಮಾಡಿ. ನಂತರ ಪಾಯಸ ಮಿಶ್ರಣಕ್ಕೆ
- ಪಾಯಸ ಮಿಶ್ರಣ ಸ್ವಲ್ಪ ಗಟ್ಟಿಯಾದಾಗ ಉರಿಯಿಂದ ಇಳಿಸಿ
- ಈಗ ತುಪ್ಪ ಬಿಸಿ ಮಾಡಿ ಅದಕ್ಕೆ ಗೋಡಂಬಿ ದ್ರಾಕ್ಷಿ ಹಾಕಿ ಪಾಯಸ ಜೊತೆ ಸೇರಿಸಿ, ಏಲಕ್ಕಿ ಜಜ್ಜಿ ಹಾಕಿ ಮಿಕ್ಸ್ ಮಾಡಿದರೆ ಸಹಿ ಗೆಣಸಿನ ಪಾಯಸ ರೆಡಿ.
ಇದನ್ನು ನೀವು ಬಿಸಿಬಿಸಿ ಸೇವಿಸಬಹುದು, ಇಲ್ಲಾ ಫ್ರಿಡ್ಜ್ನಲ್ಲಿಟ್ಟು ತಣ್ಣನೆ ಕೂಡ ಸರ್ವ್ ಮಾಡಲು ಚೆನ್ನಾಗಿರುತ್ತದೆ.
Comments
[ of 5 - Users]
Story first published: Saturday, December 28, 2024, 15:26 [IST]
Other articles published on Dec 28, 2024



Click it and Unblock the Notifications