Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಕುಕ್ಕರ್‌ನಲ್ಲಿ ಮಾಡಿ ಸುಲಭದ ಪುದಿನ ಜೀರಿಗೆ ರೈಸ್; ರುಚಿಯಲ್ಲಿ ಇದು ಬೆಸ್ಟ್!
ನೀವು ಬೆಳಗ್ಗಿನ ತಿಂಡಿಗೆ ವಿವಿಧ ಬಗೆಯ ಹಾಗೆ ರುಚಿ ರುಚಿಯಾದ ಖಾದ್ಯವನ್ನು ಮಾಡಿ ಸವಿಯುವ ಆಲೋಚನೆಯಲ್ಲಿದ್ದರೆ ರೈಸ್‌ನಿಂದ ಮಾಡುವಂತಹ ಹಲವು ತಿಂಡಿ ಮಾಡಿರುತ್ತೀರಿ. ಅದ್ರಲ್ಲೂ ರೈಸ್‌ಬಾತ್, ಪಲಾವ್, ಚಿತ್ರಾನ್ನ, ಪುಳಿಯೋಗರೆ ಸೇರಿದಂತೆ ಕೆಲವೊಂದು ಸುಲಭದ ರೆಸಿಪಿಗಳನ್ನು ಮಾಡಿರುತ್ತೀರಿ. ಬೆಳಗ್ಗೆ ಗಡಿಬಿಡಿಯ ಸಮಯದಲ್ಲಿ ಬಹಳ ಸುಲಭವಾಗಿ ನೀವು ಯಾವುದಾದರು ಖಾದ್ಯ ಮಾಡಿ ಸವಿಯುವ ಆಲೋಚನೆಯಲ್ಲಿದ್ದರೆ ನಾವಿಂದು ಸುಲಭದ ರೆಸಿಪಿಯೊಂದನ್ನು ಹೇಳಲಿದ್ದೇವೆ.
ಹೌದು ಬೆಳಗ್ಗೆ ತಿಂಡಿಗೆ ಸವಿಯಲು ನಾವಿಂದು ಸುಲಭವಾಗಿ ಕುಕ್ಕರ್ ಬಳಸಿಕೊಂಡು ಮಾಡಬಹುದಾದ ರೈಸ್ ಕುರಿತು ತಿಳಿಯೋಣ. ಅದ್ರಲ್ಲೂ ಪುದಿನ ಸೊಪ್ಪನ್ನು ಬಳಸಿಕೊಂಡು ಮಾಡುವ ಅದ್ಭುತ ರುಚಿಯ ಪುದಿನ ರೈಸ್ ಮಾಡುವ ಕುರಿತು ಇಂದು ತಿಳಿದುಕೊಳ್ಳಿ. ಜೀರಿಗೆ ಹಾಗೂ ಪುದಿನ ಎಲೆಗಳ ಸರಿಯಾದ ಪ್ರಮಾಣದಲ್ಲಿ ಬಳಸಿ ಮಾಡುವ ಈ ರುಚಿಕರ ತಿಂಡಿ ಎಲ್ಲರಿಗೂ ಇಷ್ಟವಾಗುತ್ತೆ.

ಪುದಿನ ಜೀರಿಗೆ ರೈಸ್ ಮಾಡುವುದು ಬಹಳ ಸುಲಭ ಹಾಗೆ ಎಲ್ಲರಿಗೂ ಇಷ್ಟವಾಗುವ ಖಾದ್ಯ ಇದು. ಪುದಿನ ಸೊಪ್ಪಿನ ಹಲವು ರೀತಿಯ ರೆಸಿಪಿಗಳನ್ನು ನೀವು ಮಾಡಿ ಸವಿದಿರಬಹುದು. ಆದ್ರೆ ನಾವಿಂದು ಕುಕ್ಕರ್‌ನಲ್ಲಿ ಸುಲಭವಾಗಿ ಮಾಡಿ ಮುಗಿಸಬಹುದಾದ ಈ ರೈಸ್ ಕುರಿತು ತಿಳಿಯೋಣ.
ಪುದಿನ ಜೀರಿಗೆ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಪುದಿನ ಜೀರಿಗೆ ರೈಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಪುದಿನ ಸೊಪ್ಪು
- ಗೋಡಂಬಿ
- ಬಟಾಣಿ
- ಜೀರಿಗೆ
- ಪಲಾವ್ ಎಲೆ
- ಲವಂಗ
- ಚಕ್ಕೆ
- ಚಕ್ರಮೊಗ್ಗು
- ಉಪ್ಪು
- ಎಣ್ಣೆ
- ದನಿಯಾ
- ಗರಂ ಮಸಾಲ
- ಅರಶಿಣ
- ಮೊಸರು
ಪುದಿನ ಜೀರಿಗೆ ರೈಸ್ ಮಾಡುವ ವಿಧಾನವೇನು?
ಒಂದು ಪಾತ್ರೆಗೆ ಒಂದೂವರೆ ಕಪ್ ಅಕ್ಕಿ ಹಾಕಿಕೊಂಡು ನೀರು ಹಾಕಿ ತೊಳೆದುಕೊಳ್ಳಿ. ನಂತರ ನೀರು ಹಾಕಿ 15 ನಿಮಿಷ ನೆನೆಯಲು ಬಿಡಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು, ಹಾಗೆ ಹೆಚ್ಚು ಪ್ರಮಾಣದ ಪುದಿನ ಸೊಪ್ಪು ಹಾಕಿಕೊಂಡು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಈ ಪೇಸ್ಟ್ ಅನ್ನು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಕುಕ್ಕರ್ ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಜೀರಿಗೆ, ಪಲಾವ್ ಎಲೆ, ಲವಂಗ, ಚಕ್ಕೆ, ಚಕ್ರಮೊಗ್ಗು ಸಹ ಹಾಕಿಕೊಂಡು ಬಿಸಿ ಮಾಡಿ ಬಳಿಕ ಒಂದು ಈರುಳ್ಳಿಯನ್ನು ಕತ್ತರಿಸಿ ಹಾಕಿಕೊಳ್ಳಿ. ನಂತರ ಇದಕ್ಕೆ ಗೋಡಂಬಿ, ಬಟಾಣಿ ಸಹ ಹಾಕಿ 1 ನಿಮಿಷ ಫ್ರೈ ಮಾಡಿ.
ಈಗ ರುಬ್ಬಿಕೊಂಡಿದ್ದ ಮಸಾಲೆಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. 2 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಈಗ 1 ಸ್ಪೂನ್ ದನಿಯಾ ಪುಡಿ, ಗರಂ ಮಸಾಲ, ಅಡುಗೆ ಅರಶಿಣ, ಮೊಸರು ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ ಅಕ್ಕಿ ಅಳತೆಯಲ್ಲಿ ನೀರು ಹಾಕಿಕೊಳ್ಳಿ. ಒಂದೂವರೆ ಕಪ್ ಅಕ್ಕಿಗೆ ಎರಡರಷ್ಟು ನೀರು ಹಾಕಿ ಕುದಿಬರಲು ಬಿಡಿ.
ನೀರು ಕುದಿಬರಲು ಆರಂಭಿಸಿದಾಗ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಅನಂತರ ಕುಕ್ಕರ್ ಮುಚ್ಚಳ ಮುಚ್ಚಿಕೊಂಡು 1 ಸೀಟಿ ಹೊಡೆಸಿಕೊಳ್ಳಿ. ನಂತರ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಳ್ಳಿ. ಮೃದುವಾಗಿದ್ದರೆ ಮತ್ತೆ ಚೂರು ಒಲೆಯಲ್ಲಿ ಹಾಗೆಯೇ ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಪುದಿನ ಜೀರಿಗೆ ರೈಸ್ ಸಿದ್ದವಾಗುತ್ತೆ ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ.



Click it and Unblock the Notifications
