Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮನೆಯಲ್ಲೇ ಸುಲಭವಾಗಿ ಪಿಜ್ಹಾ ಮಾಡಬಹುದು..! ಹೇಗೆ ಗೊತ್ತಾ?
ಯುವ ಜನತೆ ಇಂದು ಹೋಟೆಲ್ ಫುಡ್ಗಳಿಗೆ ಸ್ನ್ಯಾಕ್ಸ್ಗಳಿಗೆ ಮಾರು ಹೋಗಿದ್ದಾರೆ. ಅದರಲ್ಲೂ ವಿದೇಶಿ ಫುಡ್ಗಳಾದ ಬರ್ಗರ್, ಫಿಜ್ಹಾ ಹೀಗೆ ಹತ್ತಾರು ರೀತಿಯ ಫುಡ್ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಕೆಲವರಂತು ನಿತ್ಯ ಈ ಫುಡ್ ಸೇವಿಸುತ್ತಾರೆ. ಇನ್ನು ಪಾರ್ಟಿ, ಔಟಿಂಗ್ ಇದ್ದರೆ ಯುವ ಸಮೂಹ ಈ ಪಿಜ್ಹಾ, ಬರ್ಗರ್ ಶಾಪ್ಗಳ ಮುಂದೆ ಸರದಿ ಸಾಲಿಯಲ್ಲಿ ನಿಂತಿರುತ್ತಾರೆ.
ಆದ್ರೆ ಈ ಫುಡ್ಗಳು ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಗಾದ್ರೆ ಇದನ್ನು ನಾವು ಮನೆಯಲ್ಲೇ ಮಾಡಬಹುದಾ? ಹೌದು ಈ ಪಿಜ್ಹಾವನ್ನು ನಾವು ಮನೆಯಲ್ಲೇ ಮಾಡಬಹುದು. ಸಿಂಪಲ್ ರೆಸಿಪಿ ಜೊತೆಗೆ ಒಂದಿಷ್ಟು ವಸ್ತು ಇದ್ದರೆ ರುಚಿ ರುಚಿಯಾಗಿ ಮನೆಯಲ್ಲಿ ಮಾಡಬಹುದು.

ಈ ಪಿಜ್ಹಾ ಮಾಡಲು ಓವನ್ ಅಗತ್ಯವಿಲ್ಲ. ಹಾಗಾದ್ರೆ ಪಿಜ್ಹಾ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಈ ಪಿಜ್ಹಾ ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪಿಜ್ಹಾ ಮಾಡಲು ಬೇಕಾಗುವ ಪದಾರ್ಥಗಳು
- ಮೈದಾ ಹಿಟ್ಟು - 250 ಗ್ರಾಮ್
- ಬೇಕಿಂಗ್ ಪೌಡರ್ - 1 ಚಮಚ
- ಬೆಣ್ಣೆ - ಗೋಲಿ ಗಾತ್ರ
- ಸಕ್ಕರೆ - 2 ಚಮಚ
- ಸೋಡಾ
- ಮೊಸರು- ಸ್ವಲ್ಪ
- ಕಾಳು ಮೆಣಸಿನ ಪುಡಿ - ಚಿಟಿಕೆಯಷ್ಟು
- ಸ್ವೀಟ್ ಕಾರ್ನ್ - 4 ಚಮಚ
- ಟೊಮೆಟೊ- ಸ್ವಲ್ಪ
- ಕ್ಯಾಪ್ಸಿಕಂ- - ಸ್ವಲ್ಪ
- ಈರುಳ್ಳಿ- 1
- ಚೀಸ್
- ಸಾಸ್ (Schezwan Saus)
- ಉಪ್ಪು
- ಎಣ್ಣೆ
ಪಿಜ್ಹಾ ಮಾಡುವುದು ಹೇಗೆ
ಪಿಜ್ಹಾಗೆ ಮೊದಲು ಹಿಟ್ಟು ರೆಡಿ ಮಾಡಿಕೊಳ್ಳಬೇಕು. ಮೊದಲು ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು ತೆಗೆದುಕೊಂಡು ಅದಕ್ಕೆ ಬೇಕಿಂಗ್ ಪೌಡರ್ ಹಾಗೂ ಸೋಡಾ, ಸಕ್ಕರೆ,ಬೆಣ್ಣೆ, ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಂಡು ಚಪಾತಿ ಹಿಟ್ಟಿನಂತೆ ಕಲಸಿಕೊಳ್ಳಿ.
ಜಾಮೂನ್ ಮಾಡಲು ಬೇಕಾಗುವ ಹದದಂತೆ ಹಿಟ್ಟು ಮಾಡಿಕೊಳ್ಳಿ. ಇದನ್ನು ಒಂದು
ಪಾತ್ರೆಯಲ್ಲಿ ಅರ್ಧ ಗಂಟೆ ಮುಚ್ಚಿಡಿ.
ಈಗ ಒಂದು ಪಾತ್ರೆಗೆ ಈರುಳ್ಳಿ, ಟೊಮೆಟೊ, ಜೋಳ, ಕ್ಯಾಪ್ಸಿಕಂ, ಕಾಳುಮೆಣಸಿನ ಪುಡಿ
ಹಾಕಿ ಮಿಕ್ಸ್ ಮಾಡಿ, ಇದರಲ್ಲಿ ಜೋಳವನ್ನು ಸ್ವಲ್ಪ ಬೇಯಿಸಿಕೊಂಡಿರಬೇಕು. ಇದು
ಮಿಕ್ಸ ಆದ ಬಳಿಕ ಹಿಟ್ಟು ತೆಗೆದುಕೊಳ್ಳಿ. ಮೈದಾ ಹಿಟ್ಟು ತೆಗೆದುಕೊಂಡು
ಚಪಾತಿಯಂತೆ ಲಟ್ಟಿಸಿಕೊಳ್ಳಿ.
ರೊಟ್ಟಿಯಂತೆ ದಪ್ಪವಾಗಿ ಲಟ್ಟಿಸಿಕೊಳ್ಳಿ. ಈಗ ಒಲೆ ಮಾಲೆ ಒಂದು ಬಾಣಲೆ ಅಥವಾ ತವಾ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಲಟ್ಟಿಸಿಕೊಂಡ ಹಿಟ್ಟನ್ನು ಅದಕ್ಕೆ ಹಾಕಿಕೊಳ್ಳಿ. 2 ನಿಮಿಷ ಬೇಯಿಸಿಕೊಳ್ಳಿ, ಎರಡೂ ಕಡೆ ಬೇಯಿಸಿಕೊಂಡು ಅದಕ್ಕೆ ಸಾಸ್ ಅನ್ನು ಹಾಕಿ. ಇದಕ್ಕೆ ಟೊಮೆಟೋ ಸಾಸ್ ಸಹ ಬಳಸಬಹುದು.
ಬಳಿಕ ಇದರ ಮೇಲೆ ಚೀಸ್ ಅನ್ನು ಉದ್ದ ಉದ್ದವಾದ ಕಡ್ಡಿಯಂತೆ ಕತ್ತರಿಸಿಕೊಂಡು ಹಾಕಿ. ಬಳಿಕ ಅದರ ಮೇಲೆ ಮಿಕ್ಸ್ ಮಾಡಿಕೊಂಡ ಮಸಾಲೆಗಳನ್ನು ಹಾಕಿಕೊಳ್ಳಿ. ಹಾಕಿದ ಬಳಿಕ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 4 ನಿಮಿಷ ಕಾಯಿಸಿಕೊಳ್ಳಿ. ಬಳಿಕ ಮುಚ್ಚಳ ತೆಗೆದು ನೋಡಿಕೊಳ್ಳಿ. ಹಿಟ್ಟು ಬೆಂದಿದಿಯೇ ನೋಡಿಕೊಳ್ಳಿ. ಇದರ ಮೇಲೆ ನಿಮಗೆ ಯಾವ ಮಸಾಲೆಯಾದರು ಹಾಕಿ ಸವಿಯಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಪಿಜ್ಹಾ ರೆಡಿಯಾಗಿರುತ್ತದೆ.
ಈ ಪಿಜ್ಹಾ ಅಂದ್ರೆ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಇಷ್ಟಪಡುತ್ತಾರೆ. ಕೆಲವೊಂದು ವಸ್ತು ನಿಮ್ಮಲ್ಲಿ ಇಲ್ಲದಿದ್ದರೂ ಈ ಪಿಜ್ಹಾ ಮಾಡಬಹುದು. ಸರಿಯಾಗಿ ಹಿಟ್ಟು ರೆಡಿ ಮಾಡಿಕೊಂರೆ ಹಾಗೂ ಸಾಸ್ ಬಳಸಿದರೆ ಸಾಕು ನೀವು ಎಂತಹ ರುಚಿಕರ ಪಿಜ್ಹಾ ಬೇಕಾದರು ಮಾಡಿಕೊಳ್ಳಬಹುದು.



Click it and Unblock the Notifications
