Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಓವನ್ ಬಳಸದೇ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಹೋಮ್ ಮೇಡ್ ಪಿಜ್ಜಾ
ಮಳೆಗಾಲ ಶುರುವಾಯ್ತು ಎಂದರೆ ಸಾಕು ಖಾರ ಖಾರವಾದ ಆಹಾರ ಸೇವಿಸಬೇಕು ಎಂದು ಆಸೆಯಾಗುತ್ತದೆ. ಐಸ್ಕ್ರೀಂಗಳನ್ನು ಬದಿಗಿಟ್ಟು ಪಿಜ್ಜಾ, ಬರ್ಗರ್ ತಿನ್ನಬೇಕು ಎಂಬ ಬಯಕೆ ಮಕ್ಕಳಿಗೂ ಆರಂಭವಾಗುತ್ತದೆ.
ಆದರೆ ಪದೇ ಪದೇ ಮಾರುಕಟ್ಟೆಗಳಲ್ಲಿ ಸಿಗುವ ಪಿಜ್ಜಾವನ್ನು ಮಕ್ಕಳಿಗೆ ಸೇವಿಸಲು ನೀಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದಕ್ಕೆ ಬಳಸುವ ಪದಾರ್ಥಗಳು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ನೀವು ಮನೆಯಲ್ಲಿಯೇ ಮಕ್ಕಳಿಗೆ ಪಿಜ್ಜಾ ತಯಾರಿಸಿಕೊಡಬಹುದು.

ಪಿಜ್ಜಾ ಎಂದಾಕ್ಷಣ ಅನೇಕರು ಓವನ್ ಬೇಕು ನಮ್ಮ ಮನೆಗಳಲ್ಲಿ ಓವನ್ ಇಲ್ಲ ಎಂದು ಚಿಂತೆ ಮಾಡುತ್ತಾರೆ. ಆದರೆ ಓವನ್ ಬಳಸದೆಯೂ ನೀವು ಸುಲಭವಾಗಿ ಪಿಜ್ಜಾ ತಯಾರಿಸಿ ಸವಿಯಬಹುದು. ಹಾಗಾದರೆ ಸುಲಭವಾದ, ರುಚಿಕರವಾದ ಹೋಂ ಮೇಡ್ ಪಿಜ್ಜಾ ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ :
ಬೇಕಾಗುವ ಸಾಮಗ್ರಿಗಳು : ಮೈದಾ ಹಿಟ್ಟು 2 ಕಪ್, ಇನ್ಸ್ಟಂಟ್ ಯೀಸ್ಟ್ 1ಚಮಚ,ಸಕ್ಕರೆ 2ಚಮಚ, ಉಪ್ಪು ರುಚಿಗೆ ತಕ್ಕಷ್ಟು, ನೀರು ಅರ್ಧ ಕಪ್, ಅಡುಗೆ ಎಣ್ಣೆ 1 ಚಮಚ,ಈರುಳ್ಳಿ 4, ಟೊಮೆಟೋ 8 ಒಣ ಮೆಣಸು 10, ಬೆಳ್ಳುಳ್ಳಿ 8 ಎಸಳು, ಕಾರದಪುಡಿ 1ಚಮಚ, ಒರೆಗಾನೋ 1 ಚಮಚ, ಚಿಲ್ಲಿ ಫ್ಲೇಕ್ಸ್ 1 ಚಮಚ , ಟೊಮೆಟೋ ಕೆಚಪ್ 1 ಚಮಚ, ಕ್ಯಾಪ್ಸಿಕಂ ಎರಡು ಬಣ್ಣದ್ದು, ಮೆಕ್ಕೆಜೋಳ 1 ಕಪ್, ಚೀಸ್ 1 ಕಪ್,
ಮಾಡುವ ವಿಧಾನ : ಮೊದಲಿಗೆ ಒಂದು ಪಾತ್ರೆಯಲ್ಲಿ ಸಕ್ಕರೆಯನ್ನು ತೆಗೆದುಕೊಂಡು ಇದಕ್ಕೆ ಬೆಚ್ಚಗಿನ ನೀರನ್ನು ಸೇರಿಸಿಕೊಳ್ಳಿ. ಸಕ್ಕರೆ ಕರಗಿದ ಬಳಿಕ ಇದಕ್ಕೆ ಯೀಸ್ಟ್ ಸೇರಿಸಿ ಕೆಲವು ನಿಮಿಷಗಳ ಅದನ್ನು ಹಾಗೆಯೇ ಬಿಡಿ.
ಈಗ ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಮೈದಾ ಹಿಟ್ಟನ್ನು ಹಾಕಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನೀವು ಈಗಾಗಲೇ ತಯಾರಿಸಿಟ್ಟುಕೊಂಡ ಯೀಸ್ಟ್ ನೀರನ್ನು ಇದಕ್ಕೆ ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. ಬಳಿಕ ಸ್ವಲ್ಪ ಎಣ್ಣೆಯನ್ನು ಸೇರಿಸಿಕೊಂಡು ಮತ್ತಷ್ಟು ಹಿಟ್ಟನ್ನು ನಾದಿ 1 ಗಂಟೆಗಳ ಹಿಟ್ಟನ್ನು ಮುಚ್ಚಿಡಿ.
ಈಗ ನೀವು ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಯಲು ಬಿಡಿ. ಕುದಿಯುತ್ತಿರುವ ನೀರಿಗೆ 5 ಟೊಮೆಟೋ, ಒಣ ಮೆಣಸು ಹಾಗೂ 2 ಈರುಳ್ಳಿಯನ್ನು ಹಾಕಿ 10 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಇವುಗಳು ಬೆಂದು ತಣ್ಣಗಾದ ಬಳಿಕ ಟೊಮೆಟೋ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಳ್ಳಿ. ಮಿಕ್ಸಿ ಜಾರಿಗೆ ಟೊಮೆಟೋ, ಕತ್ತರಿಸಿದ ಈರುಳ್ಳಿ ಹಾಗೂ ಒಣ ಮೆಣಸನ್ನು ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದಕ್ಕೆ ಬೆಳ್ಳುಳ್ಳಿ ಸೇರಿಸಿ ಟೊಮೆಟೋ ಪೇಸ್ಟ್ನ್ನು ಹಾಕಿಕೊಂಡು ಸ್ವಲ್ಪ ಉಪ್ಪನ್ನು ಸೇರಿಸಿ, ಟೊಮೆಟೋ ಕೆಚಪ್,ಕಾರದ ಪುಡಿ, ಚಿಲ್ಲಿ ಫ್ಲೇಕ್ಸ್, ಒರಗಾನೋ ಸೇರಿಸಿ ಕೆಲವು ನಿಮಿಷಗಳ ಕಾಲ ಬೇಯಿಸಲು ಬಿಡಿ.
ಈಗ ನೀವು ಈಗಾಗಲೇ ಯೀಸ್ಟ್ ಹಾಕಿ ಇಟ್ಟಿದ್ದ ಮೈದಾ ಹಿಟ್ಟು ಉಬ್ಬಿದೆಯೇ ಎಂದು ನೋಡಿಕೊಳ್ಳಬೇಕು. ಉಬ್ಬಿದ್ದರೆ ಒಂದು ತುಂಡು ಮೈದಾ ಹಿಟ್ಟನ್ನು ತೆಗೆದುಕೊಂಡು ಅದನ್ನು ರೊಟ್ಟಿಯಂತೆ ಬಡಿದು ಪಿಜ್ಜಾ ಬೇಸ್ ತಯಾರಿಸಿಕೊಳ್ಳಬೇಕು. ಪಿಜ್ಜಾ ಬೇಸ್ಗೆ ರಂಧ್ರ ಮಾಡಲು ಮರೆಯಬೇಡಿ. ಇದಕ್ಕೆ ನೀವು ಪೋರ್ಕ್ ಬಳಸಬಹುದು. ಈಗಾಗಲೇ ತಯಾರಿಸಿಟ್ಟ ಪಿಜ್ಜಾ ಸಾಸ್ನ್ನು ಇದರ ಮೇಲೆ ಲೇಪಿಸಿ. ಇದರ ಮೇಲೆ ನೀವು ಕತ್ತರಿಸಿಟ್ಟುಕೊಂಡ ತರಕಾರಿಗಳು ಹಾಗೂ ಮೆಕ್ಕೆಜೋಳವನ್ನು ಅಲಂಕರಿಸಿ.
ಈಗ ಒಂದು ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿಕೊಳ್ಳಿ. ಅದರ ಮೇಲೆ ಇನ್ನೊಂದು ತವಾ ಇಟ್ಟು ಅದರಲ್ಲಿ ಪಿಜ್ಜಾವನ್ನು ಹಾಕಿ 15 ನಿಮಿಷಗಳ ಕಡಿಮೆ ಉರಿಯಲ್ಲಿ ಬೇಯಿಸಿ. ಮುಚ್ಚಳ ಮುಚ್ಚಿ. ಈಗ ನಿಮ್ಮ ಪಿಜ್ಜಾ ಸವಿಯಲು ಸಿದ್ಧ. ಕತ್ತರಿಸಿ ಇದನ್ನು ಮಕ್ಕಳಿಗೆ ಸವಿಯಲು ನೀಡಿ. ಉತ್ತಮ ಆರೋಗ್ಯಕ್ಕಾಗಿ ನೀವು ಮೈದಾ ಹಿಟ್ಟಿನ ಬದಲು ಗೋಧಿ ಹಿಟ್ಟನ್ನು ಬಳಸಬಹುದು.



Click it and Unblock the Notifications
