Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪ್ರೋಟೀನ್ಯುಕ್ತ ಕಡಲೆಕಾಯಿ ರವೆ ಉಂಡೆ ಮಾಡುವುದೇಗೆ..? ಇಲ್ಲಿದೆ ರೆಸಿಪಿ
ರವೆ ಉಂಡೆಗೆ ಅದರದ್ದೇ ಆದ ಸ್ಥಾನವಿದೆ. ಹಬ್ಬಗಳಲ್ಲಿ, ಅದರಲ್ಲೂ ಮಹಾಶಿವರಾತ್ರಿ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಹಬ್ಬದಲ್ಲಿ ಲಾಡು ಇಲ್ಲವೆ ರವೆ ಉಂಡೆ ಇರಲೇಬೇಕು. ಆದರೆ ಇದನ್ನು ಕೇವಲ ರವೆಯಿಂದ ಮಾತ್ರ ತಯಾರಿಸುವುದಿಲ್ಲ. ಬದಲಿಗೆ ಹಲವು ಕಾಳುಗಳ ಮಿಶ್ರಣದಿಂದಲೂ ಪ್ರೋಟೀನ್ಯುಕ್ತ ರವೆ ಉಂಡೆಯನ್ನೂ ಮಾಡುತ್ತಾರೆ.
ರವೆ ಉಂಡೆಗೆ ಸ್ವಲ್ಪ ಚೇಂಚ್ ಇರಲಿ ಅಂತ ನ್ಯೂಟ್ರಿಷನ್ ಬೆರೆಸಿ ಕಡಲೇಕಾಯಿ ರವೆ ಉಂಡೆ ತಯಾರಿಸುವುದು ಹೇಗೆ? ಮನೆಯಲ್ಲಿ ಈ ರೀತಿ ರುಚಿಕರವಾದ ರವೆ ಉಂಡೆಯನ್ನು ಮಾಡುವುದು ಹೇಗೆ? ಅದಕ್ಕೆ ಬೇಕಾದ ವಸ್ತುಗಳೇನು? ಪಾಕ ವಿಧಾನದ ಕುರಿತು ನಾವಿಂದು ತಿಳಿದುಕೊಳ್ಳೋಣ.
ಅಗತ್ಯವಿರುವ ವಸ್ತುಗಳು:
- ರವೆ-ಅರ್ಧ ಕಪ್
- ತೆಂಗಿನಕಾಯಿ - 1/ಕೊಬ್ಬರಿ
- ಕಡಲೆಕಾಯಿ - 2 ಚಮಚ
- ಎಳ್ಳು 1 - 100 ಗ್ರಾಂ
- ಏಲಕ್ಕಿ - 2
- ಬೆಲ್ಲ - 1/2 ಕಪ್
- ಉಪ್ಪು - ರುಚಿಗೆ ತಕ್ಕಂತೆ

ಪಾಕವಿಧಾನ:
ಮೊದಲು ತೆಂಗಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಒಂದು ಬಾಣಲೆಯನ್ನು ಒಲೆಯಲ್ಲಿ ಇಟ್ಟು ಅದು ಬಿಸಿಯಾದಾಗ ರವೆ ಹಾಗೂ ಕತ್ತರಿಸಿದ ತೆಂಗಿನಕಾಯಿಯನ್ನು ಸೇರಿಸಿ ಮತ್ತು ಬಣ್ಣ ಬದಲಾಗುವವರೆಗೆ ಹುರಿಯಿರಿ.
ಗಮನಿಸಿ : ತೆಂಗಿನಕಾಯಿ ಹಾಕಿದರೆ ಬೇಗ ಕೆಡುತ್ತದೆ, ಆದರೆ ಕೊಬ್ಬರಿಯನ್ನು ಹುರಿದು ಸೇರಿಸಿದರೆ ಅದು ಬಹಳ ಕಾಲದವರೆಗೂ ಇಡಬಹುದಾಗಿದೆ.
ಮುಂದೆ, ಅದೇ ಬಾಣಲೆಗೆ ರವೆ, ಕಡಲೆಕಾಯಿಯನ್ನು ಸೇರಿಸಿ ಮತ್ತು ಅವುಗಳನ್ನು ಚೆನ್ನಾಗಿ ಹುರಿಯಿರಿ. ಅದೇ ಬಾಣಲೆಯಲ್ಲಿ ಏಲಕ್ಕಿ ಮತ್ತು ಎಳ್ಳನ್ನು ಹುರಿದುಕೊಳ್ಳಿ. ಎಳ್ಳು ಬೀಜಗಳು ತಕ್ಷಣವೇ ಹುರಿಯುತ್ತವೆ. ಆದ್ದರಿಂದ ಎಚ್ಚರಿಕೆಯಿಂದ ಫ್ರೈ ಮಾಡಿ. ಹುರಿದ ಎಲ್ಲಾ ಪದಾರ್ಥಗಳು ತಣ್ಣಗಾಗುವವರೆಗೂ ಇರಿಸಿ.
ನಂತರ ಒಣ ಮತ್ತು ಒದ್ದೆಯಾದ ಮಿಕ್ಸರ್ ಜಾರ್ನಲ್ಲಿ ಎಲ್ಲವನ್ನೂ ಒಂದರ ನಂತರ ಒಂದರಂತೆ ರುಬ್ಬಿಕೊಳ್ಳಿ. ಆದರೆ 2 ಚಮಚ ಹುರಿದ ಎಳ್ಳನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ.
ಗಮನಿಸಿ: ಮೊದಲು ತೆಂಗಿನಕಾಯಿಯೊಂದಿಗೆ ಕೊಬ್ಬರಿಯನ್ನು ರುಬ್ಬಿಕೊಳ್ಳಿ. ನಂತರ ಎಳ್ಳು, ಶೇಂಗಾ, ಬೆಲ್ಲ, ಏಲಕ್ಕಿಯನ್ನು ಪ್ರತ್ಯೇಕವಾಗಿ ರುಬ್ಬಿಕೊಳ್ಳಿ. ನಂತರ ಹುರಿದ ಸಂಪೂರ್ಣ ಎಳ್ಳನ್ನು ಒಂದು ಬಟ್ಟಲಿನಲ್ಲಿ ಎಲ್ಲಾ ಪುಡಿಗಳನ್ನು ಸೇರಿಸಿ ಮತ್ತು ಉಂಡೆ ಮಾಡಲು ಕೈಯಲ್ಲಿ ತೆಗೆದುಕೊಂಡು ವೃತ್ತಾಕಾರವಾಗಿ ತಿರುಗಿಸಿ. ಈಗ ನಿಮ್ಮ ಮುಂದೆ ಕಡಲೇಕಾಯಿ ಉಂಡೆಗಳು ಸಿದ್ಧವಾಗಿರುತ್ತವೆ. ಆರೋಗ್ಯದ ದೃಷ್ಟಿಯಿಂದಲೂ ಇದು ಬಹಳ ಒಳ್ಳೆಯ ಖಾದ್ಯವಾಗಿದೆ.
ಇದೇ ರವೆ ಉಂಡೆಯನ್ನು ಹಾಲಿನ ಪುಡಿ ಬೆರಸಿಯು ಮಾಡಲಾಗುತ್ತದೆ.
- ರವೆ - ಎರಡು ಕಪ್
- ಸಕ್ಕರೆ - ಎರಡು ಕಪ್
- ಕೊಬ್ಬರಿ ತುರಿ- ಒಂದು ಕಪ್
- ಹಾಲಿನ ಪುಡಿ - ನಾಲ್ಕು ದೊಡ್ಡ ಚಮಚ
- ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ
- ಬಾದಾಮಿ
- ರೋಸ್ ವಾಟರ್/ಗುಲಾಬಿ ನೀರು - ಒಂದು ಚಮಚ
- ಕೇಸರಿ ದಳಗಳು - ಅರ್ಧ ಚಮಚ
- ಏಲಕ್ಕಿ ಪುಡಿ ಸ್ವಲ್ಪ
- ಹಾಲು - ಅರ್ಧ ಕಪ್
- ತುಪ್ಪ - ನಾಲ್ಕು ಚಮಚ
ದಪ್ಪ ತಳದ ಅಥವಾ ನಾನ್ ಸ್ಟಿಕ್ ಪಾತ್ರೆಯಲ್ಲಿ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಘಂ ಎನ್ನುವಂತೆ ಚೆನ್ನಾಗಿ ಹುರಿದುಕೊಳ್ಳಿ. ಹದವಾದ ಉರಿಯಲ್ಲಿ ಹುರಿದರೆ ಒಳ್ಳೆಯದು. ಇಲ್ಲವೆಂದರೆ ರವೆ ಸೀದು ಹೋಗುತ್ತದೆ.
ಅದಕ್ಕೆ ಸಕ್ಕರೆ ಸೇರಿಸಿ, ಕೊಬ್ರಿತುರಿ ಮತ್ತು ಹಾಲಿನ ಪುಡಿ ಕೂಡ ಹಾಕಿ. ದ್ರಾಕ್ಷಿ, ಗೋಡಂಬಿ, ಬಾದಾಮಿ, ರೋಸ್ ವಾಟರ್, ಕೇಸರಿ ದಳಗಳು ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಅದಕ್ಕೆ ತುಪ್ಪ ಮತ್ತು ಕಾಲು/ಅರ್ಧ ಕಪ್ ಹಾಲು ಹಾಕಿ ಚೆನ್ನಾಗಿ ಕೈ ಆಡಿಸಿ, ಒಂದೆರಡು ನಿಮಿಷ ಬಿಟ್ಟು ಚೆನ್ನಾಗಿ ತಿರುವಿರಿ. ನಂತರ ಒಲೆಯಿಂದ ಕೆಳಗಿಳಿಸಿ.
ಸ್ವಲ್ಪ ತಣ್ಣಗಾದ ಮೇಲೆ ಹಾಲಿನ / ತುಪ್ಪದ ಕೈನಿಂದ ರವೆಯ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು, ನಿಮಗೆ ಯಾವ ಗಾತ್ರದ ಉಂಡೆ ಬೇಕೋ ಆ ರೀತಿ ಉಂಡೆ ಕಟ್ಟಿರಿ. ರುಚಿಕರವಾದ ರವೆ ಉಂಡೆ ಸವಿಯಲು ತಯಾರ್. ತಣ್ಣಗಾದ ಮೇಲೆ ಸ್ವಲ್ಪ ಟ್ಟಿಯಾಗುತ್ತವೆ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟು ಕೆಲವು ದಿನ ಸ್ಟೋರ್ ಮಾಡಿಟ್ಟುಕೊಂಡು ತಿನ್ನಬಹುದು. ಫ್ರಿಡ್ಜ್ ನಲ್ಲಿ ಇಟ್ಟರೆ ಸುಮಾರು ದಿನ ಇರುತ್ತವೆ.



Click it and Unblock the Notifications
