Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ನಿಮಿಷದಲ್ಲಿ ಮಾಡಿ ಪುಳಿಯೋಗರೆ ಗೊಜ್ಜು ಮಾಡಿ; 1 ತಿಂಗಳ ಕಾಲ ಇಟ್ಟು ಸವಿಯಬಹುದು!
ನಿತ್ಯ ಒಂದಲ್ಲಾ ಒಂದು ಖಾದ್ಯ ಮಾಡಿ ಸವಿಯಲು ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಹಲವರಿಗೆ ಒಂದೇ ರೀತಿ ಖಾದ್ಯಕ್ಕಿಂತಲೂ ವಿವಿಧ ಬಗೆಯ ತಿಂಡಿಗಳು ಮಾಡುವುದು ಅಂದ್ರೆ ಇಷ್ಟ. ಆದ್ರೆ ಪ್ರತಿದಿನದ ಕೆಲಸದ ನಡುವೆ ಅಡುಗೆ ಮನೆಯ ಕೆಲಸ ಕೂಡ ನಿಮಗೆ ಸಮಸ್ಯೆ ಅಥವಾ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ ಸುಲಭವಾಗಿ ಅಥವಾ ಕಡಿಮೆ ಸಮಯದಲ್ಲಿ ಮಾಡುವ ಯಾವುದಾದರು ತಿಂಡಿ ಮಾಡಲು ಮುಂದಾಗುತ್ತೀರಿ.
ಆದ್ರೆ ನಾವಿಂದು ಒಂದು ದಿನ ಮಾಡಿಟ್ಟ ತಿಂಡಿ ಬಹುದಿನಗಳ ಕಾಲ ಸವಿಯಬಹುದು. ಹೌದು ಒಮ್ಮೆ ನೀವು ಪುಳಿಯೋಗರೆ ಗೊಜ್ಜು ಮಾಡಿ ಇಟ್ಟರೆ ತಿಂಗಳ ಕಾಲ ಸವಿಯಬಹುದು. ಹೌದು ಈ ಗೊಜ್ಜು ಮಾಡಿ ಇಟ್ಟರೆ ಸುಲಭವಾಗಿ ಒಂದು ತಿಂಗಳ ಕಾಲ ಪುಳಿಯೋಗರೆ ಮಾಡಿಕೊಂಡು ಸವಿಯಬಹುದು. ಅಂಗಡಿಯಲ್ಲಿ ಸಿಗುವ ಪುಳಿಯೋಗರೆ ಪುಡಿಗಿಂತಲೂ ಈ ಗೊಜ್ಜು ಬಹಳ ರುಚಿ ನೀಡಲಿದೆ.

ಹಾಗೆ ಈ ಗೊಜ್ಜು ರುಚಿ ರುಚಿಯಾಗಿ ಮಾಡಿಟ್ಟು ಸುಲಭವಾಗಿ ಮಾಡಿಡಬಹುದು. ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಬಹುದು. ಬೆಳಗ್ಗೆ ಗಡಿಬಿಡಿಯಲ್ಲಿದ್ದಾಗ ಈ ಪುಳಿಯೋಗರೆಯನ್ನ 5 ನಿಮಿಷದೊಳಗೆ ಮಾಡಿ ಸವಿಯಬಹುದು. ಹಾಗಾದ್ರೆ ಮನೆಯಲ್ಲಿ ಸುಲಭವಾಗಿ ಈ ಪುಳಿಯೋಗರೆ ಗೊಜ್ಜು ಮಾಡುವುದು ಹೇಗೆ ನೋಡೋಣ.
ಪುಳಿಯೋಗರೆ ಗೊಜ್ಜು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಪುಳಿಯೋಗರೆ ಗೊಜ್ಜು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಪುಳಿಯೋಗರೆ ಪುಡಿ
- ಕಪ್ಪು ಎಳ್ಳು
- ಕರಿಬೇವು
- ಕಡಲೆ ಬೇಳೆ
- ಉದ್ದಿನ ಬೇಳೆ
- ತೆಂಗಿನಕಾಯಿ ತುರಿ
- ಎಣ್ಣೆ
- ಒಣ ಮೆಣಸು
- ಶೇಂಗಾ ಬೀಜ
ಪುಳಿಯೋಗರೆ ಗೊಜ್ಜು ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎಳ್ಳು ಹಾಕಿಕೊಳ್ಳಿ. ಹಾಗೆ ಈ ಕಪ್ಪು ಎಳ್ಳು ತರಿ ತರಿಯಾಗಿ ರುಬ್ಬಿ ಒಂದು ಬೌಲ್‌ಗೆ ಹಾಕಿಕೊಳ್ಳಿ. ಅನಂತರ ತುರಿದ ತೆಂಗಿನಕಾಯಿ ಇದಕ್ಕೆ ಹಾಕಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಬೇಕು. ತುಸು ಹೆಚ್ಚಿಗೆ ಎಣ್ಣೆ ಬಳಸಿಕೊಳ್ಳಬೇಕು.
ಈ ಎಣ್ಣೆ ಬಿಸಿಯಾದ ಬಳಿಕ ಶೇಂಗಾ ಬೀಜಗಳ ಹಾಕಿ ಹುರಿದುಕೊಳ್ಳಬೇಕು. ಹಾಗೆ ಇದಕ್ಕೆ ಉದ್ದಿನ ಬೇಳೆ ಮತ್ತು ಕಡಲೆ ಬೇಳೆ ಕೂಡ ಹಾಕಿಕೊಳ್ಳಬೇಕು. ಚೆನ್ನಾಗಿ ಕರಿದುಕೊಂಡಾಗ ಇದಕ್ಕೆ ಕರಿಬೇವು, ಒಣ ಮೆಣಸು, ಹಾಕಿ ಫ್ರೈ ಮಾಡಿ. ಈಗ ಒಲೆ ಆಫ್ ಮಾಡಿಕೊಂಡು ನೀರಿನಲ್ಲಿ ನೆನೆಸಿಟ್ಟ ಹುಣಸೆ ಹುಳಿಯ ರಸವನ್ನು ಇದಕ್ಕೆ ನಿಧಾನಕ್ಕೆ ಹಾಕಿ ಮತ್ತೆ ಉರಿಯಲ್ಲಿ ಮಧ್ಯಮವಾಗಿಟ್ಟು 5 ನಿಮಿಷ ಕುದಿಬರಲು ಬಿಡಿ.
ಅನಂತರ ಇದಕ್ಕೆ ಬೆಲ್ಲದ ಚೂರು ಹಾಗೆ ಅಂಗಡಿಯಿಂದ ತಂದಿರುವ ಪುಳಿಯೋಗರೆ ಪುಡಿ ಹಾಕಿ. ಹಾಗೆ ಮಿಕ್ಸಿಯಲ್ಲಿ ರುಬ್ಬಿದ್ದ ಎಳ್ಳು ತೆಂಗಿನಕಾಯಿಯ ತುರಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ನಂತರ ಮತ್ತೆ 2ರಿಂದ 3 ನಿಮಿಷ ಹಾಗೆಯೆ ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಪುಳಿಯೋಗರೆ ಗೊಜ್ಜು ಸಿದ್ದವಾಗುತ್ತೆ, ನೀವು ಕೂಡ ಮನೆಯಲ್ಲಿ ಸುಲಭವಾಗಿ ಇದನ್ನು ಮಾಡಿ ಮುಗಿಸಬಹುದು.
ಇದನ್ನು ಒಂದು ತಿಂಗಳ ಕಾಲ ಇಟ್ಟು ಸವಿಯಬಹುದು. ನೀವು ಕೂಡ ಮನೆಯಲ್ಲಿ ಸವಿದು ನೋಡಿ. ಹಾಗೆ ಅನ್ನ ಮಾಡಿಟ್ಟುಕೊಂಡರೆ ನಿಮಿಷದಲ್ಲಿ ಪೂಲಿಯೋಗರೆ ಸಿದ್ದವಾಗುತ್ತೆ. ಬೆಳಗ್ಗೆ ಗಡಿಬಿಡಯಲ್ಲಿದ್ದಾಗ ಈ ತಿಂಡಿಯನ್ನು ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು. ಹಾಗೆ ಇದನ್ನು ಹಲವು ದಿನಗಳ ಕಾಲ ಇಡಬಹುದು.



Click it and Unblock the Notifications
