Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಒಂದು ಆಲೂಗಡ್ಡೆಯಿಂದ ಮಾಡಿ ಪೊಟೆಟೋ ರೈಸ್..!
ರೈಸ್ ಜೊತೆಗೆ ನೀವು ಯಾವುದೇ ಹೊಸ ವಸ್ತು ಬೆರೆಸಿ ಬೇಕಾದರೂ ಅತ್ಯುತ್ತಮ ರುಚಿಯ ಖಾದ್ಯ ತಯಾರಿಸಬಹುದು. ಹೀಗಾಗಿ ರೈಸ್ನಲ್ಲೇ ನೂರಾರು ಬಗೆಯ ಖಾದ್ಯವನ್ನು ಮಾಡಿ ಸವಿಯ ಬಹುದು. ಜೊತೆಗೆ ಪಟ್ಟಿ ಚಿತ್ರಾನ್ನದಿಂದ ಆರಂಭಗೊಂಡು ಹತ್ತಾರು ಬಗೆಯ ರೈಸ್ ರೆಡಿಯಾಗುತ್ತದೆ. ಅದರಲ್ಲೂ ಬೆಳಗ್ಗೆಯ ತಿಂಡಿಗೆ ರೈಸ್ ಮೂಲಕ ಹಲವು ವಿಧವಾದ ಖಾದ್ಯ ಮಾಡಬಹುದು.
ರೈಸ್ ಮಾಡುವಾಗ ನೀವು ಯಾವ ತರಕಾರಿ ಸೇರಿಸಿದರು ಅದೊಂದು ವಿಶೇಷ ಖಾದ್ಯವಾಗುತ್ತದೆ. ನೀವು ಹಲವು ತರಕಾರಿಗಳ ಸೇರಿಸಿದರೆ ಪಲಾವ್ ಮಾಡಬಹುದು. ಹಾಗೆ ಒಂದೇ ಒಂದು ಆಲೂಗಡ್ಡೆ ಸೇರಿಸಿ ಆಲೂ ರೈಸ್ ಮಾಡಬಹುದು. ಬೆಳಗ್ಗೆಯ ತಿಂಡಿಗೆ ಬಹುಬೇಗ ಯಾವುದಾದರು ತಿಂಡಿ ಮಾಡುವುದಾರೆ ಈ ಆಲೂ ರೈಸ್ ಮಾಡುವುದು ತುಂಬಾನೆ ಸುಲಭ.

ಕೆಲವೇ ವಸ್ತುಗಳ ಬಳಸಿ ಕೆಲವೇ ಸಮಯದಲ್ಲಿ ಈ ಆಲೂ ರೈಸ್ ಮಾಡಬಹದು. ಹಾಗಾದ್ರೆ ನಾವಿಂದು ಈ ಆಲೂ ರೈಸ್ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಈ ಆಲೂ ರೈಸ್ ಮಾಡುವುದು ಹೇಗೆ? ಮಾಡುವ ಪಾಕವಿಧಾನವೇನು? ಎಷ್ಟು ಸಮಯ ಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಆಲೂಗಡ್ಡೆ ರೈಸ್ ಮಡಲು ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ
- ಅನ್ನ - 1 ಬೌಲ್
- ಜೀರಿಗೆ - 1/2 ಟೀಸ್ಪೂನ್
- ಕರಿಬೇವು
- ಕೆಂಪು ಮೆಣಸಿನ ಪುಡಿ - 1/2 ಟೀಸ್ಪೂನ್
- ಅರಿಶಿನ ಪುಡಿ - 1/4 ಟೀಸ್ಪೂನ್
- ಒಣ ಕೆಂಪು ಮೆಣಸಿನಕಾಯಿ - 2
- ಹಸಿರು ಮೆಣಸಿನಕಾಯಿ - 3
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
- ಈರುಳ್ಳಿ - 1
- ಕೊತ್ತಂಬರಿ ಸೊಪ್ಪು - 1/4 ಕಪ್
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಆಲೂ ರೈಸ್ ಮಾಡುವುದು ಹೇಗೆ?
ಮೊದಲು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಸಾಸಿವೆ, ಚಿಕ್ಕದಾಗಿ ಕತ್ತರಿಸಿಕೊಂಡಿರುವ ಆಲೂಗಡ್ಡೆಯನ್ನು ಹಾಕಿ, ಜೊತೆಗೆ ಇದಕ್ಕೆ ಈರುಳ್ಳಿಯನ್ನು ಮತ್ತು ಉಪ್ಪನ್ನು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಸುಮಾರು 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
5 ನಿಮಿಷದ ಬಳಿಕ ಇದಕ್ಕೆ ಹಸಿ ಮೆಣಸಿನಕಾಯಿ, ಒಣ ಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕರಬೇವು, ಅರಶಿಣ, ಖಾರದ ಪುಡಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಒಂದೆರಡು ನಿಮಿಷ ಫ್ರೈ ಮಾಡಿಕೊಂಡ ಬಳಿಕ ನಿಮ್ಮ ಬಳಿ ಇರುವ ಅನ್ನವನ್ನು ಇದಕ್ಕೆ ಹಾಕಿಕೊಳ್ಳಿ.
ಅನ್ನ ಹಾಕಿದ ಬಳಿಕ ಉರಿ ಕಡಿಮೆ ಮಾಡಿ ಚೆನ್ನಾಗಿ ಹುರಿದುಕೊಳ್ಳಿ. ಅಂತಿಮವಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಕಲಸಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿಕರ ಆಲೂ ರೈಸ್ ರೆಡಿಯಾಗಿರುತ್ತದೆ. ಇದು ಬಿಸಿಯಾಗಿದ್ದಾಗಲೇ ಸವಿಯಲು ಬಹಳ ರುಚಿ ನೀಡಲಿದೆ. ಇದನ್ನು ಬಾಕ್ಸ್ಗೂ ಹಾಕಿಕೊಂಡು ಸವಿಯಬಹುದು.
ಇದೇ ರೈಸ್ಗೆ ನೀವು ಮೊಟ್ಟೆಯನ್ನು ಹಾಕಿಯೂ ಮಾಡಬಹುದು. ಆಲೂಗಡ್ಡೆ ಹಾಗೂ ಮೊಟ್ಟೆ ಅತ್ಯುತ್ತಮ ರುಚಿ ನೀಡುತ್ತವೆ. ಇದೇ ರೈಸ್ಗೆ ನೀವು ಬೀಟ್ರೂಟ್ ಸಹ ಬೆರೆಸಬಹುದು. ಆಲೂಗಡ್ಡೆ ಹಾಗೂ ಬೀಟ್ರೂಟ್ ಬೇಯಿಸಿಯು ಹಾಕಬಹುದು. ಇಲ್ಲಿದಿದ್ದರೆ ಹಾಗೆಯೇ ಒಟ್ಟಿಗೆ ಹಾಕಿ ಅನ್ನದ ಜೊತೆಗೆ ಫ್ರೈ ಮಾಡಬಹುದು. ಇದೊಂದು ಸುಲಭದ ಹಾಗೂ ಕಡಿಮೆ ಸಮಯದಲ್ಲಿ ಮಾಡಬಹುದಾದ ರೆಸಿಪಿಯಾಗಿದ್ದು, ಬ್ಯಾಚುಲರ್ಗಳಿಗೆ ಹೇಳಿ ಮಾಡಿಸಿದ ಖಾದ್ಯ ಇದಾಗಿದೆ.



Click it and Unblock the Notifications
