Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಒಂದೇ ಆಲೂಗಡ್ಡೆಯಿಂದ 5 ನಿಮಿಷದಲ್ಲಿ ದೋಸೆ ರೆಡಿ.! ಈ ರೀತಿ ಟೇಸ್ಟಿ ದೋಸೆ ನೀವು ಸವಿದಿರೋದಿಲ್ಲ!
ನೀವು ಬೆಳಗ್ಗೆ ತಿಂಡಿಗೆ ದೋಸೆ ಮಾಡಿ ಸವಿಯಲು ಇಷ್ಟಪಡುವವರಾಗಿದ್ದರೆ ಅದರಲ್ಲೂ ಬಹಳಷ್ಟು ರೀತಿಯ ದೋಸೆಯನ್ನು ಮಾಡಿ ಸವಿದಿರುತ್ತೀರಿ. ಅಪರೂಪಕ್ಕೆ ವಿಶೇಷ ರುಚಿ ನೀಡುವ ವಿಭಿನ್ನ ಬಗೆಯ ದೋಸೆಗಳನ್ನು ಕೂಡ ಮಾಡಿ ಸವಿಯುವುದು ಕಾಮನ್. ಅಲ್ಲದೆ ಈ ದೋಸೆಗಳ ಮಾಡುವಾಗ ಬಹಳಷ್ಟು ಸಮಯದಲ್ಲಿ ಹೆಚ್ಚು ವಸ್ತುಗಳು ಹಾಗೂ ಹೆಚ್ಚು ಸಮಯವೂ ಬೇಕು ಎಂದುಕೊಳ್ಳುತ್ತೀರಿ. ಆದ್ರೆ ಇದೆರಡು ಇಲ್ಲದೆಯೇ ಸುಲಭವಾಗಿ ದೋಸೆ ಮಾಡುವ ವಿಧಾನ ನಿಮಗೆ ಗೊತ್ತಾ?
ಕಡಿಮೆ ವಸ್ತುಗಳ ಬಳಸಿಕೊಂಡು ದೋಸೆ ಮಾಡುವ ಬಗೆ ನಿಮಗೂ ತಿಳಿದಿರಬಹುದು. ಆದ್ರೆ ನಾವಿಂದು ಒಂದೇ ಒಂದು ಆಲೂಡ್ಡೆಯನ್ನು ಬಳಸಿಕೊಂಡು ಅತ್ಯಂತ ರುಚಿಕರವಾದ ದೋಸೆ ಮಾಡಿ ಸವಿಯಬಹುದು. ನೀವು ಹತ್ತಾರು ಬಗೆಯ ದೋಸೆ ಈ ಮೊದಲು ಮಾಡಿ ಸವಿದಿರಬಹುದು, ಆದ್ರೆ ಒಂದೇ ಆಲೂಗಡ್ಡೆ ಬಳಸಿ ಮಾಡುವಂತಹ ಅತ್ಯಂತ ರುಚಿಕರವಾದ ಈ ದೋಸೆಯನ್ನೊಮ್ಮೆ ಟ್ರೈ ಮಾಡಿ ನೋಡಿ.

ನಾವಿಂದು ಬ್ರೇಕ್‌ಫಾಸ್ಟ್ ಸಮಯಕ್ಕೆ ಈ ಅದ್ಭುತ ರುಚಿಯ ದೋಸೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಅದರಲ್ಲೂ ಈ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಇದರ ರುಚಿ ಹೇಗಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಲೂಗಡ್ಡೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಆಲೂಗಡ್ಡೆ - 1
- ಗೋಧಿ ಹಿಟ್ಟು-1 ಕಪ್
- ಇಂಗು
- ಗರಂ ಮಸಾಲ ಪುಡಿ
- ಅರಿಶಿನ ಪುಡಿ
- ಕೆಂಪು ಮೆಣಸಿನ ಪುಡಿ
- ಕರಿಬೇವು
- ಮೆಣಸಿನಕಾಯಿ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಈರುಳ್ಳಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಅಡುಗೆ ಎಣ್ಣೆ
- ರುಚಿಗೆ ತಕ್ಕಷ್ಟು ಉಪ್ಪು
ಆಲೂಗಡ್ಡೆ ದೋಸೆ ಮಾಡುವ ಸುಲಭದ ವಿಧಾನ ಇಲ್ಲದೆ
ಒಂದು ಆಲೂಗಡ್ಡೆ ಅಥವಾ 2ನ್ನು ಬೇಯಿಸಿಕೊಂಡು ಅದರ ಸಿಪ್ಪೆ ತೆಗೆದು ಪುಡಿ ಮಾಡಿಕೊಂಡು ಒಂದು ಬೌಲ್‌ನಲ್ಲಿ ಹಾಕಿಟ್ಟುಕೊಳ್ಳಿ. ಅದಕ್ಕೆ ಒಂದು ಕಪ್ ಗೋಧಿ ಹಿಟ್ಟು ಅಥವಾ ಅಕ್ಕಿ ಹಿಟ್ಟು, ಇಂಗು, ಗರಂ ಮಸಾಲೆ, ಅರಶಿಣ ಪುಡಿ, ಖಾರದ ಪುಡಿ, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಒಮ್ಮೆ ಡ್ರೈ ಮಿಕ್ಸ್ ಮಾಡಿಕೊಂಡ ಬಳಿಕ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟು ದಪ್ಪವಾಗಿರಬೇಕು. ತೆಳುವಾಗಿ ನೀರಾಗಿ ಇರಬಾರದು. ನಿಧಾನವಾಗಿ ಕಲಸಿಕೊಳ್ಳುತ್ತಾ ಹಿಟ್ಟನ್ನು ಹದ ಮಾಡಿಕೊಳ್ಳಿ. ದೋಸೆ ಹಿಟ್ಟು ದಪ್ಪವಾಗಿ ಬಂದ ಮೇಲೆ ದೋಸೆ ಹಾಕಲು ಇದು ರೆಡಿಯಾಗಿದೆ ಎಂದರ್ಥ.
ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಚೆನ್ನಾಗಿ ಕಾಯಲು ಬಿಡಿ. ಕಾವಲಿ ಕಾಯದೇ ಇದ್ದರೆ ದೋಸೆ ಮೇಲೆ ಏಳುವುದಿಲ್ಲ, ಹೆಂಚು ಕಾಯಲು ಬಿಟ್ಟು ಎಣ್ಣೆ ಸವರಿಕೊಂಡು ದೋಸೆ ಹಾಕಲು ಮುಂದಾಗಬೇಕು. ಒಂದೊಂದೇ ದೋಸೆ ಹಾಕಿ ಚೆನ್ನಾಗಿ ಕಾಯಲು ಬಿಡಿ. ಒಂದು ಬದಿಯಲ್ಲಿ ಚೆನ್ನಾಗಿ ರೋಸ್ಟ್ ಮಾಡಬೇಕು. ಅನಂತರ ಇನ್ನೊಂದು ಕಡೆ ಕಾಯಿಸಿಕೊಳ್ಳಿ. ಇದು ಬ್ರೌನ್ ಕಲರ್‌ಗೆ ಬರುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇಷ್ಟದರೆ ತಕ್ಷಣಕ್ಕೆ ಮುಂದೆ ಆಲೂಗಡ್ಡೆ ದೋಸೆ ರೆಡಿಯಾಗುತ್ತದೆ. ನೀವು ಕೂಡ ಮಾಡಿ ನೊಡಿ, ಮಕ್ಕಳಿಗೂ ಇದು ಇಷ್ಟವಾಗುತ್ತೆ.



Click it and Unblock the Notifications
