Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಮದುವೆ ಮನೆ ರುಚಿಯ ಅನಾನಸ್ ಚಟ್ನಿ ಮಾಡಿ ನೋಡಿ..! ಎಷ್ಟೊಂದು ರುಚಿಯ ಚಟ್ನಿ!!
ಊಟ ಹಾಗೂ ತಿಂಡಿಗೆ ನಾವು ಒಂದಲ್ಲಾ ಒಂದು ರೀತಿಯ ಚಟ್ನಿ ಸವಿಯುತ್ತೇವೆ. ಬೆಳಗ್ಗೆ ತಿಂಡಿಗೆ ಚಟ್ನಿ ಇದ್ದರೇನೆ ಅದರ ರುಚಿ ದುಪ್ಪಟ್ಟಾಗುವುದು. ಹೀಗಾಗಿ ಯಾವುದೇ ತಿಂಡಿಗೆ ಚಟ್ನಿಯಾಗಿ ಹಲವು ಬಗೆಯಲ್ಲಿ ಮಾಡುತ್ತೇವೆ. ದೋಸೆ, ಚಪಾತಿ, ಇಡ್ಲಿ, ಕಡಬು, ರೊಟ್ಟಿ ಸೇರಿ ಎಲ್ಲಾ ಖಾದ್ಯದ ಜೊತೆಗೆ ಚಟ್ನಿ ಇದ್ದರೆ ಬಹಳ ರುಚಿ ನೀಡಲಿದೆ.
ಅದರಲ್ಲೂ ನಾವು ಹೆಚ್ಚಾಗಿ ತೆಂಗಿನಕಾಯಿ ಚಟ್ನಿ, ಕಡಲೆ ಬೀಜದ ಚಟ್ನಿ, ಹುರಿಗಡಲೆ ಚಟ್ನಿ ಹೀಗೆ ವಿವಿಧ ರೀತಿಯಲ್ಲಿ ಚಟ್ನಿ ಮಾಡಿರುತ್ತೇವೆ. ಬದನೆಕಾಯಿ ಚಟ್ನಿ, ಹೀರೆಕಾಯಿ ಚಟ್ನಿ, ಸೊಪ್ಪಿನಿಂದ ಮಾಡುವ ಚಟ್ನಿ, ಮಾವಿನ ಕಾಯಿ ಚಟ್ನಿ, ಈರುಳ್ಳಿ ಟೊಮೆಟೋ ಚಟ್ನಿ ಸಹ ಮಾಡಿ ಸವಿದಿರುತ್ತೇವೆ.

ಇನ್ನು ನಾವಿಂದು ಅನಾನಸ್ ಹಣ್ಣಿನಿಂದ ಮಾಡುವ ಚಟ್ನಿಯ ಕುರಿತು ತಿಳಿದುಕೊಳ್ಳೋಣ. ಅನಾನಸ್ ಹಣ್ಣಿನ ಜ್ಯೂಸ್ ನೀವು ಸವಿದಿದ್ದರೆ ಅದರ ರುಚಿ ನಿಮಗೆ ಗೊತ್ತಿರುತ್ತೆ. ಹಾಗೆ ಅನಾನಸ್ ಹಣ್ಣಿನಿಂದ ರುಚಿಕರವಾಗಿ ಚಟ್ನಿ ಮಾಡಬಹುದು. ಇದನ್ನು ಚಪಾತಿ, ಪೂರಿ, ದೋಸೆ ಜೊಗೆ ಸವಿಯಲು ಬಹಳ ರುಚಿಕರವಾಗಿರುತ್ತೆ.
ಅನಾನಸ್ ಹಣ್ಣಿನಿಂದ ಮಾಡಲಾಗುವ ಈ ಚಟ್ನಿ ಅದ್ಭುತ ಬಣ್ಣ ಹಾಗು ರುಚಿ ಹೊಂದಿರುತ್ತೆ. ಹಾಗಾದ್ರೆ ಈ ಚಟ್ನಿ ಮಾಡುವುದು ಹೇಗೆ? ಅನಾನಸ್ ಹಣ್ಣಿನಿಂದ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅನಾನಸ್ ಹಣ್ಣಿನಿಂದ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಅನಾನಸ್ - 1 ಹಣ್ಣು
- ಒಣ ಕೊಬ್ಬರಿ
- ಬೆಲ್ಲ
- ಬ್ಯಾಡಗಿ ಮೆಣಸಿನಕಾಯಿ
- ಹುಣಸೆಹಣ್ಣು
- ಉದ್ದಿನಬೇಳೆ
- ಕಾಳು ಮೆಣಸು
- ಮೆಂತ್ಯ ಕಾಳು
- ಅರಿಶಿಣದ ಪುಡಿ
- ಎಣ್ಣೆ
- ಸಾಸಿವೆ
- ಕರಿಬೇವಿನ ಸೊಪ್ಪು
- ಉಪ್ಪು
- ಎಣ್ಣೆ
ಅನಾನಸ್ ಹಣ್ಣಿನಿಂದ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಂದು ಅನಾನಸ್ ಹಣ್ಣನ್ನು ಚೆನ್ನಾಗಿ ಕತ್ತರಿಸಿಕೊಂಡು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದಿ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ನಂತರ ಮೆಂತ್ಯ ಕಾಳು, ಕಾಳು ಮೆಣಸು ಹಾಕಿ 30 ಸೆಕೆಂಡ್ ಬಿಸಿ ಮಾಡಿ. ಈಗ ಉದ್ದಿನ ಬೇಳೆ ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಒಣ ಮೆಣಸು, ಕೊಬ್ಬರಿ ತುರಿ, ಅರಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಿ.
ಈಗ ಫ್ರೈ ಆದ ಮಸಾಲೆ ತಣ್ಣಗಾಗಲು ಬಿಡಬೇಕು. ತಣ್ಣಗಾದ ಬಳಿಕ ಇದನ್ನು ಸಣ್ಣ ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ರುಬ್ಬುವಾಗ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಬಳಿಕ ಇದು ಖಾರದಂತೆ ಕಂಡುಬರುತ್ತದೆ. ಈ ಹದಕ್ಕೆ ಬಂದ ಬಳಿಕ ಅದನ್ನು ತೆಗೆದು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ನಿಂಬೆ ಹಣ್ಣಿನ ಗಾತ್ರದ ಹುಣಸೆ ಹುಳಿ ತೆಗೆದುಕೊಂಡು ಹುಳಿ ಮಾಡಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಬಳಿಕ ಇದಕ್ಕೆ ಹುಣಸೆ ಹುಳಿಯ ನೀರು ಹಾಕಿಕೊಳ್ಳಿ. ನಂತರ 2 ಬೆಲ್ಲದ ಉಂಡೆ ಪುಡಿ ಮಾಡಿ ಹಾಕಿ ದೊಡ್ಡ ದೊಡ್ಡ ಉಂಡೆ ಇದ್ದರೂ ಸಮಸ್ಯೆ ಇಲ್ಲ. ನಂತರ ಇದಕ್ಕೆ ಕತ್ತರಿಸಿಕೊಂಡಿರುವ ಅನಾನಸ್ ಹಣ್ಣು ಹಾಕಿ ಮಿಕ್ಸ್ ಮಾಡಿಕೊಂಡು 10 ನಿಮಿಷ ಕುದಿಯಲು ಬಿಡಿ.
ಈ 10 ನಿಮಿಷದಲ್ಲಿ ತಿರುಗಿಸುತ್ತಾ ಇರಿ, ಹಾಗೆ ಉಪ್ಪು ಸಹ ಹಾಕಿಕೊಂಡು ಬೆಲ್ಲ ಕರಗುವವರೆಗೂ ಕುದಿಸಿ. 10 ನಿಮಿಷದ ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಂಡ ಮಸಾಲೆಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ ಅರ್ಧ ಕಪ್ ನೀರು ಹಾಕಿ 10 ನಿಮಿಷ ಕುದಿಯಲು ಬಿಡಿ. ಕುದಿಯಲು ಆರಂಭಿಸಿದ ಬಳಿಕ ಇದಕ್ಕೆ ಒಗ್ಗರಣೆ ಹಾಕಿ.
ಸಣ್ಣ ಪಾತ್ರೆಗೆ ಎಣ್ಣೆ ಹಾಕಿ, ಇದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಇಂಗು ಹಾಕಿ ಒಲೆ ಆಫ್ ಮಾಡಿ ಈಗ ಒಲೆ ಮೇಲೆ ಇರುವ ಚಟ್ನಿಗೆ ಹಾಕಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ಅನಾನಸ್ ಹಣ್ಣಿನ ಚಟ್ನಿ ರೆಡಿಯಾಗುತ್ತದೆ. ಇದನ್ನು ಒಮ್ಮೆ ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ ನೋಡಿ. ಮದುವೆ ಮನೆಯಲ್ಲಿ ಮಾಡುವ ಈ ಚಟ್ನಿಯ ರುಚಿ ನೀವು ಸವಿದರೆ ಮತ್ತೆ ಮತ್ತೆ ಮಾಡುತ್ತೀರಿ.



Click it and Unblock the Notifications