Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ರೆಸಿಪಿ: ತುಂಬಾ ಸುಲಭವಾಗಿ ಮಾಡಬಹುದು ಬಟಾಣಿ ಪಲಾವ್
ನೀವು ಬಟಾಣಿ ಪಲಾವ್ ರೆಸ್ಟೋರೆಂಟ್ಗಳಲ್ಲಿ ಸವಿಯಲು ಬಯಸಿದರೆ ತುಂಬಾನೇ ದುಬಾರಿಯಾಗಿರುತ್ತದೆ, ಆದರೆ ನೀವು ತುಂಬಾ ಸುಲಭವಾಗಿ ಈ ಬಟಾಣಿ ಪಲಾವ್ ಮನೆಯಲ್ಲಿಯೇ ಮಾಡಿ ಸವಿಯಬಹುದು. ಈ ಪಟಾಣಿ ಪಲಾವ್ಗೆ ಕುರ್ಮಾ ಕರಿ, ಮೊಸರು ಬಜ್ಜಿ , ಪಕೋಡಾ ಈ ಬಗೆಯ ಕಾಂಬಿನೇಷನ್ ತುಂಬಾ ಚೆನ್ನಾಗಿರಲಿದೆ.

ಬೇಕಾಗುವ ಸಾಮಗ್ರಿ
1 ಕಪ್ ಬಟಾಣಿ
1 ಕಪ್ ಬಾಸುಮತಿ ಅಕ್ಕಿ
3 ಚಮಚ ತುಪ್ಪ ಅಥವಾ ಎಣ್ಣೆ
1 ಚಮಚ ಜೀರಿಗೆ
ಚಕ್ಕೆ
ಲವಂಗ
ನಕ್ಷತ್ರ ಮೊಗ್ಗು
ಈರುಳ್ಳಿ 2
ಹಸಿ ಮೆಣಸು 2-3
ಉಪ್ಪು
1/2 ಚಮಚ ಅರಿಶಿಣ(ಬಳಸದೆಯೂ ಇರಬಹುದು, ಅರಿಶಿಣ ಬಳಸಿದರೆ ಬಟಾಣಿ ಪಲಾವ್ ಹಳದಿ
ಬಣ್ಣದಲ್ಲಿರುತ್ತದೆ)
ಕೊತ್ತಂಬರಿ ಸೊಪ್ಪು
ಪುದೀನಾ ಸೊಪ್ಪು
ಬಟಾಣಿ ಪಲಾವ್ ಮಾಡುವ ವಿಧಾನ
ಒಂದು ಕಪ್ ಬಾಸುಮತಿ ಅಕ್ಕಿಯನ್ನು ತೊಳೆದು ನೀರು ಸೋಸಿ
ಕುಕ್ಕರ್ಗೆ 3 ಚಮಚ ತುಪ್ಪ ಅಥವಾ ಎಣ್ಣೆ ಹಾಕಿ
ಎಣ್ಣೆ ಬಿಸಿಯಾದಾಗ ಚಕ್ಕೆ, ಲವಂಗ, ನಕ್ಷತ್ರ ಮೊಗ್ಗು ಹಾಕಿ
1 ಚಮಚ ಜೀರಿಗೆ ಹಾಕಿ
1 -2 ಏಲಕ್ಕಿ ಕೈಯಿಂದ ಹಿಸುಕಿ ಹಾಕಿ
ಈ ಮಸಾಲೆ 1-2 ನಿಮಿಷ ಫ್ರೈ ಮಾಡಿ
ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ, ಪುದೀನಾ ಪೇಸ್ಟ್ ಸೇರಿಸಿ, ಅದರ ಹಸಿ ವಾಸನೆ
ಹೋಗುವವರೆಗೆ ಫ್ರೈ ಮಾಡಿ, ನಂತರ ಈರುಳ್ಳಿ , ಹಸಿ ಮೆಣಸು ಹಾಕಿ ಸ್ವಲ್ಪ ಕಂದು
ಬಣ್ಣಕ್ಕೆ ಬರುವಾಗ, ಹಸಿ ಬಟಾಣಿ ಹಾಕಿ.
ನಂತರ ಸ್ವಲ್ಪ ಅರಿಶಿಣ ಸೇರಿಸಿ ಬಳಿಕ ಅಕ್ಕಿ ಹಾಕಿ, ರುಚಿಗೆ ತಕ್ಕ ಉಪ್ಪು (ಚಿಕ್ಕ ಚಮಚದಲ್ಲಿ ಒಂದೂವರೆ ಚಮಚ) ಹಾಕಿ ಮತ್ತೆ 1-2 ನಿಮಿಷ ಫ್ರೈ ಮಾಡಿ.
ನಂತರ ಒಂದು ಲೋಟ ಅಕ್ಕಿಗೆ ಎರಡು ಲೋಟ ನೀರು ಹಾಕಿ ಎರಡು ವಿಶಲ್ ಬರಿಸಿ (ಅಕ್ಕಿ ಬೇಗ ಬೇಯುವುದಾದರೆ ಒಂದು ವಿಶಲ್ ಸಾಕು)
ನಂತರ ಕುಕ್ಕರ್ನ ಆವಿ ಹೋದ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಟಾಣಿ ಪಲಾವ್ ರೆಡಿ.
ಟಿಪ್ಸ್
ಅಕ್ಕಿ: ನೀವು ಬಟಾಣಿ ಪಲಾವ್ ಮಾಡುವಾಗ ಬಾಸುಮತಿ ಅಕ್ಕಿ
ಬಳಸಿದರೆ ಒಳ್ಳೆಯದು, ಇತರ ಅಕ್ಕಿ ಅಷ್ಟು ರುಚಿಯಾಗುವುದಿಲ್ಲ ಅಥವಾ ಅಂಟು
ಅಂಟಾಗಬಹುದು, ಸೋನಾ ಮಸೂರಿ ಅಕ್ಕಿ ಬಳಸಬಹುದು. ಬೇಯಿಸಿದಾಗ ಅನ್ನ ಬಿಡಿ ಬಿಡಿ
ಇರಬೇಕು, ಅಂಥ ಅಕ್ಕಿಯನ್ನೇ ಬಳಸಬೇಕು.
ಬಟಾಣಿ: ಹಸಿ ಅಥವಾ ಫ್ರೋಝನ್ ಬಟಾಣಿ ಬಲಸಬೇಕು. ಆದರೆ ಒಣ
ಬಟಾಣಿಯನ್ನು ನೀರಿನಲ್ಲಿ ನೆನೆ ಹಾಕಿ ಬಳಸಿದರೆ ಆ ರುಚಿ ಸಿಗುವುದಿಲ್ಲ.
ಪುದೀನಾ ಬಳಸಿ: ಪಲಾವ್ ಮಾಡಿದಾಗ ಪುದೀನಾ ಬಳಸಿ, ಪುದೀನಾ ಪೇಸ್ಟ್ ಮಾಡಿ ಈರುಳ್ಳಿ ಫ್ರೈ ಮಾಡುವಾಗ ಹಾಕಿ. ನಂತರ ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಬಳಸಿ.
ನೀರು: ನೀವು ಎಷ್ಟು ಅಕ್ಕಿ ಬಳಸುತ್ತೀರೋ ಅದರ ಎರಡು ಪಟ್ಟು ನೀರು ಬಳಸಿ.
ಇತರ ಟಿಪ್ಸ್
ಅಕ್ಕಿಯನ್ನು ಅಧಿಕ ನೀರು ಹಾಕಿ 2-3 ಬಾರಿ ತೊಳೆಯಬೇಕು, ಇದರಿಂದ ಅಕ್ಕಿ
ಅಂಟುವುದಿಲ್ಲ
ಅಕ್ಕಿಯನ್ನು 20-30 ನಿಮಿಷ ನೆನೆಹಾಕಿ, ಅಕ್ಕಿಯನ್ನು ನೆನೆ ಹಾಕದಿದ್ದರೆ ನೀರು
ಸ್ವಲ್ಪ ಅಧಿಕ ಹಾಕಬೇಕು, ಅಕ್ಕಿಯನ್ನು ನೆನೆ ಹಾಕಿದ್ದರೆ ಎರಡು ಪಟ್ಟು ಬಳಸಿದರೆ
ಸಾಕು.
ನೀವು ಇತರ ತರಕಾರಿ ಬಳಸಬಹುದು
ನೀವು ಬಟಾಣಿ ಮಾತ್ರ ಹಾಕಿ ಮಾಡಬಹುದು ಅಥವ ಆ ಕ್ಯಾರೆಟ್, ಬೀನ್, ಆಲೂಗಡ್ಡೆ
ಹಾಗೆ ಇತರ ತರಕಾರಿ ಬಳಸಿಯೂ ಈ ಪಲಾವ್ ತಯಾರಿಸಬಹುದು, ಬರೀ ಬಟಾಣಿ ಬಳಸಿ ಮಾಡಿದರೆ
ಅದರ ಜೊತೆ ಒಳ್ಳೆಯ ಗ್ರೇವಿ ಇದ್ದರೆ ರುಚಿ ತುಂಬಾ ಬೊಂಬಾಟ್ ಆಗಿರುತ್ತದೆ.



Click it and Unblock the Notifications
