Latest Updates
-
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ
ಸಡನ್ ತಿಂಡಿ ಮಾಡಲು ಪುಳಿಯೋಗರೆ ಪೌಡರ್ ಮಾಡಿ! 6 ತಿಂಗಳು ಇಡಬಹುದು
ನೀವು ಮನೆಯಲ್ಲಿದ್ದಾಗ ಬ್ರೇಕ್ಫಾಸ್ಟ್ಗೆ ಸವಿಯಲು ಹಲವು ಬಗೆಯ ಖಾದ್ಯಗಳ ಮಾಡಿ ಸವಿದಿರುತ್ತೀರಿ. ಅನ್ನದಿಂದ ಮಾಡುವ ಹಲವು ಖಾದ್ಯಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ರೈಸ್ನಿಂದ ಮಾಡುವ ಪಲಾವ್, ಟೊಮೆಟೋ ಬಾತ್, ವಾಂಗೀಬಾತ್, ಚಿತ್ರಾನ್ನ, ರೈಸ್ ಬಾತ್, ಪುಳಿಯೋಗರೆ ಎಲ್ಲರ ಮನೆಯ ತಿಂಡಿ ಎನ್ನಬಹುದು.
ಹಾಗೆ ಬೆಳಗ್ಗೆ ತಿಂಡಿಗೆ ನಾವಿಂದು ಪುಳಿಯೋಗರೆ ಮಾಡಿ ಸವಿಯುವುದು ಸಾಮಾನ್ಯ, ಅಂಗಡಿಗಳಲ್ಲಿ ಸಿಗುವಂತಹ ಪುಳಿಯೋಗರೆ ಪುಡಿ ತಂದು ಪುಳಿಯೋಗರೆ ಮಾಡಿರುತ್ತೀರಿ. ಆದ್ರೆ ಮನೆಯಲ್ಲಿ ಮೊದಲೇ ನೀವು ಪುಳಿಯೋಗರೆ ಪುಡಿ ಕೂಡ ಈ ಪುಳಿಯೋಗರೆ ಮಾಡಬಹುದು. ಹಾಗಾದ್ರೆ ಮಸಾಲೆ ಭರಿತ ಪುಳಿಯೋಗರೆ ಪುಡಿಯನ್ನು ಮನೆಯಲ್ಲಿ ಮಾಡುವುದು ಹೇಗೆ? ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಹಾಗಾದ್ರೆ ಮನೆಯಲ್ಲಿ ಮಸಾಲೆಯುಕ್ತ ಈ ಪುಳಿಯೋಗರೆ ಪುಡಿ ಮಾಡುವುದು ಹೇಗೆ? ಒಮ್ಮೆ ಈ ಪುಡಿ ಮಾಡಿಟ್ಟರೆ ಎಷ್ಟು ದಿನ ಬೇಕಾದರೂ ನಿಮಿಷದಲ್ಲಿ ರುಚಿ ರುಚಿಯ ಪುಳಿಯೋಗರೆ ಮಾಡಿ ಸವಿಯಬಹುದು. ಸಮಯ ಇಲ್ಲದಾಗ, ಗಡಿಬಿಡಿಯಲ್ಲಿದ್ದಾಗಲು ದಿಢೀರ್ ಎಂದು ಪುಳಿಯೋಗರೆ ಮಾಡಬಹುದು. ಹಾಗೆ ಹಾಗೆ ಹಿಂದಿನ ದಿನ ಅನ್ನ ಉಳಿದರೆ ಮಾರನೆ ದಿನ ಬೆಳಗ್ಗೆ ಈ ಮಸಾಲೆ ಬಳಸಿ ಥಟ್ ಎಂದು ಪುಳಿಯೋಗರೆ ಮಾಡಬಹುದು.
ಹಾಗಾದ್ರೆ ಈ ಪುಳಿಯೋಗರೆ ಮಾಸಲ ಪುಡಿ ಮಾಡುವುದು ಹೇಗೆ?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಮಾಡುವ ವಿಧಾನವೇನು? ಯಾವೆಲ್ಲಾ ಪದಾರ್ಥಗಳು ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಸಾಲ ಪುಳಿಯೋಗರೆ ಪುಡಿ ಮಾಡಲು ಯಾವೆಲ್ಲ ವಸ್ತುಗಳು ಬೇಕಾಗುತ್ತದೆ?
- ಒಣ ಮೆಣಸು
- ಕರಿಬೇವು
- ಉದ್ದಿನ ಬೇಳೆ
- ಕಡಲೆ ಬೇಳೆ
- ಎಣ್ಣೆ
- ಇಂಗು
- ಕೊತ್ತಂಬರಿ ಕಾಳು
- ಮೆಂತ್ಯ
- ಸಾಸಿವೆ
- ಜೀರಿಗೆ
- ಕಾಳು ಮೆಣಸು
- ಒಣ ಕೊಬ್ಬರಿ
- ಅರಶಿಣ
- ಉಪ್ಪು
ಮಸಾಲ ಪುಳಿಯೋಗರೆ ಪುಡಿ ಮಾಡುವುದು ಹೇಗೆ?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಒಣ ಮೆಣಸು ಹಾಕಿಕೊಳ್ಳಿ. ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಹಾಕಿಕೊಳ್ಳಿ. ಮೆಣಸು ಹೆಚ್ಚು ಬಳಸಿ 30ರಿಂದ 35 ಇರಲಿ. ನಂತರ ಕರಿಬೇವು, ಎಣ್ಣೆ ಹಾಕಿ ಗರಿ ಗರಿ ಆಗುವವರೆಗೂ ಫ್ರೈ ಮಾಡಿಕೊಳ್ಳಬೇಕು. ನಂತರ ಇದನ್ನು ತೆಗೆದು ಬದಿಗಿಟ್ಟುಕೊಳ್ಳಿ. ಈಗ 2 ಸ್ಪೂನ್ ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಫ್ರೈ ಮಾಡಿ ತೆಗೆದಿಡಿ.
ಈಗ 4 ಸ್ಪೂನ್ ಕೊತ್ತಂಬರಿ ಕಾಳು ಹಾಕಿ ಹುರಿದು ತೆಗೆದಿಡಿ. ಈಗ ಬಿಳಿ ಅಥವಾ ಕಪ್ಪು ಎಳ್ಳು ಕೂಡ ಹಾಕಿ ಫ್ರೈ ಮಾಡಿ ತೆಗೆದಿಡಿ. ನಂತರ ಕಾಳು ಮೆಣಸು, ಜೀರಿಗೆ, ಮೆಂತ್ಯ , ಸಾಸಿವೆ ಒಟ್ಟಿಗೆ ಹಾಕಿ ಬಿಸಿ ಮಾಡಿ ಎತ್ತಿಡಿ. ಈಗ 1 ಸ್ಪೂನ್ ಕೊಬ್ಬರಿ ಕತ್ತರಿಸಿ ಹಾಕಿ ಫ್ರೈ ಮಾಡಿ ತೆಗೆದಿಡಿ. ನಂತರ ಹುಣಸೆ ಹಣ್ಣು ಕೂಡ 2 ನಿಮಿಷ ಬಿಸಿ ಮಾಡಿ ತೆಗೆದಿಟ್ಟುಕೊಳ್ಳಿ.
ಹೀಗೆ ಹುರಿದುಕೊಂಡ ಎಲ್ಲಾ ಪದಾರ್ಥಗಳು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಎಲ್ಲಾ ಪದಾರ್ಥ ಅದರಲ್ಲಿ ಹಾಕಿ ಅರಶಿಣ, ಬೆಲ್ಲ ಸಹ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ಉಪ್ಪು ಕೂಡ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಒಂದು ಪ್ಲೇಟ್ಗೆ ಹಾಕಿಡಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು 2 ಸ್ಪೂನ್ ಎಣ್ಣೆ ಹಾಕಿ ಸಾಸಿವೆ, ಕಡಲೆ ಬೀಜ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ. 2ರಿಂದ 3 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಮುರಿದ ಒಣ ಮೆಣಸು, ಇಂಗು, ಕರಿಬೇವು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಒಣ ಕೊಬ್ಬರಿ ತುರಿ ಹಾಕಿ ಮಿಕ್ಸ್ ಮಾಡಿ. ನಂತರ ರುಬ್ಬಿ ಪುಡಿ ಮಾಡಿಕೊಂಡಿರುವ ಮಸಾಲೆ ಪುಡಿಗಳನ್ನು ಇದಕ್ಕೆ ಹಾಕಿ ಸಣ್ಣ ಉರಿಯಲ್ಲಿ 1 ನಿಮಿಷ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಪುಳಿಯೋಗರೆ ಪುಡಿ ರೆಡಿಯಾಗುತ್ತದೆ. ಇದನ್ನು ನೀವು 6 ರಿಂದ 7 ತಿಂಗಳ ಕಾಲ ಇಟ್ಟು ಕೂಡ ಸವಿಯಬಹುದು.



Click it and Unblock the Notifications