Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ರಾಮೇಶ್ವರಂ ಕೆಫೆಯಲ್ಲಿ ಪೊಡಿ ಇಡ್ಲಿ ಸವಿದ ಪ್ರಸಿದ್ಧ ಗಾಯಕ ದಿಲ್ಜಿತ್ ದೊಸಾಂಜ್ : ಈ ಇಡ್ಲಿ ಮಾಡುವುದು ಹೇಗೆ?
ದಿಲ್ಜಿತ್ ದೊಸಾಂಜ್ ಪ್ರಸಿದ್ಧ ಗಾಯಕ, ಇವರು ಕಾರ್ಯಕ್ರಮ ನೀಡಲು ಬೆಂಗಳೂರಿಗೆ ಬಂದಾಗ ಅವರು ಮೊದಲು ಸ್ಟಾಪ್ ಮಾಡಿದ್ದೇ ರಾಮೇಶ್ವರಂ ಕೆಫೆ ಬಳಿ, ಅಲ್ಲಿ ಪೊಡಿ ಇಡ್ಲಿ ತಿಂದಿದ್ದಾರೆ, ಅಲ್ಲದೆ ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಡಿ ಇಡ್ಲಿ ದಕ್ಷಿಣ ಭಾರತದ ಪ್ರಸಿದ್ಧ ಆಹಾರದಲ್ಲಿ ಒಂದಾಗಿದೆ, ತಟ್ಟೆ ಇಡ್ಲಿಯಂತೆ ಪೊಡಿ ಇಡ್ಲಿಕೂಡ ಫೇಮಸ್, ಪೊಡಿ ಇಡ್ಲಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಪೊಡಿ ಅಥವಾ ಪುಡಿ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿ
2-3 ಚಮಚ ನೆಲಗಡಲೆ
2 ಚಮಚ ಕಡ್ಲೆ ಬೇಳೆ
2-3 ಒಣ ಮೆಣಸು
1 ಚಮಚ ಎಳ್ಳು
1/4 ಕಪ್ ಕೊಬ್ಬರಿ
1/2 ಚಮಚ ಜೀರಿಗೆ
ಸ್ವಲ್ಪ ಕರಿಬೇವು
ಚಿಕ್ಕ ತುಂಡು ಹುಣಸೆ ಹಣ್ಣು
ಸ್ವಲ್ಪ ಬೆಲ್ಲ
2 ಚಮಚ ತುಪ್ಪ
ಚಿಕ್ಕ ಇಡ್ಲಿ ಅಥವಾಸಾಧಾರಣ ಇಡ್ಲಿ
ನೀವು ಇಡ್ಲಿಗೆ ಪುಡಿ ರೆಡಿ ಮಾಡಿಕೊಳ್ಳಿ
ನೆಲಗಡಲೆ ಹುರಿಯಿರಿ
ಒಣ ಮೆಣಸು ರೋಸ್ಟ್ ಮಾಡಿ, ಕಡ್ಲೆ ಬೇಳೆ ಕೂಡ ಹುರಿಯಬೇಕು
ಈಗ ಎಳ್ಳು ಕೂಡ ಸ್ವಲ್ಪ ರೋಸ್ಟ್ ಮಾಡಿ
ನಂತರ ಒಣ ಕೊಬ್ಬರಿಯನ್ನು ಕೂಡ ಹುರಿಯಬೇಕು, ಹೀಗೆ ಹುರಿಯುವಾಗ ಕರಿಬೇವಿನ ಎಲೆ,
ಹುಣಸೆಹಣ್ಣು ಹಾಕಿ ಹುರಿಯಿರಿ
ಈ ಎಲ್ಲಾ ವಸ್ತುಗಳು ತಣ್ಣಗಾದ ಮೇಲೆ ಮಿಕ್ಸಿ ಜಾರ್ನಲ್ಲಿ ಹಾಕಿ, ಉಪ್ಪು ಸೇರಿಸಿ
ಪುಡಿ ಮಾಡಿ, ರುಬ್ಬುವಾಗ ನೀರು ಸೇರಿಸಲೇಬಾರದು
Tomorrow BENGALURU 🇮🇳
— DILJIT DOSANJH (@diljitdosanjh) December 5, 2024
DIL-LUMINATI TOUR
Year 24 🪷 pic.twitter.com/HlkiowEsno
ಪೊಡಿ ಇಡ್ಲಿ ಮಾಡುವುದು ಹೇಗೆ?
ಇಡ್ಲಿ ರೆಡಯಾದ ಮೇಲೆ ಇಡ್ಲಿ ತಟ್ಟೆಯಿಂದ ಇಡ್ಲಿ ತೆಗೆದು ತಣ್ಣಗಾಗಲು ಬೇರೆ
ಪಾತ್ರೆಗೆ ಹಾಕಿಡಿ
ಈಗ ಒಂದು ಪಾತ್ರೆ ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ, ನಂತರ ಸಾಸಿವೆ ಹಾಕಿ,
ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಇಡ್ಲಿ ಹಾಕಿ ಸ್ಟೌವ್ ಆರ್ಫ್ ಮಾಡಿ
ನಂತರ ಇಡ್ಲಿಯನ್ನು ತಟ್ಟೆಗೆ ಹಾಕಿ ಪುಡಿ ಉದುರಿಸಿ ಬಿಸಿ ಬಿಸಿಯಾಗಿ ಸರ್ವ್
ಮಾಡಿ.
ಇತರ ಸಲಹೆ
- ನೀವು ಈ ಪೊಡಿ ಇಡ್ಲಿ ಮಾಡುವಾಗ ಇಡ್ಲಿ ತುಂಬಾನೇ ಮೃದುವಾಗಿರಬೇಕು, ಮೃದುವಾದ ಇಡ್ಲಿಗೆ ತುಪ್ಪದ ಒಗ್ಗರಣೆ, ಜೊತೆಗೆ ಈ ಪುಡಿ ತಿನ್ನಲು ಸೂಪರ್ ಆಗಿರುತ್ತದೆ.
- ಬೇಕಿದ್ದರೆ ಇದನ್ನು ಸಾಂಬಾರ್ ಕೂಡ ಇಟ್ಟು ಸರ್ವ್ ಮಾಡಬಹುದು, ಆದರೆ ಈ ಪೊಡ್ಲಿ ಇಡ್ಲಿ ಮಾಡಿದರೆ ಸಾಂಬಾರ್ ಬೇಕಾಗಿಲ್ಲ
- ಇದನ್ನು ಮಾಡುವಾಗ ನೀವು ಶುದ್ಧ ತುಪ್ಪವನ್ನೇ ಬಳಸಬೇಕು, ಎಣ್ಣೆ ಹಾಕಿ ಒಗ್ಗರಣೆ ಮಾಡುವುದಕ್ಕಿಂತ ತುಪ್ಪದ ಸ್ವಾದವಿದ್ದರೆ ಸೂಪರ್
- ನೀವು ಇಡ್ಲಿ ಮಾಡಿಟ್ಟು ನಿಮಗೆ ಯಾವಾಗ ಬೇಕೋ ಆವಾಗ ಈ ರೀತಿ ಒಗ್ಗರಣೆ ಹಾಕಿ ಸರ್ವ್ ಮಾಡಬಹುದು. ಆದರೆ ಸರ್ವ್ ಮಾಡುವಾಗ ಮಾತ್ರ ಆಗಷ್ಟೇ ಒಗ್ಗರಣೆ ಹಾಕಿ ಸರ್ವ್ ಮಾಡಿ.
- ಮಿನಿ ಇಡ್ಲಿ ಅಥವಾ ದೊಡ್ಡ ಇಡ್ಲಿ ಯಾವುದೇ ಆದರೂ ಟೇಸ್ಟ್ನಲ್ಲಿ ಸ್ಪೆಷಲ್ ಅನಿಸಲ್ಲ, ಆಕಾರದಲ್ಲಿ ಗಮನ ಸೆಳೆಯುತ್ತೆ. ಕೆಲವರಿಗೆ ಚಿಕ್ಕ ಗಾತ್ರದ ಇಡ್ಲಿ ಇಷ್ಟವಾದರೆ ಇನ್ನು ಕೆಲವರು ಒಂದು ಇಡ್ಲಿ ತಿಂದರೆ ಹೊಟ್ಟೆ ತುಂಬಬೇಕು, ಅಂಥ ಇಡ್ಲಿ ತಿನ್ನಲು ಇಷ್ಟಪಡುತ್ತಾರೆ.



Click it and Unblock the Notifications
