Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಊಟ ತಿಂಡಿಗೆ ಘಮ ಘಮ ಎನ್ನುವ ಪುದಿನ ಚಟ್ನಿ ಪುಡಿ ಮಾಡಿ!
ತಿಂಡಿ ಹಾಗೂ ಊಟದೊಂದಿಗೆ ನೀವು ರುಚಿ ರುಚಿಯಾಗಿ ಸಾಂಬಾರ್, ಚಟ್ನಿ, ಗ್ರೇವಿ, ಗೊಜ್ಜು ಸೇರಿದಂತೆ ಹಲವು ರೀತಿಯ ಖಾದ್ಯಗಳ ಮಾಡುವುದು ನೋಡಬಹುದು. ಹಾಗೆ ಸುಲಭವಾಗಿ ಮಾಡಿ ಸವಿಯುವಂತಹ ಹಲವು ಖಾದ್ಯ ಮಾಡಿರಬಹುದು. ಹಾಗೆ ನಾವಿಂದು ಸುಲಭವಾಗಿ ಸವಿಯುವಂತಹ ಚಟ್ನಿ ಕುರಿತು ತಿಳಿದುಕೊಳ್ಳೋಣ.
ಅದ್ರಲ್ಲೂ ನಾವಿಂದು ಈ ಪುದಿನ ಚಟ್ನಿ ಪುಡಿ ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಹಲವು ಅಡುಗೆಗಳಲ್ಲಿ, ಖಾದ್ಯಗಳಲ್ಲಿ ಈ ಪುದಿನ ಬಳಸಿರುತ್ತೀರಿ, ಆದ್ರೆ ಇಂದು ಪುದಿನ ಚಟ್ನಿ ಪುಡಿ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಹಾಗಾದ್ರೆ ಈ ಪುಡಿ ಮಾಡುವುದು ಹೇಗೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಈ ಪುದಿನ ಚಟ್ನಿ ಪುಡಿ ತಿಂಡಿಯೊಂದಿಗೆ ಹಾಗೆ ಊಟದೊಂದಿಗೂ ಬಹಳ ರುಚಿ ನೀಡಲಿದೆ. ಇದನ್ನು ನೀವು ತಿಂಗಳ ಕಾಲ ಇಟ್ಟು ಕೂಡ ಸವಿಯಬಹುದು. ಅದ್ರಲ್ಲೂ ಊಟದೊಂದಿಗೆ ಸವಿಯಲು ಇದು ಬಹಳ ರುಚಿ ನೀಡಲಿದೆ. ಹಾಗಾದ್ರೆ ಇದನ್ನು ಮಾಡುವುದು ಹೇಗೆ? ಇಂದು ಸುಲಭವಾಗಿ ನಾವು ಪುದಿನ ಚಟ್ನಿ ಪುಡಿ ಮಾಡುವುದು ಹೇಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಪುದಿನ ಚಟ್ನಿ ಪುಡಿ ಮಾಡಲು ಬೇಕಾಗುವ ವಸ್ತುಗಳು
- ಪುದಿನ ಸೊಪ್ಪು
- ಕಡಲೆ ಬೇಳೆ
- ಉದ್ದಿನ ಬೇಳೆ
- ಎಣ್ಣೆ
- ಒಣ ಮೆಣಸು
- ಕೊಬ್ಬರಿ ತುರಿ
- ಇಂಗು
- ಉಪ್ಪು
- ಹುಣಸೆ ಹುಳಿ
- ಸಕ್ಕರೆ
ಪುದಿನ ಚಟ್ನಿ ಪುಡಿ ಮಾಡುವುದು ಹೇಗೆ?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟಿ ಬಿಸಿಯಾದ ಬಳಿಕ ಅದಕ್ಕೆ ಅರ್ಧ ಕಪ್ ಕಡಲೆ ಬೇಳೆ ಹಾಕಿ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು. ನಂತರ ಇದನ್ನು ತೆಗೆದಿಟ್ಟು ಬಳಿಕ ಅರ್ಧ ಕಪ್ ಉದ್ದಿನ ಬೇಳೆ ಕೂಡ ಹಾಕಿಕೊಂಡು ಹುರಿದುಕೊಳ್ಳಬೇಕು. ನಂತರ ಇದೇ ಬಾಣಲೆಗೆ ಎಣ್ಣೆ ಹಾಕಿ ಒಣ ಮೆಣಸು ಹಾಕಿ ಗಿರಿ ಗರಿಯಾಗುವವರೆಗೂ ಹುರಿದು ತೆಗೆದಿಟ್ಟುಕೊಳ್ಳಿ.
ಈಗ ಅದೇ ಬಾಣಲೆಗೆ ಪುದಿನ ಸೊಪ್ಪುಗಳ ಹಾಕಿ ಹುರಿದುಕೊಳ್ಳಬೇಕು. ಇದಕ್ಕೂ ಮೊದಲು ಈ ಪುದಿನ ಸೊಪ್ಪನ್ನು ಚೆನ್ನಾಗಿ ತೊಳೆದು ಬಿಡಿಸಿಕೊಂಡಿರಬೇಕು. ಬಾಣಲೆಯಲ್ಲಿ ಇದು ಚೆನ್ನಾಗಿ ಬಾಡಿಕೊಂಡು ಕಡಿಮೆ ಪ್ರಮಾಣದ ಎಲೆಗಳು ಮಾತ್ರವೇ ಉಳಿಯಬೇಕು. ಈಗ ಇದಕ್ಕೆ ಸ್ವಲ್ಪ ಒಣ ಕೊಬ್ಬರಿ ಪುಡಿ ಕೂಡ ಹಾಕಿಕೊಂಡು ಒಟ್ಟಿಗೆ 2 ನಿಮಿಷ ಹುರಿದುಕೊಳ್ಳಿ.
ಈಗ ಮೊದಲೇ ಹುರಿದುಕೊಂಡಿದ್ದ ಎಲ್ಲಾ ವಸ್ತುಗಳನ್ನು ಮತ್ತೆ ಇದಕ್ಕೆ ಹಾಕಿಕೊಂಡು ಹುರಿದುಕೊಳ್ಳಬೇಕು. 1 ನಿಮಿಷದ ಬಳಿಕ ಇಂಗು, ಉಪ್ಪು, ಹುಣಸೆ ಹುಳಿ, 1 ಸ್ಪೂನ್ ಸಕ್ಕರೆ ಕೂಡ ಹಾಕಿ ಮತ್ತೆ 1 ನಿಮಿಷ ಹುರಿದು ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಸ್ವಲ್ಪ ತಣ್ಣಗಾದ ಬಳಿಕ ಮಿಕ್ಸಿ ಜಾರ್ಗೆ ವರ್ಗಾಯಿಸಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಪುದಿನ ಚಟ್ನಿ ರೆಡಿಯಾಗುತ್ತದೆ, ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ತಿಂಡಿಯೊಂದಿಗೆ ಅಥವಾ ಊಟದೊಂದಿಗೆ ಸವಿದು ನೋಡಿ.
ಮಾಡುವುದು ಕೂಡ ಬಹಳ ಸುಲಭ ಹಾಗೆ, ಕಡಿಮೆ ವಸ್ತುಗಳು ಸಾಕಾಗುತ್ತವೆ. ಮತ್ತೆ ಎಲ್ಲರಿಗೂ ಇದು ಇಷ್ಟವಾಗುತ್ತೆ. ಒಂದು ಬಾರಿ ಮಾಡಿದರೆ ತಿಂಗಳ ಕಾಲ ಇಟ್ಟು ಕೂಡ ನೀವು ಸವಿಯಬಹುದು, ಆದರೆ ಕಾಯಿ ಬಳಸುವುದರಿಂದ ಗಾಳಿ ಹೋಗದಂತೆ ಡಬ್ಬಿಯಲ್ಲಿ ಇಡಬೇಕು. ಇಲ್ಲದಿದ್ದರೆ ಬಹುಬೇಗ ಹಾಳಾಗುವ ಸಾಧ್ಯತೆಯೂ ಇರಲಿದೆ.



Click it and Unblock the Notifications
