Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಿಂಪಲ್ ಆಗಿ ಮಾಡಬಹುದು ರುಚಿಕರವಾಗ ಈ ಸೀಗಡಿ ಗೊಜ್ಜು
ಸೀಗಡಿಯಲ್ಲಿ ಹಲವಾರು ರೀತಿಯಲ್ಲಿ ಮಾಡಬಹುದು, ಇಲ್ಲಿ ಸೀಗಡಿ ಮೀನಿನ ಸಿಂಪಲ್ ಗೊಜ್ಜು ರೆಸಿಪಿ ನೀಡಿದ್ದೇವೆ, ಈ ಸೀಗಡಿ ಗೊಜ್ಜು ಸೂಪರ್ ಟೇಸ್ಟ್ ಆಗಿರುತ್ತದೆ, ಆದರೆ ರೆಸಿಪಿ ತುಂಬಾನೇ ಸರಳವಾಗಿದೆ. ಬನ್ನಿ ಸೀಗಡಿ ಮೀನಿನ ಗೊಜ್ಜು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಎಣ್ಣೆ 2 ಚಮಚ
1/2 ಕೆಜಿ ಸೀಗಡಿ ಮೀನು ( ಸ್ವಚ್ಛಗೊಳಿಸಿ ತನ್ನಿ)
1 ಚಮಚ ಖಾರದ ಪುಡಿ
1/2 ಚಮಚ ಕೊತ್ತಂಬರಿ ಪುಡಿ
ಹಸಿ ಮೆಣಸು 2
ಟೊಮೆಟೊ 3-4
ಈರುಳ್ಳಿ 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ
1/2 ಚಮಚ ಉಪ್ಪಿನ ಪುಡಿ
ಹುಣಸೆಹಣ್ಣು (ನಿಂಬೆಹಣ್ಣು ಗಾತ್ರದಷ್ಟು)
ಕರಿಬೇವು
ಸ್ವಲ್ಪ ಸಾಸಿವೆ
ಸ್ವಲ್ಪ ಮೆಂತೆ
ಮಾಡುವ ವಿಧಾನ
- ನೀವು ಸ್ವಲ್ಪ ಅರಿಶಿಣ ಹಾಕಿ ಮೀನನ್ನು ತೊಳೆದು ಇಡಿ
- ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ನೀವು ಸ್ವಲ್ಪ ಮೆಂತೆ ಹಾಕಿ
- ನಂತರ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಈರುಳ್ಳಿ, ಹಸಿ ಮೆಣಸು , ಕರಿಬೇವು , ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಈರುಳ್ಳಿ ಮೆತ್ತಗಾಗುವವರೆಗೆ ಫ್ರೈ ಮಾಡಿ
- ನಂತರ ಟೊಮೆಟೊ ಹಾಕಿ ಟೊಮೆಟೊ ಸಂಪೂರ್ಣ ಮೆತ್ತಗಾಗುವವರೆಗೆ ಫ್ರೈ ಮಾಡಿ, ಬಳಿಕ ಖಾರದಪುಡಿ, ಅರಿಶಿಣ ಪುಡಿ, ಕೊತ್ತಂಬರಿ ಪುಡಿ ಸೇರಿಸಿ ಮಿಕ್ಸ್ ಮಾಡಿ, ಬೇಕಿದ್ದರೆ ಸ್ವಲ್ಪ ಗರಂ ಮಸಾಲ ಕೂಡ ಹಾಕಬಹುದು, ಈಗ ನೀವು ಸೀಗಡಿಯನ್ನು ಹಾಕಿ ಮಿಕ್ಸ್ ಮಾಡಿ 9-10 ನಿಮಿಷ ಬೇಯಿಸಿದರೆ ಸಾಕು, ಸೂಪರ್ ಟೇಸ್ಟ್ನ ಸೀಗಡಿ ಗೊಜ್ಜು ರೆಡಿ.
- 100 ಗ್ರಾಂ ಸೀಗಡಿಯಲ್ಲಿರುವ ಪೋಷಕಾಂಶಗಳು
750 ಕ್ಯಾಲೋರಿ
15.4 ಗ್ರಾಂ ಪ್ರೊಟೀನ್' 0.9ಗ್ರಾಂ ಕೊಬ್ಬಿನಂಶ
1 ಮಿ ಗ್ರಾಂ ಕಬ್ಬಿಣದಂಶ
1ಮಿ ಗ್ರಾಂ ಸತು
13mcg ಅಯೋಡಿಯನ್
30mcg ಸೆಲೆನಿಯಂಸೀಗಡಿಯನ್ನು ಸೇವಿಸುವುದರಿಂದ ದೊರೆಯುವ ಪ್ರಯೋಜನಗಳು
ಇದರಲ್ಲಿ ವಿಟಮಿನ್ ಬಿ, ವಿಟಮಿನ್ ಬಿ 12 ಅಧಿಕವಿದೆ, ಫೋಲೆಟ್ ಅಂಶವಿದ, ಕೆಂಪು ರಕ್ತಕಣಗಳ ಉತ್ಪತ್ತಿಗೆ ಸಹಕಾರಿ, ಇದರಲ್ಲಿ ಚಿಕನ್ನಲ್ಲಿ ದೊರೆಯುವುದರಿಂದ 22 ಪಟ್ಟು ಅಧಿಕ ವಿಟಮಿನ್ ಇ ಇದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಸೀಗಡಿಯನ್ನು ತಿನ್ನುವುದರಿಂದ ಉರಿಯೂತದ ಸಮಸ್ಯೆ ಕಡಿಮೆ ಮಾಡಲು ಸಹಕಾರಿ, ಅಲ್ಲದೆ
ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆ ಇರುವವರು ಸೀಗಡಿ ಸೇವನೆ ಮಾಡುವುದು
ಒಳ್ಳೆಯದು.
ವಾರದಲ್ಲಿ ಎರಡು ಬಾರಿ ಸೇವನೆ ಮಾಡುವುದು ಒಳ್ಳೆಯದು



Click it and Unblock the Notifications
