Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಾಯಲ್ಲಿ ನೀರು ತರಿಸುವ ಪೈನಾಪಲ್ ಗೊಜ್ಜು..! ಮಾಡಿ ನೋಡಿ..!
ನಾವು ಸವಿಯುವ ಹಣ್ಣುಗಳಿಂದ ವಿವಿಧ ರೀತಿಯ ಸಿಹಿ ಖಾದ್ಯ ಮಾಡಿ ಸವಿಯುತ್ತೇವೆ. ಅದ್ರಲ್ಲೂ ಮಾವಿನ ಹಣ್ಣು, ಅನಾನಸ್, ಸೇಬು ಹೀಗೆ ಕೆಲವೊಂದು ಹಣ್ಣುಗಳಿಂದ ಸಿಹಿ ತಿಂಡಿ ಮಾಡಬಹುದು ಎಂಬುದು ನಮಗೆ ತಿಳಿದಿದೆ. ಸೇಬು ಹಣ್ಣಿನಿಂದ ಬರ್ಫಿ ಮಾಡುವುದನ್ನು ಈ ಮೊದಲು ನಾವು ಸಹ ತಿಳಿಸಿದ್ದೆವು. ಆದ್ರೆ ಹಲವು ಹಣ್ಣುಗಳಲ್ಲಿ ಅದ್ಭುತ ರುಚಿಯ ಸ್ವೀಟ್ ಮಾಡಬಹುದು.
ಇನ್ನು ಅನಾನಸ್ ಹಣ್ಣಿನ ಗುಣಗಳ ಬಗ್ಗೆ ತಿಳಿದಿದ್ದೇವೆ. ಅನಾನಸ್ ಕತ್ತರಿಸಿ ಖಾರ, ಉಪ್ಪು ಸಿಂಪಡಿಸಿ ಸವಿಯುವುದು ಎಲ್ಲಿಲ್ಲದ ರುಚಿ ನೀಡುತ್ತದೆ. ಆದ್ರೆ ಅನಾನಸ್ನಿಂದ ಮಾಡುವ ಗೊಜ್ಜು ಎಂತಹ ರುಚಿ ನೀಡಲಿದೆ ಅಂದ್ರೆ ನೀವು ಈ ಗೊಜ್ಜು ಸವಿದರೆ ಮತ್ತೆ ಮತ್ತೆ ಸವಿಯುತ್ತೀರಿ. ಒದು ಅನಾನಸ್ ಹಣ್ಣು ಇದ್ದರೆ ಈ ಅನಾನಸ್ ಗೊಜ್ಜು ಮಾಡಬಹುದು.

ಈ ಗೊಜ್ಜನ್ನ ಅನ್ನದ ಜೊತೆ ಯಾವುದೇ ತಿಂಡಿಯ ಜೊತೆ ಸವಿಯಲು ತುಂಬಾನೆ ರುಚಿ ನೀಡಲಿದೆ. ಸಿಹಿ ಹುಳಿ ಮಿಕ್ಸ್ ಖಾದ್ಯ ಬಾಯಲ್ಲಿ ನೀರು ತರಿಸುತ್ತದೆ. ಹಾಗಾದ್ರೆ ನಾವಿಂದು ಈ ಅನಾನಸ್ ಗೊಜ್ಜು ಮಾಡುವ ಕುರಿತು ತಿಳಿದುಕೊಳ್ಳೋಣ. ಅನಾನಸ್ ಗೊಜ್ಜು ಮಾಡಲು ಯಾವ ಪದಾರ್ಥ ಬೇಕು? ಅನಾನಸ್ ಗೊಜ್ಜು ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪೈನಾಪಲ್ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು
- ಪೈನಾಪಲ್
- ಒಣ ಕೊಬ್ಬರಿ- ಅರ್ಧ ಕಪ್
- ಬೆಲ್ಲ
- ಬ್ಯಾಡಗಿ ಮೆಣಸಿನಕಾಯಿ
- ಹುಣಸೆಹಣ್ಣು
- ಉದ್ದಿನಬೇಳೆ
- ಕಾಳು ಮೆಣಸು
- ಮೆಂತ್ಯ
- ಅರಿಶಿಣದ ಪುಡಿ
- ಎಣ್ಣೆ
- ಸಾಸಿವೆ
- ಕರಿಬೇವಿನ ಸೊಪ್ಪು
- ಉಪ್ಪು
ಪೈನಾಪಲ್ ಗೊಜ್ಜು ಮಾಡುವುದು ಹೇಗೆ?
ಮೊದಲು ಪೈನಾಪಲ್ ಅನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಬೇಕು. ಇಡೀ ಹಣ್ಣು ಬಳಸಿ ಮಾಡಬೇಕು ಎಂದೇನು ಇಲ್ಲ. ಒಲೆ ಮೇಲೆ ಒಂದು ಪಾತ್ರೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಅದಕ್ಕೆ ಮೆಂತ್ಯ ಕಾಳು, ಕಾಳು ಮೆಣಸು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದಿನ ಬೇಳೆ ಹಾಕಿ 2 ನಿಮಿಷ ಫ್ರೈ ಮಾಡಿ.
ಇದಾದ ಬಳಿಕ ಇದಕ್ಕೆ ಒಣಮೆಣಸು, ಒಣ ಕೊಬ್ಬರಿ, ಅರಶಿಣ ಹಾಕಿಕೊಂಡು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ಇಷ್ಟಾದ ಬಳಿಕ ಈ ಪುಡಿಯನ್ನು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ಪುಡಿ ಮಾಡಿ. ಈ ವೇಳೆ ಸ್ವಲ್ಪ ನೀರು ಸಹ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿಕೊಳ್ಳುವುದು ಉತ್ತಮ.
ಈಗ ರುಬ್ಬಿಕೊಂಡ ಮಸಾಲೆಯನ್ನು ಬದಿಗಿಟ್ಟು. ಒಂದು ಬಾಣಲೆಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಒಂದು ಮುಷ್ಟಿಯಷ್ಟು ಹುಣಸೆ ಹಣ್ಣನ್ನು ಕಿವುಚಿ ರೆಡಿ ಮಾಡಿದ ಹುಳಿಯನ್ನು ಹಾಕಿಕೊಳ್ಳಿ. ಅರ್ಧ ಕಪ್ ಹುಳಿ ಇರಲಿ. ಇದಕ್ಕೆ ಸ್ವಲ್ಪ ಬೆಲ್ಲ ಹಾಕಿ, ನಂತರ ಇದಕ್ಕೆ ಕತ್ತರಿಸಿಕೊಂಡ ಪೈನಾಪಲ್ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈ ರೀತಿ 10 ನಿಮಿಷ ಕುದಿಯಲು ಬಿಡಬೇಕು. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ. ಆಗಾಗ ಮಿಕ್ಸ್ ಮಾಡುತ್ತಾ ಇರಿ. 10 ನಿಮಿಷದ ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಂಡ ಮಸಾಲೆಯನ್ನು ಹಾಗೂ ಸ್ವಲ್ಪ ನೀರಿ ಹಾಕಿ ಮಿಕ್ಸ್ ಮಾಡಿ, ಮತ್ತೆ 10 ನಿಮಿಷ ಕುದಿಸಿಕೊಳ್ಳಿ. ಈಗ ಚಿಕ್ಕದಾಗಿ ಒಂದು ಒಗ್ಗರಣೆ ಹಾಕಿ.
ಸಣ್ಣ ಪಾತ್ರೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ. ಸಾಸಿವೆ, ಜೀರಿಗೆ, ಇಂಗು ಹಾಗೂ ಕರಿಬೇವು ಹಾಕಿಕೊಂಡು ಅದನ್ನು ಪೈನಾಪಲ್ ಗೊಜ್ಜಿಗೆ ಹಾಕಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ರುಚಿ ರುಚಿಯ ಪೈನಾಪಲ್ ಗೊಜ್ಜು ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ. ನೀವು ಯಾವುದೇ ಖಾದ್ಯದ ಜೊತೆಗೆ ಇದನ್ನು ಸವಿಯಬಹುದು.



Click it and Unblock the Notifications
