Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೋದಿ ಇಷ್ಟಪಡುವ ಖಿಚಡಿ: 10 ನಿಮಿಷದಲ್ಲಿ ಮನೆಯಲ್ಲಿಯೇ ಮಾಡಿ.. ಇಲ್ಲಿದೆ ಸುಲಭ ರೆಸಿಪಿ
ಪ್ರಧಾನಿ ಮೋದಿಯವರ ಫೇವರಿಟ್ ಖಿಚ್ಡಿ ರೆಸಿಪಿ! ಮನೆಯಲ್ಲೇ ಮಾಡಿ ನೋಡಿ. 10 ನಿಮಿಷವೂ ಹಿಡಿಯಲ್ಲ. ಹೌದು, ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಜೀವನಶೈಲಿ ಸರಳತೆ ಮತ್ತು ಶಿಸ್ತಿಗೆ ಹೆಸರುವಾಸಿ. ಅವರ ಆಹಾರ ಶೈಲಿಯಲ್ಲೂ ಈ ಗುಣಗಳು ಪ್ರತಿಫಲಿಸುತ್ತವೆ. ಮೋದಿ ಅವರ ತಟ್ಟೆಯಲ್ಲಿ ಸಾಮಾನ್ಯವಾಗಿ ಕಾಣಸಿಗುವುದು ಖಿಚಡಿ. ಇದು ಕೇವಲ ರುಚಿಕರವಲ್ಲದೆ ಪೌಷ್ಟಿಕ ಮತ್ತು ಸುಲಭವಾಗಿ ಜೀರ್ಣವಾಗುವಂತಹ ಆಹಾರವಾಗಿದೆ ಹಾಗಿದ್ರೆ, ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ಖಿಚಡಿಯನ್ನು (PM Modi Favourite khichdi) ಮನೆಯಲ್ಲಿಯೇ ಸುಲಭವಾಗಿ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾರೀ ಭಕ್ಷ್ಯಗಳನ್ನು ಇಷ್ಟಪಡುವುದಿಲ್ಲ. ದೇಹ ಮತ್ತು ಮನಸ್ಸಿಗೆ ನೆಮ್ಮದಿ ನೀಡುವಂತಹ ಆಹಾರವನ್ನೇ ಹೆಚ್ಚು ಬಯಸುತ್ತಾರೆ. ಮೋದಿ ಅವರ ಈ ಆಯ್ಕೆಗೆ ಖಿಚಡಿ ಅತ್ಯುತ್ತಮ ಉದಾಹರಣೆ. ಅಕ್ಕಿ, ಬೇಳೆಕಾಳುಗಳು ಮತ್ತು ಲಘು ಮಸಾಲೆಗಳಿಂದ ತಯಾರಾಗುವ ಈ ಖಿಚಡಿ ಆರೋಗ್ಯ ಮತ್ತು ರುಚಿಯ ಪರಿಪೂರ್ಣ ಸಮತೋಲನವಾಗಿದೆ. ಪ್ರಧಾನಿ ಮೋದಿ (PM Modi Birthday) ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರು ಇಷ್ಟಪಡುವಂತಹ ಈ ವಿಶೇಷ ಖಿಚಡಿ ಮಾಡುವ ವಿಧಾನ ಹೀಗಿದೆ. ಇದು 'ಸರಳ ಆಹಾರ' ಎಂಬ ಕಲ್ಪನೆಯನ್ನೇ ವಿಶೇಷವಾಗಿಸುವ ಒಂದು ಅಡುಗೆ.

ಖಿಚಡಿ ತಯಾರಿಸಲು ಬೇಕಾದ ಸಾಮಾಗ್ರಿಗಳು
• ಅಕ್ಕಿ - ½ ಕಪ್
• ಬೇಳೆ (ಹೆಸರುಬೇಳೆ ಅಥವಾ ತೊಗರಿಬೇಳೆ) - ½ ಕಪ್
• ಈರುಳ್ಳಿ (ಹೆಚ್ಚಿದ್ದು) - 1
• ಶುಂಠಿ - 1 ಇಂಚು (ಸಣ್ಣದಾಗಿ ಹೆಚ್ಚಿದ್ದು)
• ಹಸಿ ಮೆಣಸಿನಕಾಯಿ - 1
• ಟೊಮ್ಯಾಟೊ - 1
• ಅರಿಶಿನ ಪುಡಿ - ½ ಚಮಚ
• ಇಂಗು - ಒಂದು ಚಿಟಿಕೆ
• ಜೀರಿಗೆ - 1 ಚಮಚ
• ಉಪ್ಪು - ರುಚಿಗೆ ತಕ್ಕಂತೆ
• ತುಪ್ಪ ಅಥವಾ ಎಣ್ಣೆ
• ನೀರು - ಅಗತ್ಯಕ್ಕೆ ತಕ್ಕಂತೆ
ಮೋದಿ ಅವರ ನೆಚ್ಚಿನ ಖಿಚಡಿ ತಯಾರಿಸುವ ವಿಧಾನ
ಮೊದಲಿಗೆ ಅಕ್ಕಿ ಮತ್ತು ಬೇಳೆಯನ್ನು ಚೆನ್ನಾಗಿ ತೊಳೆಯಿರಿ. ಬಳಿಕ 10 ರಿಂದ 15 ನಿಮಿಷಗಳ ಕಾಲ ನೆನೆಸಿಡಿ. ಈಗ ಒಂದು ಪ್ರೆಶರ್ ಕುಕ್ಕರ್‌ನಲ್ಲಿ ತುಪ್ಪ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ ಅದು ಚಟಪಟ ಎಂದ ನಂತರ, ಹೆಚ್ಚಿದ ಈರುಳ್ಳಿ ಹಾಖಿ. ಅದು ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ, ಹಸಿ ಮೆಣಸಿನಕಾಯಿ ಮತ್ತು ಟೊಮ್ಯಾಟೊ ಹಾಕಿ ಸ್ವಲ್ಪ ಸಮಯ ಹುರಿಯಿರಿ.
ಈಗ ಅರಿಶಿನ ಮತ್ತು ಇಂಗು ಹಾಕಿ. ನಂತರ ನೆನೆಸಿದ ಅಕ್ಕಿ ಮತ್ತು ಬೇಳೆ ಮಿಶ್ರಣವನ್ನು ಕುಕ್ಕರ್‌ಗೆ ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣ ಮುಳುಗುವಷ್ಟು ನೀರು ಹಾಕಿ. ಖಿಚಡಿ ಹೆಚ್ಚು ಗಟ್ಟಿಯಾಗಬೇಕೋ ಅಥವಾ ತೆಳುವಾಗಬೇಕೋ ಎಂಬುದು ನಿಮ್ಮ ಇಷ್ಟದ ಮೇಲೆ ಅವಲಂಬಿತವಾಗಿರುತ್ತದೆ. ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕುಕ್ಕರ್ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ಅಥವಾ 3 ವಿಸಲ್ ಬರುವವರೆಗೆ ಬೇಯಿಸಿ. ಕುಕ್ಕರ್ ತಣ್ಣಗಾದ ನಂತರ ಮುಚ್ಚಳ ತೆರೆಯಿರಿ. ಅದರ ಮೇಲೆ ಸ್ವಲ್ಪ ತುಪ್ಪ ಹಾಕಿ. ನಿಮಗೆ ಇಷ್ಟವಿದ್ದರೆ ಜೀರಿಗೆ ಒಗ್ಗರಣೆ ಹಾಕಬಹುದು.
ಈ ಮೇಲಿನ ವಿಧಾನವನ್ನು ಬಳಸಿ ನೀವು, ಮೋದಿ ಅವರ ನೆಚ್ಚಿನ ಖಿಚಡಿ ತಯಾರಿಸಬಹುದು. ಈ ಖಿಚಡಿಯನ್ನು ಮೊಸರು, ಉಪ್ಪಿನಕಾಯಿ, ಹಪ್ಪಳ ಅಥವಾ ಸೌಮ್ಯ ತರಕಾರಿ ಪಲ್ಯದೊಂದಿಗೆ ಸವಿಯಬಹುದು. ಕೆಲವರು ರುಚಿ ಹೆಚ್ಚಿಸಲು ಬೆಳ್ಳುಳ್ಳಿ ಒಗ್ಗರಣೆ ಸಹ ಹಾಕುತ್ತಾರೆ.



Click it and Unblock the Notifications
