Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹಳ್ಳಿ ಸ್ಟೈಲ್ನಲ್ಲಿ ಪುದಿನ ಚಟ್ನಿ ಮಾಡಿ ನೋಡಿ..! ಬಹಳ ಸುಲಭದ ವಿಧಾನವಿದು..!
ನಾವು ಊಟ, ಅಥವಾ ಬೆಳಗ್ಗೆಯ ತಿಂಡಿಗೆ ಬಗೆ ಬಗೆಯ ಚಟ್ನಿ ಮಾಡಿ ಸವಿದಿರುತ್ತೇವೆ. ತಿಂಡಿಯ ರುಚಿ ಹೆಚ್ಚಾಗುವಂತೆ ಮಾಡುವುದೇ ಈ ಚಟ್ನಿ. ಇಂತಹ ಚಟ್ನಿಯನ್ನು ನಾವು ನಿತ್ಯ ಮಾಡುತ್ತೇವೆ, ಇಲ್ಲವೆ ಆಗಾಗಾ ಮಾಡುತ್ತಲೇ ಇರುತ್ತೇವೆ, ಸಾಮಾನ್ಯವಾಗಿ ತೆಂಗಿನಕಾಯಿ ಚಟ್ನಿ, ಹುರಿಗಡಲೆ ಚಟ್ನಿ, ಸೊಪ್ಪುಗಳ ಚಟ್ನಿ ಹೀಗೆ ನಾನಾ ರೀತಿ ರುಚಿ ನೀಡುವ ಚಟ್ನಿ ನೆನೆದರೆ ಬಾಯಲ್ಲಿ ನೀರು ಬರುತ್ತೆ.
ಈ ಚಟ್ನಿಯಲ್ಲಿ ಪುದೀನ ಎಲೆಯಲ್ಲಿ ಮಾಡುವ ಚಟ್ನಿ ಅತ್ಯಂತ ರುಚಿಕರವಾಗಿರುತ್ತೆ, ಇದಂತು ಅನ್ನ, ತಿಂಡಿ ಎರಡಕ್ಕೂ ಅತ್ಯಂತ ರುಚಿಕರವಾದ ಚಟ್ನಿ. ಅದರ ಸುವಾಸನೆಯೂ ಕೂಡ ಬಾಯಲ್ಲಿ ನೀರು ತರಿಸುತ್ತೆ. ಹಾಗೆ ಈ ಚಟ್ನಿಗೆ ಒಂದು ಒಗ್ಗರಣೆ ಹಾಕಿದರೆ ಘಮಲು ಇಡಿ ಮನೆ ತುಂಬುತ್ತದೆ. ಹಾಗೆ ಇದನ್ನು ದೋಸೆ, ಇಡ್ಲಿ ಜೊತೆಗೆ ಹೇಳಿ ಮಾಡಿಸಿದ ಚಟ್ನಿ.

ಆದ್ರೆ ಈ ಚಟ್ನಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಮಾಡಿರುತ್ತೇವೆ, ಎಲ್ಲಾ ಕಡೆಯು ಒಂದೇ ರುಚಿ ಎಂದು ನೀವು ಭಾವಿಸಿರಬಹುದು. ಆದ್ರೆ ಹಳ್ಳಿ ಶೈಲಿಯಲ್ಲಿ ಈ ಚಟ್ನಿ ಮಾಡಿದರೆ ಆ ರುಚಿಯೇ ಬೇರೆ. ಹಳ್ಳಿ ಸ್ಟೈಲ್ನಲ್ಲಿ ಪುದಿನ ಎಲೆ ಚಟ್ನಿಯೂ ಅತ್ಯಂತ ರುಚಿಕರವಾಗಿರುತ್ತದೆ.
ಹಾಗಾದ್ರೆ ನಾವಿಂದು ಹಳ್ಳಿ ಸ್ಟೈಲ್ನಲ್ಲಿ ಪುದಿನ ಚಟ್ನಿ ಮಾಡುವುದನ್ನು ನಾವಿಂದು ತಿಳಿದುಕೊಳ್ಳೋಣ. ಈ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪುದಿನ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಪುದಿನ ಸೊಪ್ಪು
- ಈರುಳ್ಳಿ
- ತೆಂಗಿನಕಾಯಿ ತುರಿ
- ಹಸಿಮೆಣಸಿನಕಾಯಿ
- ಶುಂಠಿ
- ಬೆಳ್ಳುಳ್ಳಿ
- ಹುಣಸೆಹಣ್ಣು
- ಸಕ್ಕರೆ
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಉದ್ದಿನಬೇಳೆ
- ಕಡಲೆಬೇಳೆ
- ಕರಿಬೇವಿನ ಸೊಪ್ಪು
- ಉಪ್ಪು
- ಎಣ್ಣೆ
ಪುದಿನ ಸೊಪ್ಪಿನ ಚಟ್ನಿ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಈರುಳ್ಳಿ, ಹಸಿ ಮೆಣಸು, ಬೆಳ್ಳುಳ್ಳಿ, ಶುಂಠಿ ಬಳಿಕ ಸ್ವಲ್ಪ ಎಣ್ಣೆ ಹಾಕಿ 4ರಿಂದ 5 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಚೆನ್ನಾಗಿ ಫ್ರೈ ಮಾಡಿದ ಬಳಿಕ ಇದಕ್ಕೆ ಇಡಿಯಾದ ಪುದಿನ ಎಲೆಗಳನ್ನು ಇದಕ್ಕೆ ಸೇರಿಸಿಕೊಳ್ಳಿ. 1 ಕಟ್ ಪುದಿನ ಸೊಪ್ಪು ಸಾಕಾಗುತ್ತದೆ. ಈ ಪುದಿನ ಸೊಪ್ಪು ಹಾಕಿ ಸುಮಾರು 5 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಸೊಪ್ಪು ಕರಗಿ ಸ್ವಲ್ಪವೇ ಸ್ವಲ್ಪ ಪದಾರ್ಥವಾಗುತ್ತೆ. ನಂತರ ಒಲೆ ಆಫ್ ಮಾಡಿ ಈ ಮಸಾಲೆಗಳು ತಣ್ಣಗಾಗಲು ಬಿಡಿ. ಇದಲ್ಲಾ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ಗೆ ಹಾಕಿಕೊಂಡು ಅದಕ್ಕೆ ತೆಂಗಿನ ತುರಿ, ಹುಣಸೆ ಹುಳಿ, ಸಕ್ಕರೆ ಒಂದು ಸ್ಪೂನ್, ಉಪ್ಪು, ಕೊತ್ತಂಬರಿ ಸೊಪ್ಪು, ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು.
ಎಷ್ಟು ನುಣ್ಣಗೆ ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಚಟ್ನಿಯನ್ನ ಒಂದು ಬೌಲ್ಗೆ ಹಾಕಿಡಿ. ಈಗ ಒಲೆ ಮೇಲೆ ಒಂದು ಚಿಕ್ ಪಾತ್ರೆ ಇಟ್ಟು ಒಗ್ಗರಣೆ ರೆಡಿ ಮಾಡಿಕೊಳ್ಳಿ. ಈ ಪಾತ್ರೆಗೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವಿನ ಸೊಪ್ಪು, ಒಣ ಮೆಣಸು ಹಾಕಿ ಒಂದು ನಿಮಿಷ ಬಿಟ್ಟು ಚಟ್ನಿಗೆ ಹಾಕಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ಪುದಿನ ಚಟ್ನಿ ರೆಡಿಯಾಗುತ್ತದೆ. ಹಳ್ಳಿ ಸ್ಟೈಲ್ನಲ್ಲಿ ಈ ರೀತಿಯ ಚಟ್ನಿ ಹೆಚ್ಚಾಗಿ ಮಾಡುತ್ತಾರೆ. ನೀವು ಸಹ ಒಮ್ಮೆ ಈ ವಿಧಾನದಲ್ಲಿ ಚಟ್ನಿ ಮಾಡಿ ನೋಡಿ. ಇದರ ರುಚಿ ನೋಡಿದರೆ ಮನೆಯ ತಿಂಡಿ, ಊಟ ಮತ್ತಷ್ಟು ಹಿತವಾಗಿರುತ್ತೆ.



Click it and Unblock the Notifications
