Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನೀರಿನಲ್ಲಿ ಮಾಡುವ ಪೂರಿ, ಒಂದು ಡ್ರಾಪ್ ಎಣ್ಣೆ ಬಳಸಿಲ್ಲ, ಹೇಗೆ ಮಾಡಿದರು? ಇಲ್ಲಿದೆ ವೈರಲ್ ವೀಡಿಯೋ
ಏನು ಎಣ್ಣೆ ಹಾಕದೆ ಪೂರಿ ಮಾಡಬಹುದೇ? ಕೇಳಿದರೆ ನಂಬುವುದಕ್ಕೆ ಸಾಧ್ಯವಿಲ್ಲ, ಆದರೆ ಇಲ್ಲೊಬ್ಬರು ಮಾಡಿ ತೋರಿಸಿದ್ದಾರೆ, ಆ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ, ಪೂರಿ ಎಂದರೆ ಉಬ್ಬಿ ಬರಬೇಕು, ಅಂದರೆ ಮಾತ್ರ ಪೂರಿ ರುಚಿ, ಆದರೆ ಎಣ್ಣೆ ಹಾಕದೆ ಮಾಡುವ ಈ ಪೂರಿ ರುಚಿಯಲ್ಲಿಯೂ ಸೂಪರ್ ಅಂತ ಅವರು ಹೇಳುತ್ತಿದ್ದಾರೆ, ಆ ಪೂರಿ ನೋಡುವಾಗ ಸೂಪರ್ ಆಗಿ ಕಾಣುತ್ತಿದೆ.
ಎಣ್ಣೆ ಹಾಕದೆ ನೀರಿನಲ್ಲಿ ಮಾಡುವ ಪೂರಿ ಇದಾಗಿರುವುದು ವಿಶೇಷ. ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ, ಮೈ ತೂಕ ಅಧಿಕವಿರುವವರಿಗೆ ಎಣ್ಣೆಯಲ್ಲಿ ಕರಿದ ಆಹಾರ ಒಳ್ಳೆಯದಲ್ಲ. ಆದರೆ ಈ ಪೂರಿಯನ್ನು ಧೈರ್ಯವಾಗಿ ಸವಿಯಬಹುದು. ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿ
1 ಕಪ್ ಗೋಧಿ ಹಿಟ್ಟು
1/4 ಚಮಚ ಪುಡಿ ಉಪ್ಪು
1 ಚಮಚ ಮೊಸರು, ಚಪಾತಿಗೆ ಕಲಿಸಲು ಸ್ವಲ್ಪ ನೀರು
ನೀವು ಮಾಮೂಲಿ ಪೂರಿಗೆ ಕಲಿಸುವಂತೆ ಕಲೆಸಿ, ನಂತರ ಬಟ್ಟೆ ಮುಚ್ಚಿ 15 ನಿಮಿಷ ಬಿಡಿ, ನಂತರ ಪೂರಿಗೆ ತಟ್ಟಿದಂತೆ ತಟ್ಟಿ, ಅದೇ ಸಮಯದಲ್ಲಿ ಒಂದು ಪ್ಯಾನ್ನಲ್ಲಿ ನೀರಿನಲ್ಲಿ ಹಾಕಿ ತೆಗಿಯಿರಿ, ನಂತರ ಏರ್ ಫ್ರೈಯರ್ನಲ್ಲಿಟ್ಟು ಫ್ರೈ ಮಾಡಿದರೆ ಪೂರಿ ರೆಡಿ.
ಇದೀಗ ಎಣ್ಣೆರಹಿತ ಪೂರಿಯ ವೀಡಿಯೋ ವೈರಲ್ ಆಗುತ್ತಿದೆ, ಈ ವೀಡಿಯೋ ನೋಡಿ ನಿಮಗೇನಿಸ್ತು, ಟ್ರೈ ಮಾಡಬೇಕೆಂದು ಅನಿಸಿರಬಹುದಲ್ವಾ?
ಎಣ್ಣೆಯಲ್ಲಿ ಕರಿದ ಆಹಾರಗಳು ತಿಂದರೆ ಉಂಟಾಗುವ
ತೊಂದರೆಗಳು
ಮೈ ತೂಕ ಹೆಚ್ಚಾಗುವುದು
ಎಣ್ಣೆಯಲ್ಲಿ ಕರಿದ ಆಹಾರ ಸೇವಿಸುವುದರಿಂದ ಮೈ ತೂಕ ಹೆಚ್ಚಾಗುವುದು, ಮೈ ತೂಕವನ್ನು
ನಿಯಂತ್ರಿಸಲು ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಬೇಕು.
ಹೃದಯ ಆರೋಗ್ಯಕ್ಕೆ ಒಳ್ಳೆಯದಲ್ಲ
ಎಣ್ಣೆಯಲ್ಲಿ ಕರಿದ ಆಹಾರ ಸೇವಿಸಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ,
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದು, ಇದರಿಂದ ಹೃದಯಕ್ಕೆ ತೊಂದರೆ
ಉಂಟಾಗುವುದು.
ಎಣ್ಣೆಯಲ್ಲಿ ಕರಿದ ಆಹಾರ ಸೇವನೆಯಿಂದ ಆಲಸ್ಯ
ಹೆಚ್ಚಾಗುವುದು
ನೀವು ಗಮನಿಸರಬಹುದು, ಎಣ್ಣೆಯಲ್ಲಿ ಕರಿದ ಆಹಾರ ಸೇವನೆಯಿಂದ ಆಲಸ್ಯ
ಹೆಚ್ಚಾಗುವುದು. ಆದ್ದರಿಂದ ಎಣ್ಣೆ ಪದಾರ್ಥ ಕಡಿಮೆ ಸೇವಿಸುವುದು ಒಳ್ಳೆಯದು.



Click it and Unblock the Notifications
