Latest Updates
-
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?
ಆಲೂಗೆಡ್ಡೆ ಇದ್ರೆ ಸಾಕು! ಈ ರೀತಿ ಸುಕ್ಕಾ ಮಾಡಿ ನೋಡಿ.. ಚಿಕನ್ಗಿಂತಲೂ ಮಸ್ತ್ ಟೇಸ್ಟ್
ಬೋರ್ ಆದ ಚಿಕನ್ ಡಿಶ್ ಬೇಡ! ಈ ಆಲೂ ಸುಕ್ಕಾ ಟ್ರೈ ಮಾಡಿ ನೋಡಿ, ಜಾಸ್ತಿ ಖರ್ಚು ಇಲ್ಲ, ಟೇಸ್ಟ್ ಮಾತ್ರ ಮಸ್ತ್. ಪಲಾವ್, ಸಾಂಬಾರ್ ಜೊತೆ ಸೈಡ್ ಡಿಶ್ಗೆ ಅಥವಾ ಸಂಜೆಯ ಸ್ನ್ಯಾಕ್ಗೆ ಏನಾದರೂ ವಿಶೇಷವಾಗಿ ಮಾಡಬೇಕೆಂದುಕೊಂಡಿದ್ದರೆ, ಆಲೂಗಡ್ಡೆ ಸುಕ್ಕಾ (Potato sukka) ಉತ್ತಮ ಆಯ್ಕೆ. ಸಾಮಾನ್ಯವಾಗಿ ಚಿಕನ್ ಸುಕ್ಕಾ ಮಾಡುವುದು ರೂಢಿ. ಆದರೆ, ಆಲೂಗಡ್ಡೆಯಲ್ಲೂ ಸುಕ್ಕಾ ತಯಾರಿಸಬಹುದು. ಇದರ ರುಚಿ ಚಿಕನ್ ಸುಕ್ಕಾವನ್ನೂ (Chicken sukka) ಮೀರಿಸುವುದು ಗ್ಯಾರಂಟಿ.
ಬಹುತೇಕರಿಗೆ ಆಲೂಗಡ್ಡೆ ಅಚ್ಚುಮೆಚ್ಚಿನ ತರಕಾರಿ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಆಲೂಗಡ್ಡೆಯನ್ನು ಹುರಿಯಲಿ, ಸಾಂಬಾರಾಗಲಿ, ಎಲ್ಲದರಲ್ಲೂ ರುಚಿ. ಇದನ್ನು ಹಲವು ವಿಧಗಳಲ್ಲಿ ಬೇಯಿಸಬಹುದು. ಅದೇ ರೀತಿ ತಯಾರಿಸಬಹುದಾದ ವಿಶೇಷ ರೆಸಿಪಿ ಆಲೂಗಡ್ಡೆ ಸುಕ್ಕಾ. ಈ ಆಲೂಗಡ್ಡೆ ಸುಕ್ಕಾ ಚಿಕನ್ ಸುಕ್ಕಾದಂತೆಯೇ ಇರುತ್ತದೆ. ಇದು ಶುದ್ಧ ಸಸ್ಯಾಹಾರಿ. ಈ ಲೇಖನದಲ್ಲಿ ರುಚಿಕರವಾದ ಆಲೂಗಡ್ಡೆ ಸುಕ್ಕಾವನ್ನು (Potato sukka recipe) ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಲಾಗಿದೆ.

ಆಲೂಗಡ್ಡೆ ಸುಕ್ಕಾಗೆ ಬೇಕಾಗುವ ಸಾಮಗ್ರಿಗಳು
• ಆಲೂಗಡ್ಡೆ - 3
• ಹಸಿ ಬಟಾಣಿ - 2 ಸ್ಪೂನ್
• ಚಿಕ್ಕ ಈರುಳ್ಳಿ - 15
• ಟೊಮೆಟೊ - 1
• ಹಸಿ ಮೆಣಸಿನಕಾಯಿ - 2
• ಶುಂಠಿ - ಒಂದು ಚಿಕ್ಕ ತುಂಡು
• ಬೆಳ್ಳುಳ್ಳಿ - 2 ಎಸಳು
• ಅರಿಶಿನ ಪುಡಿ - 1/2 ಸ್ಪೂನ್
• ಗ್ರಾಮ್ ಮಸಾಲಾ ಪುಡಿ - 1 ಸ್ಪೂನ್
• ಮೆಣಸಿನ ಪುಡಿ - 1 ಸ್ಪೂನ್
• ಕೊತ್ತಂಬರಿ ಸೊಪ್ಪು - ಒಂದು ಹಿಡಿ
• ನಿಂಬೆ ರಸ - 1/2 ಸ್ಪೂನ್
• ಕಡಲೆ ಹಿಟ್ಟು - 1 ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು
• ಎಣ್ಣೆ - 1 ಸ್ಪೂನ್
• ಬಿರಿಯಾನಿ ಎಲೆ - 1
• ಜೀರಿಗೆ - ಅರ್ಧ ಸ್ಪೂನ್
• ಉದ್ದಿನಬೇಳೆ - ಅರ್ಧ ಸ್ಪೂನ್
• ಕಡಲೆಬೇಳೆ - ಅರ್ಧ ಸ್ಪೂನ್
• ಗೋಡಂಬಿ - 5
• ಇಂಗು - ಒಂದು ಚಿಟಿಕೆ
• ಒಣ ಮೆಣಸಿನಕಾಯಿ - 1
• ಕರಿಬೇವಿನ ಸೊಪ್ಪು - ಒಂದು ಕಟ್ಟು

ಆಲೂಗಡ್ಡೆ ಸುಕ್ಕಾ ತಯಾರಿಸುವ ವಿಧಾನ
ಮೊದಲಿಗೆ, ಹಸಿ ಬಟಾಣಿಯನ್ನು ರಾತ್ರಿ ನೆನೆಸಿಡಿ. ಬೆಳಗ್ಗೆ ಅವುಗಳನ್ನು ಬೇಯಿಸಿ. ಅದೇ ರೀತಿ, ಆಲೂಗಡ್ಡೆಯನ್ನೂ ಬೇಯಿಸಿ ಸಿಪ್ಪೆ ತೆಗೆಯಿರಿ. ಆಲೂಗಡ್ಡೆ ತಣ್ಣಗಾದ ನಂತರ ಕೈಗಳಿಂದ ಚೆನ್ನಾಗಿ ಹಿಸುಕಿ ಇಡಿ. ಬಳಿಕ ಈರುಳ್ಳಿ, ಹಸಿ ಮೆಣಸಿನಕಾಯಿ, ಮತ್ತು ಟೊಮೆಟೊಗಳನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ನಂತರ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಜಜ್ಜಿ ಇಡಿ. ಈಗ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ, ಅದು ಕಾದ ನಂತರ ಕರಿಬೇವಿನ ಎಲೆ, ಜೀರಿಗೆ, ಬಿರಿಯಾನಿ ಎಲೆ ಹಾಕಿ ಹುರಿಯಿರಿ. ನಂತರ ಉದ್ದಿನಬೇಳೆ, ಕಡಲೆಬೇಳೆ, ಗೋಡಂಬಿ ಮತ್ತು ಒಣ ಮೆಣಸಿನಕಾಯಿ ಹಾಕಿ ಹುರಿಯಿರಿ.
ಇದಾದ ಮೇಲೆ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಶುಂಠಿ, ಬೆಳ್ಳುಳ್ಳಿ ಸೇರಿಸಿ ಹುರಿಯಿರಿ. ನಂತರ ಟೊಮೆಟೊ ಹಾಕಿ ಚೆನ್ನಾಗಿ ಬೇಯಿಸಿ. ಟೊಮೆಟೊ ಮೃದುವಾದಾಗ ಅರಿಶಿನ ಪುಡಿ, ಗರಮ್ ಮಸಾಲಾ ಮತ್ತು ಮೆಣಸಿನ ಪುಡಿ ಹಾಕಿ ಹುರಿಯಿರಿ. ಮಸಾಲೆಯ ಹಸಿ ವಾಸನೆ ಹೋದ ನಂತರ, ಆಲೂಗಡ್ಡೆ ಮತ್ತು ಬಟಾಣಿ ಹಾಕಿ, ಬೇಕಾದಷ್ಟು ನೀರು ಮತ್ತು ಉಪ್ಪು ಬೆರೆಸಿ. ಕಡಿಮೆ ಉರಿಯಲ್ಲಿ ಕುದಿಯುವವರೆಗೆ ಮುಚ್ಚಿಡಿ.
ಕುದಿಯುವಾಗ, 1 ಚಮಚ ಕಡಲೆ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಮಸಾಲೆಗೆ ಸುರಿಯಿರಿ. ಇದು ಆಲೂಗಡ್ಡೆ ಬೇರ್ಪಡದಂತೆ ಎಲ್ಲವನ್ನೂ ಒಟ್ಟಿಗೆ ಸೇರಿಸುತ್ತದೆ. ಬಳಿಕ ಚೆನ್ನಾಗಿ ಕಲಕಿ, ನಿಂಬೆ ರಸ ಹಾಕಿ. ಇದಾದ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇಷ್ಟು ಮಾಡಿದರೆ ರುಚಿಕರ ಮತ್ತು ಬಿಸಿ ಬಿಸಿಯಾದ ಆಲೂಗಡ್ಡೆ ಸುಕ್ಕಾ ಸಿದ್ಧವಾಗುತ್ತದೆ. ಇದು ಊಟಕ್ಕೆ ಒಂದು ಅದ್ಭುತವಾದ ಸೈಡ್ ಡಿಶ್ (Side dish) ಆಗಲಿದೆ.



Click it and Unblock the Notifications
