Latest Updates
-
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ?
5 ನಿಮಿಷ ಸಮಯ ಇದ್ದರೆ ಪುದಿನ-ಕಡಲೆ ಚಟ್ನಿ ರೆಡಿ..!
ಬೆಳಗ್ಗೆ ತಿಂಡಿಗೆ ನೀವು ಹಲವು ರೀತಿಯ ಚಟ್ನಿಗಳ ಮಾಡಿರುತ್ತೀರಿ. ಅದರಲ್ಲೂ ಕಾಯಿ ಚಡ್ನಿ, ಪುದಿನ ಚಟ್ನಿ ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಪುದಿನ ಆರೋಗ್ಯಕ್ಕೂ ಉತ್ತಮವಾಗಿರೋದ್ರಿಂದ ಎಲ್ಲರಿಗೂ ಇಷ್ಟವಾಗುತ್ತದೆ, ಎಲ್ಲಾ ರೀತಿಯ ತಿಂಡಿಗೂ ಈ ಪುದಿನ ಚಟ್ನಿ ಸಿಕ್ಕಾಪಟ್ಟೆ ರುಚಿ ನೀಡಲಿದೆ.
ಚಟ್ನಿಯಲ್ಲಿ ಹಾಗೂ ಕೆಲವು ಮಸಾಲೆಗಳಲ್ಲಿ ರುಚಿಗಾಗಿ ಬಳಸಲಾಗುವ ಪುದೀನ ಎಲೆಗಳು ಕೇವಲ ರುಚಿ ಪರಿಮಳ ನೀಡುವಲ್ಲಿ ಮಾತ್ರವಲ್ಲ, ಬದಲಿಗೆ ಹಲವಾರು ಔಷಧೀಯ ಗುಣಗಳಿಂದಲೂ ಸಮೃದ್ಧವಾಗಿದೆ.

ಇದರ ಪರಿಮಳ ಆಹ್ಲಾದಕರವಾಗಿದ್ದರೂ ರುಚಿ ಮಾತ್ರ ಕೊಂಚವೇ ಒಗರಾಗಿರುವುದರಿಂದ ಈ ಎಲೆಗಳನ್ನು ನೇರವಾಗಿ ತಿನ್ನಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಕೊಂಚಕೊಂಚವಾಗಿ ತಿನ್ನುತ್ತಾ ಬಂದರೆ ಕ್ರಮೇಣ ಇದು ಇಷ್ಟವಾಗತೊಡಗುತ್ತದೆ. ಈ ಎಲೆಗಳಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿವೆ. ಅಲ್ಲದೇ ಹೆಚ್ಚಿನ ಕರಗದ ನಾರು ಸಹಾ ಇದೆ.
ಪುದೀನ ಎಲೆಗಳು ಜೀರ್ಣಕ್ರಿಯೆಯಲ್ಲಿ ಅತಿ ಹೆಚ್ಚು ಸಹಕಾರ ನೀಡುತ್ತದೆ ಹಾಗೂ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತದೆ. ಹೊಟ್ಟೆಯಲ್ಲಿ ಆಮ್ಲೀಯತೆಯಾಗುವುದನ್ನು ತಡೆದು ಅಪಾನವಾಯು, ಮಲಬದ್ಧತೆ, ಹೊಟ್ಟೆಯುರಿ, ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಈ ಗುಣಗಳ ಜೊತೆಗೆ ಇದು ತೂಕವನ್ನು ಇಳಿಸಲೂ ನೆರವಾಗುತ್ತದೆ.
ಹೀಗಾಗಿ ಹೆಚ್ಚಿನವರು ಪುದಿನ ಚಟ್ನಿಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗಾದ್ರೆ ನಾವಿಂದು ತಿಂಡಿಗೆ ಪುದಿನ ಚಟ್ನಿ ಮಾಡುವುದು ಹೇಗೆ? ಪುದಿನ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳ ಬೇಕು? ಮಾಡುವುದು ಹೇಗೆ? ಚಟ್ನಿ ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ
ಪುದಿನ-ಕಡಲೆ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳೇನು
- ಪುದೀನ ಎಲೆಗಳು - 2 ಕಪ್
- ಕೊತ್ತಂಬರಿ ಸೊಪ್ಪು - 1/2 ಕಪ್
- ಕಡಲೆ - 3/4 ಕಪ್
- ತೆಂಗಿನಕಾಯಿ - 1/2 ಕಪ್
- ಜೀರಿಗೆ - 1 ಟೀಸ್ಪೂನ್
- ಬೆಳ್ಳುಳ್ಳಿ - 8 ಪಿಸಿಗಳು
- ಹಸಿರು ಮೆಣಸಿನಕಾಯಿ - 5
- ಕೆಂಪು ಮೆಣಸಿನಕಾಯಿ - 2
- ಹುಣಸೆಹಣ್ಣು-1/4 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ಪುದಿನ-ಕಡಲೆ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆಯಲ್ಲಿ ಕಡಲೆ ಹಾಕಿಕೊಂಡು ಹುರಿದುಕೊಳ್ಳಿ. ಹುರಿದು ಬದಿಗಿಟ್ಟುಕೊಳ್ಳಿ. ಅದೇ ಪಾತ್ರೆಗೆ ಎಣ್ಣೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಜೀರಿಗೆ, ಬೆಳ್ಳುಳ್ಳಿ, ಒಣ ಮೆಣಸು, ಹಸಿ ಮೆಣಸು, ಪುದಿನ, ಕೊತ್ತಂಬರಿ ಸೊಪ್ಪು ಹಾಕಿ ಎರಡು ನಿಮಿಷ ಫ್ರೈ ಮಾಡಿಕೊಳ್ಳಿ.
ಇದಾದ ಬಳಿಕ ಇದಕ್ಕೆ ಹುಣಸೆ ಹುಳಿ, ತೆಂಗಿನ ಕಾಯಿ ಹಾಕಿ ಫ್ರೈ ಮಾಡಿ. 1 ನಿಮಿಷ ಹುರಿದರೆ ಸಾಕು. ಇದಾದ ಬಳಿಕ ಈ ಮಸಾಲೆಯನ್ನು ತೆಗೆದುಕೊಂಡು ಮಿಕ್ಸಿ ಜಾರ್ಗೆ ಹಾಕಿಕೊಂಡು ಉಪ್ಪು ಹಾಕಿ, ಹುರಿದುಕೊಂಡ ಕಡಲೆ ಹಾಕಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನಿಮಗೆ ಎಷ್ಟು ತೆಳುವಾದ ಚಟ್ನಿ ಬೇಕೋ ಅಷ್ಟು ನೀರು ಹಾಕಿಕೊಂಡು ರುಬ್ಬಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಪುದಿನ-ಕಡಲೆ ಚಟ್ನಿ ರೆಡಿಯಾಗಿರುತ್ತೆ. ಇದನ್ನು ಚಪಾತಿ, ಇಡ್ಲಿ, ದೋಸೆ ಸೇರಿ ಎಲ್ಲಾ ಖಾದ್ಯದ ಜೊತೆಯೂ ಸವಿಯಬಹುದು.
ಪುದಿನ ಎಲೆಯಲ್ಲಿ ಹಲವು ಆರೋಗ್ಯಕರ ಪ್ರಯೋಜನಗಳು
ಕೆಲವು ತಾಜಾ ಪುದೀನ ಎಲೆಗಳನ್ನು ನಿಮ್ಮ ನಿತ್ಯದ ಸಾಲಾಡ್ ನೊಂದಿಗೆ ಬೆರೆಸಿ ಹಸಿಯಾಗಿ ಸೇವಿಸಿ. ಇದರಿಂದ ಹೊಟ್ಟೆಯುಬ್ಬರಿಕೆಯಿಂದ ರಕ್ಷಣೆ ದೊರಕುವುದು ಮಾತ್ರವಲ್ಲ, ತೂಕ ಇಳಿಯಲೂ ನೆರವಾಗುತ್ತದೆ. ಪುದೀನ ಸೇವನೆಯ ಜೊತೆಗೇ ಕೊಬ್ಬು ಹೆಚ್ಚಿಸುವ, ಕ್ಯಾಲೋರಿಗಳು ಹೆಚ್ಚಿರುವ ಆಹಾರಗಳನ್ನು ಸೇವಿಸದೇ ಇರುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ನಿತ್ಯವೂ ಅರ್ಧ ಗಂಟೆಯಾದರೂ ನಡೆದಾಡುವುದು ತೂಕ ಇಳಿಯಲು ಅಗತ್ಯವಾಗಿದೆ.



Click it and Unblock the Notifications
