Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಊಟದ ರುಚಿ ಹೆಚ್ಚಿಸುವ ಮೆಣಸಿನ ತಿಳಿಸಾರು..! ಬಾಯಿ ರುಚಿ ಕೆಟ್ಟಿದ್ದರೆ ಇದೇ ಬೆಸ್ಟ್!
ಊಟದ ಜೊತೆಗೆ ಹಲವು ರೀತಿಯ ಸಾಂಬಾರ್, ಹುಳಿ, ಪಲ್ಯ, ಚಟ್ನಿ ಹೀಗೆ ನಾನಾ ಬಗೆ ಖಾದ್ಯ ಸವಿಯುತ್ತೀರಿ. ಹಾಗೆ ಊಟದ ರುಚಿ ಹೆಚ್ಚಿಸಲೆಂದೇ ಕೆಲವು ಖಾದ್ಯಗಳ ಮಾಡಿ ಸವಿಯುವುದು ನೋಡಬಹುದು. ಅದರಲ್ಲು ಕೆಲವರು ರಸಂ ಅಥವಾ ತಿಳಿಸಾರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗೆ ರಸಂ ಅನ್ನು ಕೂಡ ಹತ್ತಾರು ಬಗೆಯಲ್ಲಿ ಮಾಡಬಹುದು ಎಂಬುದನ್ನು ಸಹ ನೀವು ತಿಳಿದಿದ್ದೀರಿ.
ಊಟದ ಜೊತೆಗೆ ಹಾಗೆ ಊಟದ ನಂತರ ರಸಂ ಅನ್ನು ಕುಡಿದರೆ ಊಟ ಪೂರ್ಣ ಆದಂತಾಗಲಿದೆ. ಹಲವರಿಗೆ ಊಟದ ಜೊತೆಗೆ ರಸಂ ಇರಲೇಬೇಕು. ಅದರಲ್ಲೂ ನೀವು ಸಸ್ಯಹಾರಿ ಹೋಟೆಲ್ನಲ್ಲಿ ಸವಿಯುವ ರಸಂ ರುಚಿಗೆ ಫಿದಾ ಆಗಿರುತ್ತೀರಿ. ಈ ರುಚಿಯ ರಸಂ ಅನ್ನು ನೀವು ಸಹ ಸವಿದಿರಬಹುದು. ಹಾಗೆ ಮನೆಯಲ್ಲಿ ಮಾಡಿ ಸವಿಯುವ ರಸಂ ಬಹಳ ರುಚಿ ನೀಡಲಿದೆ.

ಆದ್ರೆ ನಾವಿಂದು ವಿಭಿನ್ನ ರುಚಿಯಲ್ಲಿ ಮಾಡುವ ರಸಂ ಕುರಿತಾಗಿ ತಿಳಿದುಕೊಳ್ಳೋಣ. ಅದರಲ್ಲೂ ಮೆಣಸಿನ ತಿಳಿ ಸಾರು ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಮೆಣಸಿನ ತಿಳಿಸಾರು ಹಲವು ಕಾಲದಿಂದ ಮಾಡಿಕೊಂಡು ಬಂದ ರೆಸಿಪಿ. ಊಟದ ಕೊನೆಯಲ್ಲಿ ಒಂದು ತುತ್ತಾದರು ಈ ಮೆಣಸಿನ ತಿಳಿಸಾರಿನಲ್ಲಿ ಸವಿಯುವ ಸಂಪ್ರದಾಯವೂ ಇದೆ. ಹಾಗಾದ್ರೆ ಈ ಮೆಣಸಿನ ತಿಳಿಸಾರು ಮಾಡೋದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮೆಣಸಿನ ತಿಳಿಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮೆಣಸಿನ ತಿಳಿಸಾರು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಟೊಮೊಟೋ - 2
- ಕಾಳು ಮೆಣಸು
- ಜೀರಿಗೆ
- ಬೆಳ್ಳುಳ್ಳಿ
- ಹುಣಸೆ ಹುಳಿ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಎಣ್ಣೆ
- ಸಾಸಿವೆ
- ಇಂಗು
- ಒಣ ಮೆಣಸು
- ಅರಿಶಿನ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
ಮೆಣಸಿನ ತಿಳಿಸಾರು ಮಾಡುವ ವಿಧಾನವೇನು?
ಮೊದಲು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಇಂಗು, ಕರಿಬೇವು, ಒಣ ಮೆಣಸು ಹಾಕಿಕೊಂಡು ಅರ್ಧ ನಿಮಿಷ ಬಿಸಿ ಮಾಡಿ. ನಂತರ ಎರಡು ಟೊಮೆಟೋ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಿ. ನಂತರ ಅರಶಿಣ, ಉಪ್ಪು ಸಹ ಹಾಕಿ ಚೆನ್ನಾಗಿ 3ರಿಂದ 4 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕಾಳು ಮೆಣಸು, ಬೆಳ್ಳುಳ್ಳಿ ಹಾಕಿಕೊಂಡು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಈ ಸಮಯದಲ್ಲಿ ಬಾಣಲೆಯಲ್ಲಿ ಇರುವ ಟೊಮೆಟೋ ಚೆನ್ನಾಗಿ ಬೆಂದಿರುತ್ತದೆ. ಈಗ ಒಂದು ಕಪ್ನಲ್ಲಿ ನಿಂಬೆ ಹಣ್ಣು ಗಾತ್ರದ ಹುಣಸೆ ಹುಳಿಯನ್ನು ನೆನೆಸಿ ಅದನ್ನು ಚೆನ್ನಾಗಿ ಕಲಸಿ ಬಾಣಲೆಯಲ್ಲಿರುವ ಟೊಮೆಟೋ ಜೊತೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಮಿಕ್ಸಿ ಜಾರ್ನಲ್ಲಿ ಪುಡಿ ಮಾಡಿಟ್ಟ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಕೊತ್ತಂಬರಿ ಸೊಪ್ಪು ಸಹ ಮೇಲೆ ಹಾಕಿಕೊಂಡು ಚೆನ್ನಾಗಿ ಕುದಿಬರಲು ಬಿಡಿ. ಸುಮಾರು 6ರಿಂದ 8 ನಿಮಿಷ ಕುದಿಬಂದರೆ ಸಾಕಾಗುತ್ತದೆ. ಈ ಸಮಯದಲ್ಲಿ ಒಲೆ ಆಫ್ ಮಾಡಿಕೊಂಡು ತಿರುಗಿಸಿ ಉಪ್ಪು ರುಚಿ ನೋಡಿಕೊಂಡರೆ ನಿಮ್ಮ ಮುಂದೆ ಈ ಮೆಣಸಿನ ರಸಂ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಈ ರೀತಿ ರಸಂ ಮಾಡಿ ನೋಡಿ.
ಎಲ್ಲಾ ಊಟದ ಜೊತೆಗೆ ಹಾಗೆ ಲೋಟಕ್ಕೆ ಹಾಕಿ ಊಟದ ನಂತರ ಸವಿಯಬಹುದು. ಆರೋಗ್ಯಕ್ಕೂ ಕೂಡ ಇದು ಬಹಳ ಉತ್ತಮ ರಸಂ ಆಗಿದೆ, ನೀವು ಕೂಡ ಮನೆಯಲ್ಲಿ ಸವಿದು ನೋಡಿ.



Click it and Unblock the Notifications
