Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪುಡ್ಡಿಂಗ್ ಮಾಡುವುದು ತುಂಬಾ ಸುಲಭ ಗೊತ್ತಾ, ಈ ಐದೇ ಸಾಮಗ್ರಿ ಇದ್ದರೆ ಸಾಕು!
ಪುಡ್ಡಿಂಗ್ ಯಾರಿಗೆ ತಾನೆ ಇಷ್ಟವಾಗಲ್ಲ, ವಿಶೇಷ ಸಂದರ್ಭದಲ್ಲಿ, ಪುಡ್ಡಿಂಗ್ ತಿನ್ನಬೇಕೆಂದು ಅನಿಸಿದಾಗೆಲ್ಲಾಈ ರುಚಿಯಾದ ಪುಡ್ಡಿಂಗ್ ಸುಲಭದಲ್ಲಿ ಮಾಡಬಹುದು. ಅಲ್ಲದೆ ಈ ಪುಡ್ಡಿಂಗ್ ಮಾಡುವುದು ತುಂಬಾ ಸುಲಭವಾಗಿದೆ ಕೂಡ, ಈ ಪುಡ್ಡಿಂಗ್ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ಸಕ್ಕರೆ
1 ಕಪ್ ನೀರು
8 ಮೊಟ್ಟೆ
1 ಮಿಲ್ಕ್ಮೇಡ್
500 ಗ್ರಾಂ ಹಾಲು
ಮಾಡುವ ವಿಧಾನ
ಸ್ಟೆಪ್ 1
1 ಕಪ್ ಸಕ್ಕರೆಗೆ 1 ಕಪ್ ನೀರು ಸೇರಿಸಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ
ಸಕ್ಕರೆಯ ಬಣ್ಣ ಬದಲಾಗುವಷ್ಟು ಹೊತ್ತು ಸಕ್ಕರೆ ಪಾಕ ಕಾಯಿಸಬೇಕು, ಸಕ್ಕರೆ ಕಂದು
ಬಣ್ಣಕ್ಕೆ ತಿರುಗುವುದು ಅಷ್ಟು ಹೊತ್ತು ಕಾಯಿಸಬೇಕು
ನಂತರ ಅದನ್ನು ಮೌಲ್ಡ್ಗೆ ಸುರಿದು ಸಕ್ಕರೆ ಪಾಕ ಎಲ್ಲಾ ಕಡೆ ಹರಡುವಂತೆ ಮೆಲ್ಲನೆ
ಆ ಪಾತ್ರೆಯನ್ನು ಅಲುಗಾಡಿಸಿ
ಸ್ಟೆಪ್ 2
ಮತ್ತೊಂದು ಬೌಲ್ ತೆಗೆದು ಅದರಲ್ಲಿ 8 ಮೊಟ್ಟೆ ಒಡೆದು ಹಾಕಿ, ಮೊಟ್ಟೆಯ ಬಿಳಿ
ಮಾತ್ರವಲ್ಲ ಹಳದಿ ಕೂಡ ಸೇರಿಸಿ
ಚೆನ್ನಾಗಿ ಕದಡಬೇಕು, ಬೀಟರ್ ಬಳಸಿದರೆ ಇನ್ನೂ ಒಳ್ಳೆಯದು.
ಸ್ಟೆಪ್ 3
400ಗ್ರಾಂ ಹಾಲು ಸೇರಿಸಿ ಮತ್ತೆ ಚೆನ್ನಾಗಿ ಕದಡಿ
ಮಿಲ್ಕ್ಮೇಡ್ ಒಂದು ಡಬ್ಬ ಸೇರಿಸಿ, ಮತ್ತೆ ಚೆನ್ನಾಗಿ ಕದಡಿ,
ಸ್ಟೆಪ್ 4
ಎಲ್ಲಾ ಮಿಶ್ರಣ ಚೆನ್ನಾಗಿ ಕದಡಿದ ಬಳಿಕ ಒಂದು ಜಾರ್ನಲ್ಲಿ ಹಾಕಿಡಿ (ಜಾರ್ನಲ್ಲಿ
ಹಾಕಿದರೆ ಮೌಲ್ಡ್ಗೆ ಸುರಿಯುವುದು ಸುಲಭವಾಗುವುದು)
ನೀವು ಈ ಮಿಶ್ರಣವನ್ನು ಸಕ್ಕರೆ ಪಾಕ ಇರುವ ಮೌಲ್ಡ್ಗೆ ಸುರಿಯುವಾಗ ಸ್ಪೂನ್ ಉಲ್ಟಾ
ಹಿಡಿದು ಅದರ ಮೇಲೆ ಮೆಲ್ಲನೆ ಸುರಿಯಿರಿ, ಹಾಗೇ ನೇರವಾಗಿ ಸುರಿಯಬೇಡಿ, ನೇರವಾಗಿ
ಸುರಿಯುವುದಕ್ಕಿಂತ ಸ್ಪೂನ್ ಉಲ್ಟಾ ಇಟ್ಟು ಸುರಿದರೆ ಈ ಮಿಶ್ರಣ ಸಕ್ಕರೆ ಪಾಕದ
ಮೇಲೆ ನಿಲ್ಲುತ್ತದೆ. ನೀವು ತಯಾರಿಸಿಟ್ಟ ಎಲ್ಲಾ ಮಿಶ್ರಣ ಸುರಿಯಿರಿ
ಸ್ಟೆಪ್ 5
ಈಗ ಈ ಪಾತ್ರೆಯನ್ನು ಮತ್ತೊಂದು ಅಗಲ ಪಾತ್ರೆಯೊಳಗಡೆ ಇಟ್ಟು ನಂತರ ಅಗಲ ಪಾತ್ರೆಗೆ
ನೀರು ತುಂಬಿ (ಮೌಲ್ಡ್ ಪಾತ್ರೆಯ ಅರ್ಧದಷ್ಟು ನೀರು ತುಂಬಿದರೆ ಸಾಕು.
ಸ್ಟೆಪ್ 6
ಈಗ ಪುಡ್ಡಿಂಗ್ ಪಾತ್ರೆ ಸೇರಿದಂತೆ ಅ ಅಗಲ ಪಾತ್ರೆಯನ್ನು ಅಲ್ಯುಮಿನಿಯಂ ಪಾತ್ರೆ
ಜೊತೆ ಕವರ್ ಮಾಡಿ
ಸ್ಟೆಪ್ 7
180 ಡಿಗ್ರಿF ಉಷ್ಣಾಂಶದಲ್ಲಿ ಓವನ್ನಲ್ಲಿ ಬೇಯಿಸಿ, 40 ನಿಮಿಷ
ಬೇಯಿಸಬೇಕಾಗುತ್ತದೆ. ಈಗ ಪುಡ್ಡಿಂಗ್ ಮೌಲ್ಡ್ ತೆಗೆದು ಫ್ರಿಡ್ಜ್ನಲ್ಲಿ
ಒಂದೆರಡು ಗಂಟೆ ಇಡಿ
ನಂತರ ಹೊರ ತೆಗೆದು ಒಂದು ತಟ್ಟೆಗೆ ಮೆಲ್ಲನೆ ಉಲ್ಟಾ ಹಾಕಿ, ಸಕ್ಕರೆ ಪಾಕ
ಮೇಲ್ಬಾಗಕ್ಕೆ ಬರುತ್ತದೆ, ಇಷ್ಟು ಮಾಡಿದರೆ ರುಚಿಯಾದ ಪುಡ್ಡಿಂಗ್ ರೆಡಿ.
ನಂತರ ಕತ್ತರಿಸಿ ಸರ್ವ್ ಮಾಡಿ, ಪುಡ್ಡಿಂಗ್ ಅನ್ನು ಐಸ್ಕ್ರೀಮ್ ಜೊತೆಯೂ
ಸರ್ವ್ ಮಾಡಬಹುದು.



Click it and Unblock the Notifications
