Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತವಾದಲ್ಲಿಯೂ ರುಚಿಯಾದ ಪಿಜ್ಜಾ ಮಾಡಬಹುದು ನೋಡಿ
ಪಿಜ್ಜಾ... ನೋಡಿದ ತಕ್ಷಣ ಬಾಯಲ್ಲಿ ನೀರೂರುವುದು ಅಲ್ವಾ? ಮಕ್ಕಳಾಗಿರಲಿ-ದೊಡ್ಡವರಾಗಿರಲಿ ಪಿಜ್ಜಾ ಇಷ್ಟಪಟ್ಟು ಸವಿಯುತ್ತಾರೆ. ಈ ಪಿಜ್ಜಾವನ್ನು ಹೊರಗಡೆಯಿಂದ ತರಿಸಿ ಸವಿಯುವುದಕ್ಕಿಂತ ನೀವೇ ಮಾಡಿ ತಿನ್ನಬಹುದು. ನೀವು ಮನೆಯಲ್ಲಿ ಮಾಡುವ ಪಿಜ್ಜಾ ತುಂಬಾನೇ ರುಚಿಯಾಗಿರುತ್ತೆ.

ಹೌದು ನೀವು ಈ ರೆಸಿಪಿ ಫಾಲೋ ಮಾಡಿ ಪಿಜ್ಜಾ ಮಾಡಿದ್ದೇ ಆದರೆ ಸೂಪರ್ ರುಚಿಯ ಪಿಜ್ಜಾ ಸವಿಯಬಹುದು ನೋಡಿ:
Recipe By: Reena TK
Recipe Type: pizza
Serves: 2
-
ಬೇಕಾಗುವ ಸಾಮಗ್ರಿ
* 11/4 ಕಪ್ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು
* 1/4 ಚಮಚ ಬೇಕಿಂಗ್ ಸೋಡಾ
1/2 ಚಮಚ ಸಕ್ಕರೆ
1/4 ಚಮಚ ಉಪ್ಪು
2 ಚಮಚ ಆಲೀವ್ ಎಣ್ಣೆ ಅಥವಾ ಸನ್‌ಪ್ಯೂರ್
1/3 ಕಪ್ ನೀರು + 2 ಚಮಚ
2 ಚಮಚ ಮೊಸರು
ಟಾಪಿಂಗ್‌ಗೆ
* 1/2 ಕಪ್ ಕ್ಯಾಪ್ಸಿಕಂ
1/4 ಕಪ್ ಈರುಳ್ಳಿ
2 ಚಮಚ ಆಲೀವ್
ಮಿಕ್ಸ್ಡ್ ಹರ್ಬ್ಸ್
1/4 ಚಮಚ ಚಿಲ್ಲಿ ಫ್ಲೇಕ್ಸ್
3-4 ಸ್ಲೈಸ್ ಚೀಸ್
ಪಿಜ್ಜಾ ಸಾಸ್ ಮಾಡಲು ಬೇಕಾಗುವ ಸಾಮಗ್ರಿ
* 300 ಗ್ರಾಂ ಟೊಮೆಟೊ ಅಥವಾ 3 ದೊಡ್ಡ ಗಾತ್ರದ ಟೊಮೆಟೋ
* ಚಿಕ್ಕ ಈರುಳ್ಳಿ 1/2
* 2 ಎಸಳು ಬೆಳ್ಳುಳ್ಳಿ ಎಸಳು (ಚಿಕ್ಕದಾಗಿ ಕತ್ತರಿಸಿದ್ದು)
* 11/2 ಚಮಚ ಆಲೀವ್ ಎಣ್ಣೆ
* 1/2ರಿಂದ 3/4 ಚಮಚ ಚಿಲ್ಲಿ ಫ್ಲೇಕ್ಸ್
* 1/4 ಚಮಚ ಕಾಳು ಮೆಣಸಿನ ಪುಡಿ
* ರುಚಿಗೆ ತಕ್ಕ ಉಪ್ಪು
*1/2 ಚಮಚ ಮಿಕ್ಸ್ಡ್ ಹರ್ಬ್ಸ್
* 1/2 ಚಮಚ ಮಿಕ್ಸ್ಡ್ ಹರ್ಬ್ಸ್ ಅಥವಾ ಒರೆಗ್ನೋ
-
ಮಾಡುವ ವಿಧಾನ:
* ಮೈದಾ ಅಥವಾ ಗೋಧಿ ಹಿಟ್ಟು, ಉಪ್ಪು, ಸಕ್ಕರೆ ಮಿಕ್ಸ್ ಮಾಡಿ.
* ಅದಕ್ಕೆ ನೀರು, ಎಣ್ಣೆ, ಮೊಸರು ಆಕಿ.
* ನಂತರ ಹಿಟ್ಟನ್ನು ಮೃದುವಾಗಿ ಕಲೆಸಿ.
* ನಂತರ ಅದನ್ನು ಕವರ್ ಮಾಡಿ ಒಂದು ಗಂಟೆ ಇಡಿ.
ಪಿಜ್ಜಾ ಸಾಸ್ ಮಾಡುವುದು ಹೇಗೆ?
*ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾದ ಮೇಲೆ ಉಳಿದ ಸಾಮ್ರಗ್ರಿ ಹಾಕಿಅದು ಪೇಸ್ಟ್ ರೀತಿ ಆದ ಮೇಲೆ ಸ್ಟೌವ್ ಆಫ್ ಮಾಡಿ.
ಓವನ್ ಇಲ್ಲದೆ ಪಿಜ್ಜಾ ಮಾಡುವುದು ಹೇಗೆ?
* ಪಿಜ್ಜಾವನ್ನು 2-3 ಭಾಗಗಳಾಗಿ ವಿಂಗಡಿಸಿ, ನೀವು ಚಪಾತಿಗೆ ತಟ್ಟುವ ರೀತಿ ತಟ್ಟಿ, ಆದರೆ ಚಪಾತಿಗಿಂತ ಸ್ವಲ್ಪ ದಪ್ಪವಿರಲಿ.
* ಈಗ ತವಾವನ್ನು ಬಿಸಿ ಮಾಡಿ, ತವಾ ಬಿಸಿಯಾದಾಗ ಅದಕ್ಕೆ ತಟ್ಟಿದ ಇಟ್ಟನ್ನು ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ. ಆಗಾಗ ತಿರುಗಿಸಿ-ಮಗುಚಿ ಹಾಕುತ್ತಾ ಬೇಯಿಸಿ.
* ಅದರ ಎರಡೂ ಬದಿ ಬೆಂದ ಮೇಲೆ ಒಂದು ಬದಿಗೆ ಸಾಸ್ ಸವರಿ, ನಂತರ ಕತ್ತರಿಸಿಟ್ಟ ತರಕಾರಿ ಹಾಕಿ, ಚೀಸ್ ಸ್ಪ್ರೆಡ್ ಮಾಡಿ, ಚೀಸ್ ಮೆಲ್ಟ್ ಆಗುವವರೆಗೆ ಬೇಯಿಸಿ.
* ನಂತರ ಬಿಸಿ-ಬಿಸಿ ಇರುವಾಗಲೇ ಸರ್ವ್ ಮಾಡಿ.
- ತವಾದಲ್ಲಿ ಪಿಜ್ಜಾ ಮಾಡಿದರೆ ನೀವು ಓವನ್‌ನಲ್ಲಿ ಮಾಡಿದಷ್ಟೇ ಮೃದುವಾಗಿರುತ್ತೆ, ಬೇಸ್ ಬೇಯಿಸುವಾಗ ಸ್ವಲ್ಪ ಎಣ್ಣೆ ಹಾಕಿ, ಬೇಸ್ ಮೃದುವಾಗಿರುತ್ತೆ.



Click it and Unblock the Notifications
